ಬೆಂಗಳೂರು: ಮೂರು ದಿನಗಳ ಸ್ಪರ್ಧೆಗಳಲ್ಲಿ ಪಾರಮ್ಯ ಮೆರೆದ ಕರ್ನಾಟಕದ ಈಜುಪಟುಗಳು ಹೈದರಾಬಾದಿನ ಗಚ್ಚಿಬೌಲಿಯಲ್ಲಿ ಸೋಮವಾರ ಮುಕ್ತಾಯಗೊಂಡ 36ನೇ ದಕ್ಷಿಣ ವಲಯ ಈಜು ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಕರ್ನಾಟಕದ ತಂಡವು ಒಟ್ಟು 1022 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ತೆಲಂಗಾಣ (425 ಅಂಕ) ಮತ್ತು ತಮಿಳುನಾಡು (414 ಅಂಕ) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದೊಂದಿಗೆ ಅಭಿಯಾನವನ್ನು ಮುಗಿಸಿದವು.

ಮೊದಲೆರಡು ದಿನಗಳಲ್ಲಿಯೂ ಮಿಂಚು ಹರಿಸಿದ್ದ ರಾಜ್ಯದ ಈಜುಪಟುಗಳು ಕೊನೆಯ ದಿನವೂ ಪದಕ ಬೇಟೆ ಮುಂದುವರಿಸಿದರು. 17 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ 4x100 ಮೀಟರ್ ಫ್ರೀಸ್ಟೈಲ್ ರಿಲೆ ಸೇರಿದಂತೆ ಎಲ್ಲಾ ವಿಭಾಗಗಳ ರಿಲೆ ಸ್ಪರ್ಧೆಗಳಲ್ಲೂ ಪಾರಮ್ಯ ಸಾಧಿಸಿದರು.

ಬಾಲಕರ ಮತ್ತು ಬಾಲಕಿಯರ ವಾಟರ್ ಪೋಲೊ ತಂಡಗಳು ರನ್ನರ್ಸ್ ಅಪ್ನೊಂದಿಗೆ ಅಭಿಯಾನವನ್ನು ಮುಗಿಸಿದವು. ರಾಜ್ಯದ ಎರಡೂ ತಂಡಗಳು ಕೇರಳದ ವಿರುದ್ಧ ಮುಗ್ಗರಿಸಿದವು.

ಈಜು ಫಲಿತಾಂಶ: (17 ವರ್ಷದೊಳಗಿನವರು) ಬಾಲಕರು: 400 ಮೀ. ಫ್ರೀಸ್ಟೈಲ್: ಸ್ವರೂಪ್ ಧನುಚೆ (ಕರ್ನಾಟಕ, ಕಾಲ: 4ನಿ.22.14ಸೆ)–1, ರಾಘವ್ ಸ್ವಚ್ಛಂದಂ (ಕರ್ನಾಟಕ)–2, ಅಸ್ಜದ್ ಎಂ ಜಮೀಲ್ (ಪುದುಚೇರಿ)–3.

200 ಮೀ. ಬ್ರೆಸ್ಟ್ಸ್ಟ್ರೋಕ್: ವೇದಾಂತ ವಿ.ಮಧಿರ (ಕರ್ನಾಟಕ, ಕಾಲ: 2ನಿ.08–41ಸೆ)–1, ಯಶ್ ಕಾರ್ತಿಕ್ (ಕರ್ನಾಟಕ)–2, ಸಮರ್ಥ್ ಪಿ.ಜೋಶಿ (ಕೇರಳ)–3.

100 ಮೀ. ಬ್ರೆಸ್ಟ್ಸ್ಟ್ರೋಕ್: ಗಣೇಶ್ ಚಕ್ರಧರ್ ಜಕ್ಕಾ (ಆಂಧ್ರಪ್ರದೇಶ, ಕಾಲ: 1ನಿ.08–28ಸೆ)–1, ತನುಜ್ ಸಿಂಗ್ (ಕರ್ನಾಟಕ)–2, ಜೋರ್ಡನ್ ಡೊಮಿನಿಕ್ ಫ್ರಾಂಕ್ಲಿನ್ (ತೆಲಂಗಾಣ)–3.

4x100 ಮೀ. ಫ್ರೀಸ್ಟೈಲ್ ರಿಲೆ: ಕರ್ನಾಟಕ (ಕಾಲ: 3ನಿ.43.19ಸೆ)–1, ತೆಲಂಗಾಣ–2, ಕೇರಳ–3

ವಾಟರ್ ಪೋಲೊ: ಫೈನಲ್: ಕೇರಳಕ್ಕೆ 12–6ರಿಂದ ಕರ್ನಾಟಕ ವಿರುದ್ಧ ಜಯ

ಬಾಲಕಿಯರು: 400 ಮೀ. ಫ್ರೀಸ್ಟೈಲ್: ಅದಿತಿ ವಿನಾಯಕ ರೆಲೆಕರ್ (ಕರ್ನಾಟಕ, ಕಾಲ: 4ನಿ.47.38ಸೆ)–1, ಆರ್ಣ ಎಂ.ಒಇ. (ತಮಿಳುನಾಡು)–2, ಮಿಹಿತಾ ದತ್ತ (ಕರ್ನಾಟಕ)–3

200 ಮೀ. ಬ್ರೆಸ್ಟ್ಸ್ಟ್ರೋಕ್: ತನ್ಮಯಿ ಧರ್ಮೇಶ್ (ಕರ್ನಾಟಕ, ಕಾಲ: 2ನಿ.37.78ಸೆ)–1, ಆರ್ಣ ಹೆಗ್ಡೆ (ಕರ್ನಾಟಕ)–2, ಆವಂತಿಕಾ ಪ್ರದೀಪ್ (ಕೇರಳ)–3

100 ಮೀ. ಬ್ರೆಸ್ಟ್ಸ್ಟ್ರೋಕ್: ಪಾವನಿ ಸರಾಯು (ಆಂಧ್ರಪ್ರದೇಶ, ಕಾಲ: 1ನಿ.20.85ಸೆ)–1, ಸಮನ್ವಿ (ಕರ್ನಾಟಕ)–2, ತಿಸ್ಯ ಸೋನಾರ್ (ಕರ್ನಾಟಕ)–3

4x100 ಫ್ರೀಸ್ಟೈಲ್ ರಿಲೆ: ಕರ್ನಾಟಕ (4ನಿ.16.69ಸೆ)–1, ತೆಲಂಗಾಣ–2, ಕೇರಳ–3

ವಾಟರ್ ಪೋಲೊ: ಫೈನಲ್: ಕೇರಳಕ್ಕೆ 11–8ರಿಂದ ಕರ್ನಾಟಕ ವಿರುದ್ಧ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.