ಬೆಂಗಳೂರು: ಕರ್ನಾಟಕದ ಆಟಗಾರರ ವ್ಯವಹಾರವಾಗಿದ್ದ ಫೈನಲ್ ಹಣಾಹಣಿಯಲ್ಲಿ ದರ್ಶ್ ಮಲ್ಹಾನ್ ಅವರು ನೇರ ಸೆಟ್ಗಳಲ್ಲಿ ಹೋಜಸ್ವಿನ್ ಕಿರಣ್ ನಂದಕುಮಾರ್ ಅವರನ್ನು ಮಣಿಸಿದರು. ಅದರೊಂದಿಗೆ, ಶುಕ್ರವಾರ ಮುಕ್ತಾಯಗೊಂಡ ಎಐಟಿಎ ಟ್ಯಾಲೆಂಟ್ ಸರ್ಚ್ ರಾಷ್ಟ್ರೀಯ ಸರಣಿಯ ಟೆನಿಸ್ ಟೂರ್ನಿಯ (12 ವರ್ಷದೊಳಗಿನವರ) ಬಾಲಕರ ಸಿಂಗಲ್ಸ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಎರಡನೇ ಶ್ರೇಯಾಂಕದ ಆಟಗಾರ ದರ್ಶ್, ಸುಂಕದಕಟ್ಟೆಯ ‘ಫೋಕಸ್ ಟೆನಿಸ್ ಮತ್ತು ಪಿಕಲ್ಬಾಲ್ ಅಕಾಡೆಮಿ’ಯಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 6–2, 6–2ರಿಂದ ನಿರಾಯಾಸ ಗೆಲುವು ಸಾಧಿಸಿದರು.

ಬಾಲಕಿಯರ ಸಿಂಗಲ್ಸ್ನಲ್ಲಿ ತೆಲಂಗಾಣದ ಜೆ.ಕೆ.ಕಲಾ ಅವರು ಕಿರೀಟ ತಮ್ಮದಾಗಿಸಿಕೊಂಡರು. ಅಗ್ರ ಶ್ರೇಯಾಂಕದ ಆಟಗಾರ್ತಿ ಕಲಾ ಅವರು ಫೈನಲ್ನಲ್ಲಿ 7–5, 6–3ರಿಂದ ಕರ್ನಾಟಕದ ರಚೆಲ್ ರಾಯುಡು ಅವರನ್ನು ಮಣಿಸಿದರು. ಎರಡನೇ ಶ್ರೇಯಾಂಕ ಹೊಂದಿದ್ದ ರಚೆಲ್ ಮೊದಲ ಸೆಟ್ನಲ್ಲಿ ನಿಕಟ ಪೈಪೋಟಿ ಒಡ್ಡಿದರಾದರೂ ಎರಡನೇ ಸೆಟ್ ಅನ್ನು ಸುಲಭವಾಗಿ ಬಿಟ್ಟುಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.