ಗುರುವಾರ , ಏಪ್ರಿಲ್ 22, 2021
22 °C

80 ವಸಂತ ಕಂಡ ಮಾಣಿಕಮ್ಮ: ಸಹಸ್ರಾರು ಭಕ್ತರಿಗೆ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ/ ಗುರುಮಠಕಲ್: ಮಾತೆ ಮಾಣಿಕಮ್ಮ ಅವರ 80ನೇ ಹುಟ್ಟುಹಬ್ಬ ದಿನವಾದ ಮಂಗಳವಾರ ತಾಲ್ಲೂಕಿನ ಯಾನಾಗುಂದಿ ಬೆಟ್ಟದಲ್ಲಿ ಅಮ್ಮನ ದರ್ಶನಕ್ಕಾಗಿ ಸಹಸ್ರಾರು ಭಕ್ತರು ಬೆಳಿಗ್ಗೆಯಿಂದ ಕಾದು ಕುಳಿತಿದ್ದರು.ಮಧ್ಯಾಹ್ನ 1.35ಕ್ಕೆ ಗುಹೆಯಿಂದ ಲಿಫ್ಟ್ ಮೂಲಕ 80 ಅಡಿಗೂ ಎತ್ತರದ ಆಸನಕ್ಕೆ ಬಂದ ಮಾತೆ ಮಾಣಿಕಮ್ಮ 2.05 ಗಂಟೆವರೆಗೆ ದರ್ಶನ ನೀಡಿದರು. ಯಾನಾಗುಂದಿ ಬೆಟ್ಟದಲ್ಲಿ ಇತ್ತೀಚಿನ ವರ್ಷಗಳಿಂದ ಭಕ್ತರಿಗೆ ಮಾತೆ ಮಾಣಿಕಮ್ಮ ಅವರ ದರ್ಶನ ಅಪರೂಪವಾಗಿತ್ತು. ಫೆಬ್ರವರಿ 5 ರಂದು ವಿಶ್ವಸ್ಥ ಮಂಡಳಿಯ ನೋಂದಣಿಗೆ `ಅಮ್ಮ~  ದರ್ಶನ ನೀಡಿ `ಮುದ್ರೆ..~ ಹಾಕಿದ್ದನ್ನು ಇಂದು ಎಲ್ಲರೂ ಸ್ಮರಿಸಿದರು. ಇಂದು ನೀಡಿದ ದರ್ಶನ ಎಲ್ಲರಿಗೂ ಉತ್ಸಾಹ, ಸಂತಸದ ಮಧ್ಯೆ ಜಯಕಾರ, ಘೋಷಣೆಗಳು  ಭಕ್ತರಲ್ಲಿ ಮನೆ ಮಾಡಿತ್ತು.ಮಾತಾಜಿ ದರ್ಶನ: ಮಾತಾಜಿ ಮಧ್ಯಾಹ್ನ ಬೆಟ್ಟದ ಹಿಂಭಾಗದ ದರ್ಶನ ಸ್ಥಳದಲ್ಲಿ ದರ್ಶನ ನೀಡಿದರು. ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡದೇ ಮೌನವಾಗಿ ನಾಲ್ಕು ದಿಕ್ಕುಗಳಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರನ್ನು ನೋಡುತ್ತ ಕುಳಿತಿದ್ದರು. ಭಕ್ತರಿಗೆ  ಕೈಸನ್ನೆ ಮಾಡುವುದರೊಂದಿಗೆ ಆರತಿಯನ್ನು ಬೆಳಗಲು ಸೂಚಿಸಿದರು. ನೆರೆದ ಭಕ್ತರೆಲ್ಲರೂ ಭಕ್ತಿಯಿಂದ ಚಪ್ಪಾಳೆ ತಟ್ಟುತ್ತ ಆರತಿಯನ್ನು ಬೆಳಗಿದರು. ಅಮ್ಮನವರು ಪ್ರಸಾದ ರೂಪದಲ್ಲಿ ಹೂಗಳನ್ನು ಭಕ್ತರ ಮೇಲೆ ಎಸೆದರು.ಮಾತಾ ಮಾಣಿಕೇಶ್ವರಿ ಟ್ರಸ್ಟ್ ಸದಸ್ಯ ಮೌಲಾಲಿ ಅನಪೂರ ಪತ್ರಕರ್ತರೊಂದಿಗೆ ಮಾತನಾಡಿ ಮಾತಾ ಮಾಣಿಕೇಶ್ವರಿ ಎಂದಿದ್ದ ಅಮ್ಮನವರ ಹೆಸರನ್ನು ಅಹಿಂಸ ಪರಮೋಧರ್ಮ ರೂಪರಹಿತ ಮಹಾಯೋಗಿನಿ ಮಾತೆ ಎಂದು ಬದಲಾಯಿಸಿ ಸುಮಾರು 5 ವರ್ಷಗಳಾಯಿತು ಎಂದರು. ಆಶ್ರಮದಲ್ಲಿ ಎಲ್ಲಾ ಜಾತಿ ಧರ್ಮದವರಿಗೂ ಪ್ರವೇಶವಿದ್ದು ಮಾನವ ಜನ್ಮ ಸಕಲ ಜೀವರಾಶಿಗಳಿಗಿಂತ ಮೇಲಾದುದ್ದು ಹೀಗಾಗಿ ಮಾನವ ಯಾವುದೇ ಪ್ರಾಣಿ ವಧೆ ಮಾಡಬಾರದು, ಪರಿಸರವನ್ನು ಕಾಪಾಡಿಕೋಂಡು ಹೋಗಬೇಕು ಎಂಬುದು ಅಮ್ಮನವರ ಮೂಲಮಂತ್ರ ಎಂದು ಹೇಳಿದರು.ಹೈಕೋರ್ಟಿನ ನ್ಯಾಯಾಧೀಶ ಶ್ರೀಧರರಾವ, ಮಾಜಿ ಸಚಿವ ಬಸವರಾಜ ಹೊರಟ್ಟಿ, ಶಂಕ್ರಣ್ಣ ವಣಿಕ್ಯಾಳ್, ನಿವೃತ್ತ ಡಿವೈಎಸ್‌ಪಿ, ಟ್ರಸ್ಟಿಗಳಾದ ಸಣ್ಣೂರ ಸಿದ್ರಾಮಪ್ಪ, ಪರ್ವತರೆಡ್ಡಿ ಪಾಟೀಲ ನಾಮವಾರ, ಜಗಜೀವನರೆಡ್ಡಿ, ಮೌಲಾಲಿ ಅನಪೂರ, ದಾಮೋದರರೆಡ್ಡಿ ಸೀಲಾರಕೋಟ, ಜಿ. ರಮೇಶ, ಅಮೀನಾ ಬೇಗಂ ಮತ್ತು ವೈ. ಯಾದವ ಒಳಗೊಂಡಂತೆ ಅನೇಕ ರಾಜಕೀಯ ಮುಖಂಡರು, ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಸಹಸ್ರಾರು ಭಕ್ತರು ಅಮ್ಮನ ದರ್ಶನ ಪಡೆದರು ಎಂದು ವಕ್ತಾರ ಶರಣಪ್ಪ ಎಳ್ಳಿ ಸಿಂಧನಮಡು `ಪ್ರಜಾವಾಣಿ~ ಗೆ ತಿಳಿಸಿದರು.

ಪೊಲೀಸರು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.