ಪಯೋನಿಯರ್ಸ್‌ ತಂಡಕ್ಕೆ ಚಾಂಪಿಯನ್ ಪಟ್ಟ

7

ಪಯೋನಿಯರ್ಸ್‌ ತಂಡಕ್ಕೆ ಚಾಂಪಿಯನ್ ಪಟ್ಟ

Published:
Updated:

ಗುಲ್ಬರ್ಗ: ಬೆಂಗಳೂರು ಪಯೋನಿಯರ್ಸ್‌ ತಂಡವು ಬಾಲಕರ ವಿಭಾಗದಲ್ಲಿ ಹಾಗೂ ನವೋದಯ ಕ್ಲಬ್ ಟಿ. ನರಸಿಪುರ ಬಾಲಕಿಯರ ತಂಡಗಳು ಚಾಂಪಿಯನ್ ಷಿಪ್ ಗೆಲುವು ಪಡೆದು ಪ್ರಶಸ್ತಿಯ ಗೆಲುವಿನ ಸಂಭ್ರಮಾಚರಣೆ ಮಾಡುವುದರೊಂದಿಗೆ  ಇಲ್ಲಿನ ಎಸ್. ನಿಜಲಿಂಗಪ್ಪ ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 18 ವರ್ಷ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರ ಕೊಕ್ಕೊ ಟೂರ್ನಿಗೆ ಸೋಮವಾರ ವಿಧ್ಯುಕ್ತ ತೆರೆ ಬಿತ್ತು.ಸೆಮಿಫೈನಲ್‌ನಲ್ಲಿ ಹಾವೇರಿ ತಂಡವನ್ನು ಮಣಿಸುವ ಮೂಲಕ ಪೈನಲ್‌ಗೆ ಲಗ್ಗೆ ಹಾಕಿದ ಹಾಸನಾಂಬ ಹಾಸನ ತಂಡವು ಬೆಂಗಳೂರು ತಂಡದ ವಿರುದ್ಧ ಸೋಲು ಅನುಭವಿಸುವ ಮೂಲಕ ಚಾಂಪಿಯನ್ ಕನಸು ನುಚ್ಚು ನುರಾಯಿತು. ಉತ್ತಮ ಆಟ ಪ್ರದರ್ಶನ ಮಾಡಿದ ಆಟಗಾರರು ಎದುರಾಳಿ ತಂಡದ ವಿರುದ್ಧ ಗೆಲುವು ಸಾಧಿಸಿಸುವಲ್ಲಿ ಎಡವಿದರು. ಪ್ರಭಲವಾದ ಸ್ಪರ್ಧೆ ಒಡ್ಡಿದ ಹಾಸನ ತಂಡವು ಸೋಲಿನ ರುಚಿ ಕಂಡರು ರನರ್‌ಗೆ ಖುಷಿ ಪಡುವಂಥಾಯಿತು. ಬೆಂಗಳೂರು ತಂಡದ ಸುದರ್ಶನ ಹಾಗೂ ಬಾಲಾಜಿ ಆಟದ ಪಟ್ಟುಗಳಿಗೆ ಮಣಿದ ಎದುರಾಳಿ ತಂಡಕ್ಕೆ ನಡುಕ ಹಟ್ಟುವಂತೆ ಮಾಡಿತು.ಸಕ್ರಿಯ ದಾಳಿ ಮಾಡುವ ಮೂಲಕ 3 ಅಂಕಗಳನ್ನು ಪಡೆದುಕೊಂಡ ಸುದರ್ಶನ ಹಾಗೂ 4 ಅಂಕಗಳನ್ನು ಪಡೆದ ಬಾಲಾಜಿ ಹಾಸನ ತಂಡಕ್ಕೆ ಆಘಾತ ಉಂಟು ಮಾಡಿದರು. ರಕ್ಷಣೆಯಲ್ಲಿಯೂ ಉತ್ತಮ ಆಟ ಪ್ರದರ್ಶನ ಮಾಡಿದ ಆಟಗಾರರು ಎರಡು ಇನಿಂಗ್ಸ್‌ನಲ್ಲಿ ಕ್ರಮವಾಗಿ 4ನಿಮಿಷ 3 ಸೆಕೆಂಡು ಹಾಗೂ 3ನಿಮಿಷ 80 ಸೆಕೆಂಡು  ಅಮೋಘವಾದ ಆಟವನ್ನು ಪ್ರದರ್ಶನ ಮಾಡಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಬಸವರಾಜ ಕೂಡಾ ತಂಡಕ್ಕೆ ಶಕ್ತಿ ತುಂಬಿದರು.