ಸೋಮವಾರ, ಏಪ್ರಿಲ್ 19, 2021
23 °C

ವನ್ಯಜೀವಿ ಹಾವಳಿ: ರೈತರು ತತ್ತರ!

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ವನ್ಯಜೀವಿ ಧಾಮದ ಕಾಡು ಪ್ರಾಣಿಗಳ ಹಾವಳಿಯಿಂದ ಕಾಡಿನ ಹೃದಯ ಭಾಗದಲ್ಲಿ ಬರುವ ಶೇರಿಭಿಕನಳ್ಳಿ, ಮೋತಿಮೋಕ್ ತಾಂಡಾ, ಧರ್ಮಾಸಾಗರದ ರೈತರು ತತ್ತರಿಸಿದ್ದಾರೆ.ಪ್ರಸಕ್ತ ವರ್ಷ ಉತ್ತಮ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ನಳನಳಿಸುತ್ತಿವೆ ಆದರೆ ಹಿಂಡು ಹಿಂಡಾಗಿ ಬರುವ ಚುಕ್ಕಿಜಿಂಕೆ ಮತ್ತಿತರ ವನ್ಯಜೀವಿಗಳು  ತಮ್ಮ ಬೆಳೆಯನ್ನು ತಿಂದು ಹಾಳು ಮಾಡುತ್ತಿದ್ದು ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಇಲ್ಲಿನ ರೈತರು ಗೋಳು ತೋಡಿಕೊಂಡಿದ್ದಾರೆ.ಕಾಡಿನ ಗಡಿಗುಂಟ ವನ್ಯಜೀವಿಗಳು ಹೆಸರು, ಉದ್ದು ಬೆಳೆ ಹಾಳು ಮಾಡುತ್ತಿವೆ. ಇವುಗಳು ಬರದಂತೆ ತಡೆಯಲು ಹೊಲಗಳಲ್ಲಿ ಬೆಂಕಿ ಹಚ್ಚಿಕೊಂಡು ಹಗಲು ರಾತ್ರಿ ಕಾವಲು ಕಾಯುತ್ತಿದ್ದೇವೆ ಆದರೂ ನಮಗರಿವಿಲ್ಲದಂತೆ ಬರುವ ಕಾಡು ಪ್ರಾಣಿಗಳು ಬೆಳೆಗೆ ಹಾನಿ ಉಂಟು ಮಾಡುತ್ತಿವೆ. ಇದರಿಂದ ತಮಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಶೇರಿಭಿಕನಳ್ಳಿಯ ರಾಮಜಿ, ತಾನು ಹಾಗೂ ಮನ್ನು ಚಿನ್ನಾರಾಠೋಡ್ ದೂರಿದರು.ನಾವು ಒಂದು ದಿನದ ಹೊಲದಲ್ಲಿ ಕಾಣದಿದ್ದರೇ ಮುಗಿಯಿತು ನಮ್ಮ ಬೆಳೆ ಕೈಸೇರುವುದಿಲ್ಲ ಹೀಗಾಗಿ ಸರ್ಕಾರ ಗಡಿಗೊಂಡ ಬೇಲಿ ನಿರ್ಮಿಸಿಕೊಂಡು ನಮ್ಮ ಪಟ್ಟಾ ಜಮೀನಿನಲ್ಲಿ ವನ್ಯಜೀವಿಗಳು ಬಾರದಂತೆ ಪ್ರಾದೇಶಿಕ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಹುಸಿಯಾದ ನಿರೀಕ್ಷೆ


ಕೊಂಚಾವರಂ ಕಾಡು ವನ್ಯಜೀವಿ ಧಾಮವಾಗಿ ಘೋಷಿಸುವ ಸಂಬಂಧ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆ 2011ರ ಏಪ್ರಿಲ್ 12ರಂದು ಶೇರಿಭಿಕನಳ್ಳಿಗೆ ಆಗಮಿಸಿ ಪುನರ್ವಸತಿ ಕಲ್ಪಿಸಿದರೆ ಇಲ್ಲಿಂದ ಬೇರೆ ಕಡೆ ಹೋಗಲು ಸಿದ್ಧವಿದ್ದಿರಾ ಎಂದು ಕೇಳಿದ್ದರು. ಇದಕ್ಕೆ ತಾವು ಸಮ್ಮತಿ ಸೂಚಿಸಿದ್ದೇವೆ. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ.ನಿಮಗೆ ಬೇರೆ ಕಡೆ ಪುನರ್ ವಸತಿ ಕಲ್ಪಿಸುವುದಾಗಿ ಕುಂಬ್ಳೆ ಭರವಸೆ ನೀಡಿದ್ದರು. ಆದರೆ ಅದು ಈಡೇರದ ಕಾರಣ ನಮ್ಮ ನಿರೀಕ್ಷೆ ಹಾಗೂ ಅವರ ಭರವಸೆ ಹುಸಿಯಾಗಿದೆ ಎಂದು ವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.“ನಾವು ಬೆಂಗಳೂರಿಗೆ ಹೋಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಆದರೂ ಪ್ರಯೋಜನವಾಗಿಲ್ಲ ಎಂದ ತಾಂಡಾ ವಾಸಿಗಳು ವನ್ಯಜೀವಿಗಳಿಂದ ತಮಗೆ ಮುಕ್ತಿ ಕೊಡಿಸಿ” ಎಂದು ಅಲವತ್ತುಕೊಂಡರು. ಈ ಸಂದರ್ಭದಲ್ಲಿ ಫುಲಸಿಂಗ್, ಭದ್ರು, ಲಕ್ಷ್ಮಣ ವಾಲು, ಹರಿಸಿಂಗ್ ಮುಂತಾದವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.