ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಾ ಕಪ್‌: ರುದ್ರ, ಹೇಮಂತ್‌ಗೆ ಗೆಲುವು

ಮಂಗಳೂರಿನ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ಟೂರ್ನಿ; ಕಾರ್ತಿಕ್‌ –ರಾಜಿತ್ ಜೋಡಿ ಪಾರಮ್ಯ
Published 10 ಮೇ 2024, 16:26 IST
Last Updated 10 ಮೇ 2024, 16:26 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯ ರ‍್ಯಾಂಕಿಂಗ್‌ ಆಟಗಾರರಾದ ರುದ್ರ ಶಾಹಿ ಮತ್ತು ಹೇಮಂತ್ ಗೌಡ ಇಲ್ಲಿ ಶುಕ್ರವಾರ ಆರಂಭಗೊಂಡ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದ ಮಂಗಳಾ ಕಪ್ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಾರಮ್ಯ ಮೆರೆದರು.

ನಗರದ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮೈಸೂರಿನ ರಾಮೇಶ್ವರ್ ಬ್ಯಾಡ್ಮಿಂಟನ್ ಸಂಸ್ಥೆಯ ರುದ್ರ ಶಾಹಿ ಮತ್ತು ಬೆಂಗಳೂರಿನ ಅರೈಸ್ ಬ್ಯಾಡ್ಮಿಂಟನ್ ಅಕಾಡೆಮಿಯ ಹೇಮಂತ್ ಗೌಡ ಸುಲಭ ಜಯ ಸಾಧಿಸಿದರು.

ಬೆಂಗಳೂರಿನ ಯಾದವ ಪ್ರೊ ಬ್ಯಾಡ್ಮಿಂಟನ್ ಸಂಸ್ಥೆಯ ರಿಷಿ ವಿರುದ್ಧ ರುದ್ರ ಶಾಹಿ 21–14, 21–16ರಲ್ಲಿ ಜಯ ಗಳಿಸಿದರು. ಹೇಮಂತ್ ಗೌಡ ಮೈಸೂರಿನ ಹರ್ಷಿತ್ ಎಸ್‌.ಡಿ ಅವರನ್ನು 21–9, 21–8ರಲ್ಲಿ ಪರಾಭವಗೊಳಿಸಿದರು.

ಮೊದಲ ದಿನದ ಇತರ ಫಲಿತಾಂಶಗಳು: ಪುರುಷರ ಸಿಂಗಲ್ಸ್‌: ಎಎಸ್‌ಡಬ್ಲ್ಯುಬಿಯ ಸಯಾನ್ ವಿನು ವಿರುದ್ಧ ಬೆಂಗಳೂರಿನ ಚಿದಾನಂದಗೆ 10–21, 21–19, 21–18ರಲ್ಲಿ ಜಯ, ಮಂಗಳೂರು ಎಸ್‌ಬಿಎಯ ನಿಕೇತನ್ ವಿರುದ್ಧ ಎಎಸ್‌ಆರ್‌ನ ಲೋಕೇಶ್ ಬಾಬುಗೆ 21–13, 21–13ರಲ್ಲಿ, ಪುಣೆಯ ವಾಸಿಂ ಶೇಕ್ ವಿರುದ್ಧ ಅರೈಸ್‌ನ ನಿಖಿಲ್ ಶ್ಯಾಮ್‌ಗೆ 21–17, 21–13ರಲ್ಲಿ, ಮಂಗಳೂರಿನ ಆರವ್‌ ವಿರುದ್ಧ ಮೈಸೂರಿನ ಅನೂಪ್‌ಗೆ 21–12, 21–12ರಲ್ಲಿ, ಎಎಸ್‌ಡಬ್ಲ್ಯುಬಿಯ ಭರತ್ ವಿರುದ್ಧ ವೆಂಕೀಸ್‌ ಅಕಾಡೆಮಿಯ ಗಿರೀಶ್ ವೆಂಕಟ್‌ಗೆ 21–11, 21–10ರಲ್ಲಿ, ಸ್ವಸ್ತಿಕಾ ಅಕಾಡೆಮಿಯ ತ್ರಿಶ್‌ ವಿಠ್ಠಲ್‌ ವಿರುದ್ಧ ತಿರುವಳ್ಳೂರಿನ ವಿಘ್ನೇಶ್‌ಗೆ 21–14, 21–9ರಲ್ಲಿ ಜಯ.

