ಶುಕ್ರವಾರ, ಏಪ್ರಿಲ್ 16, 2021
31 °C

ರಾಷ್ಟ್ರವಿರೋಧಿ ವರದಿ: 13ರಂದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಮ್ಮು ಕಾಶ್ಮೀರ ಹೋರಾಟ ಸಮಿತಿಯು ಬರುವ ಜುಲೈ 13ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮ್ಮು ಕಾಶ್ಮೀರದ ಕುರಿತ ಕುತಂತ್ರವನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಕೇಂದ್ರ ಸರ್ಕಾರವು ವರದಿಯೊಂದನ್ನು ತರಿಸಿಕೊಂಡಿದ್ದು ಅದು ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗುವಂತಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.ಸಂವಾದಕಾರರ ತಂಡವು 2011ರ ಅಕ್ಟೋಬರ 12ರಂದು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ 7 ತಿಂಗಳವರೆಗೆ ತನ್ನಲ್ಲಿ ಅದನ್ನು ಗುಪ್ತವಾಗಿಟ್ಟುಕೊಂಡಿದ್ದ ವರದಿಯನ್ನು ಸರ್ಕಾರ 2012ರ ಮೇ 24 ರಂದು ಸಾರ್ವಜನಿಕರ ಮುಂದಿಟ್ಟಿದೆ. ಈ ವರದಿ ಅಸಂಬದ್ಧವಷ್ಟೇ ಅಲ್ಲದೆ ಪ್ರತ್ಯೇಕತಾವಾದಿಗಳ ಬೇಡಿಕೆಗೆ ಅಧಿಕೃತ ಮುದ್ರೆಯೊತ್ತಿದಂತಿದೆ ಎಂದು ಸಮಿತಿ ಟೀಕಿಸಿದೆ.ಈ ವರದಿಯ ಉದ್ದೇಶ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಸಂಶಯ ಬರುವಂತಿದೆ. ಈ ವರದಿಯು ಸಂಪೂರ್ಣ ಜಮ್ಮು ಕಾಶ್ಮೀರದ ವಿವಿಧ ಜನವರ್ಗಗಳಿಗೆ ಒಳಿತನ್ನು ಮಾಡಹೊರಟಂತಿಲ್ಲ. ಬದಲಿಗೆ ಕೇಂದ್ರ ಸರ್ಕಾರ ಮತ್ತು ಜಮ್ಮು ಕಾಶ್ಮೀರ ರಾಜ್ಯ ಸರ್ಕಾರಗಳನ್ನು ಮೆಚ್ಚಿಸುವುದಕ್ಕಾಗಿ ಸಲ್ಲಿಸಿದಂತಿದೆ.  ಕೆಲವೇ ಕೆಲವು ಜನರನ್ನು ಓಲೈಸಿ, ಆ ಮೂಲಕ ಪ್ರತ್ಯೇಕತಾವಾದಿಗಳ ಪರ ವಹಿಸುವಂತಿದೆ ಎಂದು ಟೀಕಿಸಲಾಗಿದೆ.ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರದ ವಿಭಜನೆಗೆ ನಡೆಸಿರುವ ಈ ಕುತಂತ್ರವನ್ನು ವಿರೋಧಿಸಿ ಜಮ್ಮು ಕಾಶ್ಮೀರ ಹೋರಾಟ ಸಮಿತಿಯು ಸಂಪೂರ್ಣ ರಾಷ್ಟ್ರದಲ್ಲಿ ಜನಜಾಗೃತಿಯನ್ನು ಮಾಡುವ ನಿಟ್ಟಿನಲ್ಲಿ ಸಕ್ರೀಯವಾಗಿದೆ. ರಾಷ್ಟ್ರಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಭಾರತದ ಭೌಗೋಳಿಕ ಭದ್ರತೆಯನ್ನು ಸದೃಢಗೊಳಿಸುವಲ್ಲಿ ಸಹಕರಿಸಬೇಕೆಂದು ಸಂಚಾಲಕರು ಮನವಿ ಮಾಡಿದ್ದಾರೆ.ಪ್ರತಿಭಟನಾಕಾರರು ಸರ್ದಾರ ವಲಭ್ಲಭಾಯಿ ಪಟೇಲ್ ವೃತ್ತದಿಂದ ಮೆರವಣಿಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿಪತ್ರವನ್ನು ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಸೇಡಂ: ಮನವಿ

ಸೇಡಂ:
ಜಮ್ಮು ಕಾಶ್ಮೀರ ಕುರಿತು ಕೇಂದ್ರ ಸರ್ಕಾರ, ಸಾರ್ವಜನಿಕರ ಮುಂದಿಟ್ಟಿರುವ ವರದಿಯನ್ನು ಖಂಡಿಸಿ `ಜಮ್ಮು ಕಾಶ್ಮೀರ ಉಳಿಸಿ ಹೋರಾಟ~ ಸಮಿತಿಯು ಸೇಡಂ ತಾಲ್ಲೂಕು ಘಟಕವು, ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದೆ. ನಂತರ ರಾಷ್ಟ್ರಪತಿ ಅವರಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದೆ. ಅಕ್ಟೋಬರ್ 2010 ರ 13ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪತ್ರಕರ್ತ ದಿಲೀಪ ವಡಗಾಂವಕರ್, ಪ್ರೊ. ರಾಧಾಕುಮಾರ ಮತ್ತು ಎಂ.ಎಂ.ಅನ್ಸಾರಿ ಅವರುಗಳಿದ್ದ ನಿಯೋಗವನ್ನು ಕಾಶ್ಮೀರಕ್ಕೆ ಕಳುಹಿಸಿತ್ತು. ನಿಯೋಗ ತನ್ನ ವರದಿಯನ್ನು ಅಕ್ಟೋಬರ್ 12, 2011 ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆ ವರದಿಯನ್ನು ಕೇಂದ್ರ ಸರ್ಕಾರ 7 ತಿಂಗಳ ನಂತರ, ಮೇ-24ರಂದು ಸಾರ್ವಜನಿಕರ ಮುಂದೆ ಇರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.