ಶುಕ್ರವಾರ, ಏಪ್ರಿಲ್ 23, 2021
28 °C

ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಕೆ:ಶುಚಿಯಾದ ಬಿಸಿಯೂಟ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: `ಅಕ್ಕಿ ಕಾಳಿನಲ್ಲಿ ಕಸಕಡ್ಡಿ ಆರಿಸಿ, ಕಲ್ಲಿನ ಹರಳು ಇಲ್ಲದಂತೆ ಹಸನು ಮಾಡಿ, ಹುಳುಗಳು ಇರದಂತೆ ಗಮನ ಹರಿಸಬೇಕು. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ರುಚಿಯಾಗಿ ಮತ್ತು ಶುಚಿಯಾಗಿ ನೀಡಬೇಕು. ಬ್ಯಾಳಿ ಸಾರಿನಲ್ಲಿ ತರಕಾರಿ ಕಡ್ಡಾಯವಾಗಿ ಇರಬೇಕು. ಶಾಲೆ ಪರಿಸರ ದಿನಾಲೂ ಸ್ವಚ್ಛವಾಗಿಡಬೇಕು~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚವ್ಹಾಣ್‌ಶೆಟ್ಟಿ ಅವರು, ಮುಖ್ಯಗುರು, ಶಿಕ್ಷಕರಿಗೆ ಮತ್ತು ಮುಖ್ಯ ಅಡುಗೆಯವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.ಗುರುವಾರ ನಡೆದ `ಶಾಲೆಗಾಗಿ ನಾವು ನೀವು~ ಕಾರ್ಯಕ್ರಮದ ನಂತರ ತಾಲ್ಲೂಕಿನ ರಾಮತೀರ್ಥ, ಭೀಮನಹಳ್ಳಿ, ಬೆಳಗೇರಾ, ಹೀರಾಮಣಿ ತಾಂಡಾ, ಮುಂಗಿ ತಾಂಡಾ, ಯಾಗಾಪುರ, ಚಂದುನಾಯಕ ತಾಂಡಾ, ಬಾಮ್ಲಾ ನಾಯಕ ತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟ ಕುರಿತು ಪರಿಶೀಲನೆ ನಡೆಸಿದ ಅವರು, `ಯಾವ ಕಾರಣಕ್ಕೂ ಮಕ್ಕಳಿಗೆ ಕಳಪೆ ಆಹಾರ ಕೊಡಬಾರದು. ಆಹಾರ ಗುಣಮಟ್ಟ ಕಾಪಾಡಬೇಕು~ ಎಂದು ತಾಕೀತು ಮಾಡಿದರು.`ಮಳೆಗಾಲ ಆರಂಭವಾಗಿದ್ದರಿಂದ ಮಕ್ಕಳು ಊಟ ಮಾಡುವ ಸ್ಥಳ ಸದಾ ಸ್ವಚ್ಛವಾಗಿರುವಂತೆ ಗಮನ ಹರಿಸಬೇಕು. ನೊಣಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಮಕ್ಕಳಿಗೆ ವಾಂತಿ, ಹೊಟ್ಟೆ ಬೇನೆ ಶುರುವಾಗಿ ಸಮಸ್ಯೆಯಾಗುತ್ತದೆ. ಜನರಿಂದ ಟೀಕೆಗಳು ಕೇಳಿ ಬರುತ್ತವೆ. ಹಾಗಾಗದಂತೆ ಎಚ್ಚರವಹಿಸಿ~ ಎಂದು ಅವರು ಸಲಹೆ ನೀಡಿದರು.`ಬಿಸಿಯೂಟದ ಬಗ್ಗೆ ಸಾರ್ವಜನಿಕರಿಂದ, ಮಕ್ಕಳ ಪಾಲಕರು ಮತ್ತು ಪೋಷಕರಿಂದ ಯಾವುದೇ ರೀತಿಯ ಆರೋಪ ಬರದಂತೆ ಎಚ್ಚರದಿಂದ ಕೆಲಸ ಮಾಡಬೇಕು. ಅಡುಗೆಯ ಪಾತ್ರೆಗಳನ್ನು, ಆಹಾರ ಪದಾರ್ಥಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟಿರಬೇಕು. ಒಂದು ವೇಳೆ ಏನಾದರೂ ಆರೋಪ ಕೇಳಿ ಬಂದರೆ, ಕಳಪೆ ಆಹಾರ ನೀಡಿರುವುದು ಗಮನಕ್ಕೆ ಬಂದರೆ, ನಿಮ್ಮನ್ನೆ ನೇರ ಹೊಣೆಗಾರರಾಗಿ ಮಾಡಿ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇನೆ~ ಎಂದು ಅವರು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.