ಉಡುಪಿಯ ಶೆಲ್ಡನ್ ವಿರುದ್ಧ ಬೆಂಗಳೂರಿನ ಆದಿತ್ಯಗೆ 21–18, 21–23, 21–16ರಲ್ಲಿ ಗೆಲುವು. ಹುಬ್ಬಳ್ಳಿಯ ನರಸಿಂಹ ವಿರುದ್ಧ ಸಮರ್ಥ್‌ ಅಕಾಡೆಮಿಯ ಪ್ರದ್ಯೋತಾ ರಾವ್‌ಗೆ 19–21, 21–11, 21–9ರಲ್ಲಿ, ಬೆಂಗಳೂರಿನ ದೀಕ್ಷಿತ್ ವಿರುದ್ಧ ಶಿವಮೊಗ್ಗದ ಅಭಿಷೇಕ್‌ಗೆ 21–17, 21–16ರಲ್ಲಿ, ಎಬಿಎಯ ಕೃಷ್ಣ ರಾಜೀವ್ ಎದುರು ಕಾರ್ಕಳದ ಕಾರ್ತಿಕ್‌ಗೆ 21–12, 21–8ರಲ್ಲಿ, ಮೈಸೂರು ಕೊಡವ ಸಮಾಜದ ಹಿತೈಷ್ ಗೌಡ ಎದುರು ವೈಪಿಬಿಎಯ ರೋಹಿತ್‌ಗೆ 21–6, 21–7ರಲ್ಲಿ, ವೈಭವ್ ವಿರುದ್ಧ ಶ್ರೇಯಶ್ವಂತ್‌ಗೆ 15–21, 21–18, 21–10ರಲ್ಲಿ ಗೆಲುವು. ಅರೈಸ್ ಅಕಾಡೆಮಿಯ ಶ್ರೀಧರ್‌ ಶ್ರೀಕುಮಾರ್‌ ವಿರುದ್ಧ ಎಡಬ್ಲ್ಯುಎಸ್‌ಬಿಯ ಗುರುಗುಹನ್‌ ವಾಕ್ ಓವರ್‌.

ಪುರುಷರ ಡಬಲ್ಸ್‌ನಲ್ಲಿ ಅವಿನಾಶ್ ಭಟ್–ತುಷಾರ್ ಮೇತ್ರಾಣಿ ವಿರುದ್ಧ ಜಯ ಗಳಿಸಿದ ಕಾರ್ತಿಕ್–ರಾಜಿತ್ ಕೃಷ್ಣ ಜೋಡಿ- ಪ್ರಜಾವಾಣಿ ಚಿತ್ರ/ ಫಕ್ರುದ್ಧೀನ್ ಎಚ್
ಪುರುಷರ ಡಬಲ್ಸ್‌ನಲ್ಲಿ ಅವಿನಾಶ್ ಭಟ್–ತುಷಾರ್ ಮೇತ್ರಾಣಿ ವಿರುದ್ಧ ಜಯ ಗಳಿಸಿದ ಕಾರ್ತಿಕ್–ರಾಜಿತ್ ಕೃಷ್ಣ ಜೋಡಿ- ಪ್ರಜಾವಾಣಿ ಚಿತ್ರ/ ಫಕ್ರುದ್ಧೀನ್ ಎಚ್

ಪುರುಷರ ಡಬಲ್ಸ್‌: ಕಾರ್ಕಳದ ಕಾರ್ತಿಕ್‌ ಮತ್ತು ರಾಜಿತ್ ಕೃಷ್ಣ ಜೋಡಿಗೆ ಹುಬ್ಬಳ್ಳಿಯ ಅವಿನಾಶ್ ಭಟ್‌ ಮತ್ತು ತುಷಾರ್ ಮೇತ್ರಾಣಿ ವಿರುದ್ಧ 21–18, 21–18ರಲ್ಲಿ ಜಯ; ಬೆಂಗಳೂರಿನ ಹಿತೇಶ್ ಲೋಕೇಶ್ ಮತ್ತು ರೋಹಿತ್‌ಗೆ ಮಂಗಳೂರಿನ ಶಾರೀಖ್ ಮತ್ತು ಸೃಜನ್ ಎದುರು 21–17, 21–18ರಲ್ಲಿ ಜಯ. ವೈಪಿಬಿಎಯ ಮಾಧವನ್ ಮತ್ತು ರಿಷಿಗೆ ಬೆಂಗಳೂರಿನ ಎಸ್‌ಎಸ್‌ಎಯ ವಿನಯ್ ಮತ್ತು ವಿಸ್ವಾಸ್ ವಿರುದ್ಧ 21–16, 21–16ರಲ್ಲಿ, ಅರೈಸ್‌ನ ಮನೋಬ್ ಮತ್ತು ಪೃಥ್ವಿ ವಿರುದ್ಧ ಸೇಲಂನ ಕಿಶೋರ್ ಮತ್ತು ರೋಹಿತ್‌ಗೆ 21–15, 21–13ರಲ್ಲಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT