108 ಆಂಬುಲೆನ್ಸ್‌ ಸೇವೆ 3 ತಿಂಗಳು ವಿಸ್ತರಣೆ; ಶಿವಾನಂದ

7

108 ಆಂಬುಲೆನ್ಸ್‌ ಸೇವೆ 3 ತಿಂಗಳು ವಿಸ್ತರಣೆ; ಶಿವಾನಂದ

Published:
Updated:

ವಿಜಯಪುರ:  ‘ರಾಜ್ಯದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 108 ಆಂಬುಲೆನ್ಸ್‌ ಸೇವೆಯನ್ನು ಈಗಾಗಲೇ ಮೂರು ತಿಂಗಳು ವಿಸ್ತರಿಸಲಾಗಿದೆ’ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

‘108 ಆಂಬುಲೆನ್ಸ್‌ ಸೇವೆ ಒದಗಿಸಲಿಕ್ಕಾಗಿ ಜಾಗತಿಕ ಟೆಂಡರ್‌ ಕರೆಯಲಾಗಿದೆ. ಕೇವಲ ಮೂರು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಒಂದೂವರೆ ವರ್ಷದಿಂದ ಈ ಪ್ರಕ್ರಿಯೆ ನಡೆದಿದೆ. ಗುತ್ತಿಗೆದಾರರಲ್ಲಿ ಲೋಪ ಕಂಡು ಬಂದಿದ್ದರಿಂದ ಮತ್ತೊಮ್ಮೆ ಟೆಂಡರ್‌ ಪ್ರಕ್ರಿಯೆ ನಡೆದಿದೆ’ ಎಂದು ಭಾನುವಾರ ಆಲಮಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗುತ್ತಿಗೆದಾರರು 108 ಸೇವೆ ಒದಗಿಸಲು ಹಿಂದೇಟು ಹಾಕಿದರೇ ಸರ್ಕಾರವೇ ನಡೆಸಲು ಸಿದ್ಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 400 ವಾಹನ ಖರೀದಿಸಿದ್ದು, ಬಾಡಿ ಬಿಲ್ಡಿಂಗ್‌ ಪ್ರಕ್ರಿಯೆ ನಡೆದಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !