ಕೇಂದ್ರ ಭ್ರಷ್ಟಾಚಾರ ಜನತೆ

7

ಕೇಂದ್ರ ಭ್ರಷ್ಟಾಚಾರ ಜನತೆ

Published:
Updated:
ಕೇಂದ್ರ ಭ್ರಷ್ಟಾಚಾರ ಜನತೆ

ಗುಲ್ಬರ್ಗ: ಏಪ್ರಿಲ್ ಮಾಸದಲ್ಲಿ ರಾಜ್ಯದ ಎಲ್ಲ ಮಂಡಲಗಳಲ್ಲಿ ಒಂದು ದಿನದ ಪಾದಯಾತ್ರೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಜನತೆಗೆ ತಿಳಿಸಬೇಕು ಎಂದು ಬಿಜೆಪಿ ಯುವಮೋರ್ಚಾ ರಾಜ್ಯ ಅಧ್ಯಕ್ಷ ಸುನೀಲ್‌ಕುಮಾರ್ ಕಾರ್ಕಳ ಹೇಳಿದರು. ಗುಲ್ಬರ್ಗದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಯುವಮೋರ್ಚಾದ ವಿಭಾಗೀಯ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.ಈ ಪಾದಯಾತ್ರೆ ಅಭಿಯಾನದಲ್ಲಿ ಕೇಂದ್ರ ಸರ್ಕಾರದ 2ಜಿ ಸ್ಪೆಕ್ಟ್ರಂ ಹಗರಣ, ಇಸ್ರೋ ಅವ್ಯವಹಾರ, ಕಾಮನ್‌ವೆಲ್ತ್ ಗೇಮ್ಸ್ ಗೋಲ್‌ಮಾಲ್, ಸ್ವಿಸ್ ಬ್ಯಾಂಕ್‌ನ ಕಪ್ಪುಹಣದ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ಏ.1ರಿಂದ 30ರ ತನಕ ಈ ಅಭಿಯಾನ ನಡೆಯಬೇಕು ಎಂದು ಅವರು ಹೇಳಿದರು.ಮೇ ತಿಂಗಳಲ್ಲಿ ಯುವಭಾರತ ಸಮಾವೇಶ ನಡೆಸಲು ನಿರ್ಧರಿಸಿದ್ದು, 18ರಿಂದ 25 ವರ್ಷದ ಯುವಕರ ಪಟ್ಟಿಯನ್ನು ಪ್ರತಿ ಮಂಡಲ ಮಟ್ಟದಲ್ಲಿ ತಯಾರಿಸಬೇಕು. ಅಂತಹ ಯವಜನತೆಯನ್ನು ಸೇರಿಸಿ ಸಮಾವೇಶ ನಡೆಸಲಾಗುವುದು ಎಂದರು.ಈ ಕಾರ್ಯಕ್ರಮಗಳ ಮೂಲಕ ಪಕ್ಷದಲ್ಲಿ ಯುವಕರನ್ನು ಸಂಘಟಿಸುವುದು ಹಾಗೂ ಪಕ್ಷವನ್ನು ತಳಮಟ್ಟದಲ್ಲಿ ಭದ್ರಗೊಳಿಸಬೇಕಾದ ಜವಾಬ್ದಾರಿ ಪದಾಧಿಕಾರಿಗಳ ಮೇಲಿದೆ ಎಂದರು.

ಇದಕ್ಕೂ ಮೊದಲು ಐವಾನ್-ಎ-ಶಾಹಿಯಲ್ಲಿನ ಪಕ್ಷದ ಕಚೇರಿಯಿಂದ ಎಚ್‌ಕೆಸಿಸಿಐ ಸಭಾಂಗಣಕ್ಕೆ ಬೈಕ್ ರ್ಯಾಲಿಯಲ್ಲಿ ಬರಲಾಯಿತು. ಆ ಬಳಿಕ ಪಕ್ಷದ ಮುಖಂಡರ ಚರ್ಚೆ ನಡೆಯಿತು. ಯುವಮೋರ್ಚಾದ ರಾಜ್ಯಸಮಿತಿ ಪದಾಧಿಕಾರಿಗಳು ಚರ್ಚಿಸಿದ ಬಳಿಕ ಮೇಲಿನ ಕಾರ್ಯಕ್ರಮಗಳ ಬಗ್ಗೆ ಸುನೀಲ್‌ಕುಮಾರ್ ತಿಳಿಸಿದರು.ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಅಶೋಕ ಹೂಕ್ರಾಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರನಾಥ ಪಾಟೀಲ, ಪಕ್ಷದ ಜಿಲ್ಲಾಧ್ಯಕ್ಷ ರಾಜಕುಮಾರ ತೇಲ್ಕೂರ, ಜಿ.ಪಂ. ಅಧ್ಯಕ್ಷ ಶಿವಪ್ರಭು ಪಾಟೀಲ, ಗುರುರಾಜ ಭರತನೂರ, ಪರಶುರಾಮ, ಭರತ್‌ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry