ಆಸ್ಪತ್ರೆಗೆ ಅಕ್ರಮ ದಾಖಲು: ಆರೋಪ

ಗುರುವಾರ , ಜೂಲೈ 18, 2019
22 °C

ಆಸ್ಪತ್ರೆಗೆ ಅಕ್ರಮ ದಾಖಲು: ಆರೋಪ

Published:
Updated:

ಗುಲ್ಬರ್ಗ: ರೋಗ ಇಲ್ಲದಿದ್ದರೂ ಮಕ್ಕಳನ್ನು ಅಕ್ರಮವಾಗಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ ಎಂದು ಬ್ರಹ್ಮಪುರದ ಕೆಲವು ಸ್ಥಳೀಯರು ಆರೋಪಿಸಿದ ಪರಿಣಾಮ ಭಾನುವಾರ ರಾತ್ರಿ ಬಸವೇಶ್ವರ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.`ಶರಣಮ್ಮ ಎಂಬ ಮಹಿಳೆಯು ಮಕ್ಕಳಿಗೆ ಆಮಿಷ ಒಡ್ಡಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸುತ್ತಾರೆ. ಆ ಮೂಲಕ ದಾಖಲಾತಿ ತೋರಿಸಿ ಸರ್ಕಾರ ಮತ್ತಿತರ ಯೋಜನೆಗಳ ಹಣ ಗುಳುಂ ಮಾಡುತ್ತಿದ್ದಾರೆ~ ಎಂದು ಬ್ರಹ್ಮಪುರದ ಕೆಲವು ಯುವಕರು ಹಾಗೂ ಮಕ್ಕಳ ತಾಯಂದಿರು ಆರೋಪಿಸಿದರು.ಇದನ್ನು ನಿರಾಕರಿಸಿದ ಶರಣಮ್ಮ ಹಾಗೂ ಮತ್ತಿತರರು `ಉಚಿತ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಬರಲಾಯಿತು~ ಎಂದು ತಿಳಿಸಿದ್ದಾರೆ. ಎರಡು ಕಡೆಯವರ ನಡುವೆ ಚರ್ಚೆ-ವಾದಗಳು ನಡೆದು ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಎಂ.ಬಿ.ನಗರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ವೃತ್ತ ನಿರೀಕ್ಷಕ ಬಿ.ಪಿ.ಚಂದ್ರಶೇಖರ್ ತಿಳಿಸಿದರು.ಸೆರೆಸಿಕ್ಕ ಅಂತರರಾಜ್ಯ ಚೋರ

ಗುಲ್ಬರ್ಗ: ಎರಡು ವರ್ಷ ಹಿಂದಿನ ಕಳವು ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಸುಮಾರು 35 ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರರಾಜ್ಯ ಚೋರನೊಬ್ಬನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.ಸೊಲ್ಲಾಪುರದ ಸುರೇಶ ಶಿವಪುರೆ ಬಂಧಿತ ಚೋರ. ಆತನು 2010 ಮಾರ್ಚ್‌ನಲ್ಲಿ ಶಕ್ತಿ ನಗರ ಬಡಾವಣೆಯ ಶಾಂತಯ್ಯ ಮಠಪತಿ ಎಂಬವರ ಮನೆ ಕಳವು ಮಾಡಿ ಸುಮಾರು 24,800 ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಆರೋಪಿ ಬಂಧನದೊಂದಿಗೆ ಆತನು ಸೊಲ್ಲಾಪುರ, ಪುಣೆ, ವಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡದಲ್ಲಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.ಇನ್ಸ್‌ಪೆಕ್ಟರ್ ಟಿ.ಎಚ್. ಕರೀಕಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry