ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರು ಬೇಗ ವಿವಾಹದ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ
Published 1 ಮೇ 2024, 0:25 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇನ್ನೊಬ್ಬರೊಂದಿಗೆ ಮಾತನಾಡುವಾಗ ತುಂಬಾ ಅಳೆದು ತೂಗಿ ಮಾತನಾಡುವ ಪ್ರವೃತ್ತಿಯು ಎದುರಿನ ವ್ಯಕ್ತಿಗಳಿಗೆ ತಮ್ಮನ್ನು ದೂರವಿಟ್ಟಿದ್ದಾರೆ ಎಂಬ ಭಾವನೆಯನ್ನು ತರಬಹುದು. ಈ ಬಗ್ಗೆ ಗಮನ ಹರಿಸಿ.
ವೃಷಭ
ನಿಮ್ಮ ನಡುವಳಿಕೆಯು ಇತರರಿಗೆ ಗೊಂದಲಮಯವಾಗಿ ಕಂಡರೂ ಅಸಹಾಯಕತೆಯಿಂದ ನಿಲ್ಲುವ ಕಾರ್ಯವನ್ನು ಬಿಡುವುದಕ್ಕಿಂತ ಉಳಿಸಿಕೊಳ್ಳಲು ಪ್ರಯತ್ನ ಬೇಕಾಗುವುದರಿಂದ ನೀವು ಧೈರ್ಯದಿಂದ ಮಾಡಿ.
ಮಿಥುನ
ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲವಾಗಿದೆ. ಮಕ್ಕಳ ಮೂಲಕ ಕೆಲವು ಸಮಸ್ಯೆಗಳಿಗೆ ಪರಿಹಾರವು ದೊರೆಯುತ್ತದೆ. ತಂಪುಪಾನೀಯಗಳ ಉತ್ಪಾದಕರಿಗೆ ಲಾಭ ಸಿಗುತ್ತದೆ.
ಕರ್ಕಾಟಕ
ಗುರು ಹಿರಿಯರ ಅಣತಿಯಂತೆ ವಿವಾಹ ಸಂಬಂಧಿ ವಿಷಯಗಳಿಗೆ ನಿರಾಕರಣೆಯನ್ನು ಮಾಡದೆ ಒಪ್ಪಿಕೊಳ್ಳುವುದು ಉತ್ತಮ. ಏನನ್ನಾದರೂ ಸಾಧಿಸಲೇಬೇಕೆಂದಿರುವಾಗ ಆತ್ಮವಿಶ್ವಾಸದ ಕೊರತೆ ಕಾಣಿಸದು.
ಸಿಂಹ
ದೇಹಾಲಸ್ಯದಿಂದ ಹಲವು ದಿನಗಳಿಂದ ತಳ್ಳುತ್ತ ಬಂದಿದ್ದ ಕಾರ್ಯಗಳನ್ನು ಮುಂದು ಹಾಕುವುದು ಒಳ್ಳೆಯದಲ್ಲ. ಸ್ವಾಭಾವಿಕವಾಗಿ ಬಂದ ಕಾಯಿಲೆ ಸಹಜವಾಗಿ ಪರಿಹಾರವಾಗುವುದು.
ಕನ್ಯಾ
ಸಂಶೋಧನೆಯಲ್ಲಿ ತೊಡಗಿರುವ ರಾಸಾಯನಿಕ ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಅಂದುಕೊಂಡ ಕೆಲಸಗಳು ಪ್ರಯತ್ನದಿಂದ ಆಗುತ್ತದೆ.
ತುಲಾ
ದಿನಾಂತ್ಯದಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಕಾಲ ಕಳೆಯಲು ಅಪೇಕ್ಷಿಸುವಿರಿ. ಮಕ್ಕಳ ರೋಗತಜ್ಞರಿಗೆ ವಿಶೇಷ ಸವಾಲೊಂದು ಎದುರಾಗುವ ಸಂಭವ ಈ ದಿನವಿದೆ.
ವೃಶ್ಚಿಕ
ಅವಿವಾಹಿತರು ಆದಷ್ಟು ಬೇಗ ವಿವಾಹದ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ. ಮುಖ ಕಪ್ಪಗಾಗುವಂತಹ ಪರಿಸ್ಥಿತಿಗಳನ್ನು ತಂದೊಡ್ಡಿಕೊಳ್ಳಬೇಡಿ. ತಂದೆ ತಾಯಿಯ ಮಾತನ್ನು ಮೀರಿ ಇಂದು ಪ್ರಯಾಣ ಕೈಗೊಳ್ಳಬೇಡಿ
ಧನು
ನಾಯಕತ್ವದ ಪಟ್ಟ ಹೊರುವ ನಿಮ್ಮ ಸಾಮರ್ಥ್ಯವು ಕೆಲವರ ಕಣ್ಣನ್ನು ಕೆಂಪಗೆ ಮಾಡುತ್ತದೆ, ಭಯ ಬೇಡ ಮುನ್ನುಗ್ಗಿ ಕಾರ್ಯ ನಿರ್ವಹಿಸಿ. ಮಧ್ಯಾಹ್ನದ ನಂತರದ ಪ್ರಯಾಣವನ್ನು ಮಾಡದಿರುವುದು ಉತ್ತಮವೆನಿಸಲಿದೆ.
ಮಕರ
ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವಂತಾಗಲಿದೆ. ಮಗನ ವಿಷಯ ಮನೆಯಲ್ಲಿ ಚರ್ಚೆಗೆ ಬರುವುದು. ಸಂಗಾತಿಯೊಂದಿಗೆ ಭಾವನಾತ್ಮಕ ಪ್ರಕ್ಷುಬ್ಧತೆಗೆ ಒಳಗಾಗುವಂತಹ ಸಾಧ್ಯತೆ ಇದೆ.ಸಂತೋಷದ ದಿನವಾಗಿದೆ.
ಕುಂಭ
ಇಂದು ಮಾಡುವ ಸಹಾಯವು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ಇಷ್ಟ ಕ್ಷೇತ್ರದಲ್ಲಿ ಹೊಸ ಉದ್ಯೋಗ ಪಡೆಯುವವರಿಗೆ ಕೆಲಸ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾಗಲಿದೆ.
ಮೀನ
ಸಿದ್ಧ ಉಡುಪಗಳ ವ್ಯಾಪಾರಸ್ಥರು ರಫ್ತು ವ್ಯಾಪಾರದಿಂದ ಹೇರಳ ಲಾಭ ಪಡೆಯುವಿರಿ. ಬಲವಾದ ಕಾರಣವಿಲ್ಲದೆ ಇಂದು ಯಾರ ಮೇಲೂ ಕೋಪಿಸಿಕೊಳ್ಳಬೇಡಿ. ಮನಃಪೂರ್ವಕವಾಗಿ ಮಾಡಿದ ಕೆಲಸಕ್ಕೆ ಶ್ಲಾಘನೆ ದೊರಕಲಿದೆ.