ನಂತರ ನಡೆದ ಮಹಿಳೆಯರ  ಫೈನಲ್ ಟೂರ್ನಿಯಲ್ಲಿ ಗೆಲುವಿನ ಅದೃಷ್ಟ ಪರೀಕ್ಷೆಗೆ ಇಳಿದ ಕೆಕೆಒ ಕ್ಯಾತನಹಳ್ಳಿ ತಂಡವು ಎದುರಾಳಿ ಟಿ. ನರಸಿಪುರ ನವೋದಯ ಕ್ಲಬ್ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 7-4 ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 13-8 ಅಂಕಗಳ ಮೂಲಕ ಗೆಲುವಿನ ನಗೆ ಬೀರಿತು.ಆರಂಭಿಕ ಮೈದಾನಕ್ಕೆ ಚೆಸಿಂಗ್‌ಗೆ ಇಳಿದ ನವೋದಯ ತಂಡದ ಆಟಗಾರರು ಎದುರಾಳಿ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಉಂಟು ಮಾಡಿತು. ವೀಣಾ ಹಾಗೂ ಮೇಘನಾ ಕ್ರಮವಾಗಿ 3 ಹಾಗೂ 6 ಅಂಕಗಳನ್ನು ಪಡೆದರು.5ನಿಮಿಷ 20 ಸೆಕೆಂಡು ಆಡಿದ ವೀಣಾ ನಾಟೌಟ್ ಆದರೂ,  ಮೇಘಾ 2ನಿಮಿಷ 30ಸೆಕೆಂಡು ಆಟ ಆಡಿದರು. ರಾಜ್ಯ ಮಟ್ಟದಲ್ಲಿ ಹಲವು ಬಾರಿ ಆಡಿದ ಅನುಭವ ಪಡೆದಿದ್ದ ಕ್ಯಾತನಹಳ್ಳಿ ತಂಡಕ್ಕೆ ನವೋದಯ ಕ್ಲಬ್ ತಂಡವು ಉತ್ತಮ ಆಟದ ಪ್ರದರ್ಶನ ಮೂಲಕ ಆಘಾತ ನೀಡಿತು. ಫೋರ್ ಡೈ, ಫ್ಲಾಟ್ ಡೈ, ಟ್ಯಾಪಿಂಗ್ ಪಟ್ಟುಗಳನ್ನು ಅಳವಡಿಸಿಕೊಂಡ ಆಟಗಾರರು ಎದುರಾಳಿ ತಂಡಕ್ಕೆ  ಸೋಲಿನ ರುಚಿ ಉಣಬಡಿಸಿದರು.ಕ್ಯಾತನಹಳ್ಳಿ ತಂಡವು ವಿರಾಮದ ಆಟದ ನಂತರ ಗೆಲುವಿನ ಉತ್ಸುಕದಲ್ಲಿದ್ದರು ಸೋಲು ಮಾತ್ರ ತಂಡವನ್ನು ಬಿಡಲಿಲ್ಲ. ಸೆಮಿಫೈನಲ್‌ನಲ್ಲಿ ಪ್ರಭಲವಾದ ತಂಡಗಳನ್ನು ಮಣಿಸಿ ಫೈನಲ್‌ಗೆ ಪ್ರವೇಶ ಮಾಡಿದ್ದ ಕ್ಯಾತನಹಳ್ಳಿ ತಂಡವು ಸೋಲು ಅನುಭವಿಸಿ ರನ್‌ರ್‌ಗೆ ಸಂತಸ ಪಡುವಂತಾಯಿತು.ವಿಎಸಿ ಮಂಡ್ಯ ಬಾಲಕಿಯರ ತಂಡವು ತೃತೀಯ ಸ್ಥಾನ ಪಡೆಯಿತು. ಶಿವಮೊಗ್ಗ ಬಾಲಕರ ತಂಡವು ತೃತೀಯ ಸ್ಥಾನಕ್ಕೆ ಖುಷಿ ಪಡುವಂತಾಯಿತು.ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಚಾಂಪಿಯನ್ ತಂಡಗಳು ಹರಿಯಾಣದಲ್ಲಿ ಅಕ್ಟೋಬರ್ 29ರಿಂದ ನಡೆಯುವ ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಲಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry