ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳಿಯುತ್ತೀರಿ
Published 25 ಏಪ್ರಿಲ್ 2024, 20:01 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಹಳವಾಗಿ ಹಚ್ಚಿಕೊಂಡ ಸಾಕುಪ್ರಾಣಿಯ ಅನಾರೋಗ್ಯವು ತೀರ ಬೇಸರ ಪಡಿಸುವ ಸಾಧ್ಯತೆ ಇದೆ. ಇಂದು ನಿಮ್ಮ ಸುತ್ತ ನಡೆಯುವ ಕೆಲವು ಸನ್ನಿವೇಶಗಳು ನಿಮ್ಮನ್ನಗಲಿದ ಹಿರಿಯರ ನೆನಪು ತರಿಸಲಿದೆ.
ವೃಷಭ
ಅನಿರೀಕ್ಷಿತವಾಗಿ ಪರಿಚಯವಾಗುವ ವ್ಯಕ್ತಿಯು ನಿಮ್ಮ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಾರೆ. ಯೋಗ್ಯತೆಗೆ ಮೀರಿದ ಕಾರ್ಯವೊಂದು ಇಂದು ನಿಮ್ಮನ್ನು ತಲುಪಲಿದೆ. ಹತ್ತಿ ಮಾರಟಗಾರರಿಗೆ ಲಾಭವಿದೆ.
ಮಿಥುನ
ಮಕ್ಕಳ ಸಂತೋಷಕ್ಕಾಗಿ ರಹಸ್ಯವಾಗಿ ಅವರಿಗೆ ನೀವು ಸಹಾಯವನ್ನು ಮಾಡುತ್ತೀರಿ. ಈಶ್ವರನ ಕೃಪೆಯಿಂದಾಗಿ ಉತ್ತಮವಾಗಿ ನೆಡೆಯುತ್ತಿರುವ ನಿಮ್ಮ ಕೆಲಸಗಳಲ್ಲಿ ಔನ್ನತ್ಯವು ನಿಮಗೆ ನಿಶ್ಚಿತವಾದದ್ದು.
ಕರ್ಕಾಟಕ
ನಿಮ್ಮ ಆತ್ಮವಿಶ್ವಾಸವು ಒಳ್ಳೆಯದು. ಆದರೆ ಅತಿಯಾದ ಆತ್ಮವಿಶ್ವಾಸ ನೀವು ಮಾಡುವ ಕೆಲಸದ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ. ನಿಮಗೆ ಒದಗಿಬರಲಿರುವ ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.
ಸಿಂಹ
ಅಧಿಕಾರಿಗಳೊಂದಿಗೆ ವಾದಿಸದೆ ಅವರು ಹೇಳುವ ಕಾರ್ಯಗಳನ್ನು ಮಾಡುವುದು ನಿಮಗೆ ಒಳ್ಳೆಯದು. ಮಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಗಳನ್ನು ನಂಬಿ ಮೋಸ ಹೋಗದಿರಿ.
ಕನ್ಯಾ
ಯಾಂತ್ರಿಕ ಬದುಕಿನ ಭಾಗವಾದ ನಿಮ್ಮ ಜೀವನದಲ್ಲಿ ಸ್ವಲ್ಪವಾದರೂ ಭರವಸೆ ಇಟ್ಟುಕೊಳ್ಳಿ. ವಿದ್ಯುತ್ ಉಪಕರಣಗಳ ಖರೀದಿ ಸಾಧ್ಯತೆ ಇದೆ. ಸಂಗಾತಿಯ ಜೊತೆ ಉತ್ತಮ ಸಮಯವನ್ನು ಕಳಿಯುತ್ತೀರಿ.
ತುಲಾ
ನಿಮ್ಮ ವ್ಯವಹಾರಗಳು ಮೋಸದ ಹಾದಿಯಲ್ಲಿ ಹೋಗುವಂತಿದ್ದಲ್ಲಿ ಅವುಗಳನ್ನು ಶೀಘ್ರ ಕೈಬಿಡುವುದು ಸೂಕ್ತ. ನಿಮ್ಮ ಕಾರ್ಯವೈಖರಿ ಲಾಭಕರವಾಗಿರಲಿದೆ. ತಾಯಿಯ ಸಂಬಂಧಿಕರ ಆಗಮನವಾಗಲಿದೆ.
ವೃಶ್ಚಿಕ
ಯುವಕ ಯುವತಿಯರಿಗೆ ಇಂದು ನಿಮ್ಮ ಸುತ್ತಮುತ್ತ ನಡೆಯುವ ಕೆಲವು ಘಟನೆಗಳಿಂದ ದೇಶಭಕ್ತಿ ಗರಿಗೆದರಬಹುದು. ವಿಶೇಷ ಕೌಶಲ ಹೊಂದಿದ ವಿಕಲಾಂಗ ಚೇತನರಿಗೆ ಪ್ರಶಸ್ತಿ ಪ್ರದಾನವಾಗಬಹುದು.
ಧನು
ಅಗತ್ಯದ ಸಂದರ್ಭದಲ್ಲಿಯೂ ವಿರಾಮ ನೀಡದೇ ದುಡಿಯುತ್ತಿದ್ದರೆ ನಿಮ್ಮ ದೇಹ ನಿಮಗೆ ಅಗತ್ಯವಿರುವ ಸಮಯದಲ್ಲಿ ಕೈಕೊಡುವ ಸಾಧ್ಯತೆಗಳಿವೆ. ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ.
ಮಕರ
ನಿಮ್ಮಲ್ಲಿ ವಿದ್ಯೆ ಹೇರಳವಾಗಿದ್ದರೂ ವಿನಯದ ಕೊರತೆ ಇದ್ದಲ್ಲಿ ಪಾಂಡಿತ್ಯಕ್ಕೆ ಬೆಲೆ ಸಿಗದೆ ಹೋಗಬಹುದು. ವೈರುಧ್ಯಗಳನ್ನು ಮೀರಿ ವ್ಯವಹರಿಸಿದಲ್ಲಿ ಸಂಬಂಧವು ಉಳಿಯಲಿದೆ. ಹಾಕಿದ ಯೋಜನೆಗಳು ಸಫಲವಾಗಲಿವೆ.
ಕುಂಭ
ಇಂದು ಯಾರಾದರೂ ನಿಮಗೆ ಹಿತವಲ್ಲದಿದ್ದರೂ ಸಲಹೆ ಕೊಡಲು ಬಂದರೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಸುಮ್ಮನೆ ಕೇಳಿಸಿಕೊಳ್ಳಿ. ಇಂದು ಧಾರ್ಮಿಕ ಕಾರ್ಯಕ್ರಮದ ಕರೆ ಇದ್ದಲ್ಲಿ ತಪ್ಪದೇ ಭೇಟಿ ನೀಡಿ.
ಮೀನ
ಕಣ್ಣಿಗೆ ಹಿತವೆನ್ನಿಸುವುದ್ದೆಲ್ಲವನ್ನು ತಿನ್ನುವ ನಿಮ್ಮ ಪ್ರವೃತ್ತಿಯಿಂದ ಜೀರ್ಣಾಂಗ ವ್ಯೂಹ ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು ನಿಮ್ಮ ಗಮನಕ್ಕೆ ಬರಲಿದೆ. ನಿದ್ದೆಯನ್ನು ನಿರ್ವಹಣೆ ಮಾಡುವ ಬಗ್ಗೆ ಯೋಚಿಸಿ.