ಚಿತ್ರಕಲಾ ಪದವೀಧರರ ಧರಣಿ

ಮಂಗಳವಾರ, ಜೂಲೈ 23, 2019
22 °C

ಚಿತ್ರಕಲಾ ಪದವೀಧರರ ಧರಣಿ

Published:
Updated:

ಗುಲ್ಬರ್ಗ: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಪ್ರೌಢಶಾಲೆಗಳಲ್ಲಿ ವಿವಿಧ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಕರ್ನಾಟಕ ವಸತಿ ಶಿಕ್ಷಣ ಸಂಘವು ಏಪ್ರಿಲ್, 2011ರಂದು ಅಧಿಸೂಚನೆ ಹೊರಡಿಸಿತ್ತು.ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿಳಂಬ ನೀತಿಯನ್ನು ಕೈಬಿಟ್ಟು ಕೂಡಲೇ ಚಿತ್ರಕಲಾ ಶಿಕ್ಷಕರ ಆಯ್ಕೆಪಟ್ಟಿಯನ್ನು ಪ್ರಕಟಿಸಬೇಕು ಎಂದು ಅಖಿಲ ಕರ್ನಾಟಕ ಚಿತ್ರಕಲಾ ವಿದ್ಯಾರ್ಥಿ ಪದವೀಧರ ಹೋರಾಟ ಸಮಿತಿ ಜಿಲ್ಲಾ ಘಟಕದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ಇನ್ನಿತರೆ ವಿಷಯವಾರು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು, ಚಿತ್ರಕಲಾ ಶಿಕ್ಷಕರ ನೇಮಕಾತಿ ಮಾತ್ರ ಆರಂಭಿಸಿಲ್ಲ. ಚಿತ್ರಕಲಾ ಶಿಕ್ಷಕರಾಗಬೇಕು ಎಂದು ಚಾತಕ ಪಕ್ಷಿಯಂತೆ ಕಾಯ್ದು ಕುಳಿತವರಿಗೆ ನಿರಾಸೆ ಉಂಟಾಗಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರು ಒತ್ತಾಯಿಸಿದರು.ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ, ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಬಾಬುರಾವ ಟಿ. ಚವ್ಹಾಣ, ಗುಂಡೆರಾವ ಪಾಟೀಲ, ಮಂಜುನಾಥ ಟಿ. ಹೊಸಮನಿ, ಭರತ ಸಾಂಗವಿಕರ, ವಿಜಯಕುಮಾರ ರಾಜನಾಳ, ಉದಯಕುಮಾರ ಬಂಡಗಾರ, ರಾಜಕುಮಾರ ಹೊಡೆಲಕರ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry