ಬುಧವಾರ, ಏಪ್ರಿಲ್ 21, 2021
30 °C

ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಸ್ನಾತಕ ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶದಲ್ಲಿ ರಾಜ್ಯ ಸರ್ಕಾರ ರೂಪಿಸಿದ ತಪ್ಪು ನೀತಿಯಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಇದನ್ನು ತಕ್ಷಣ ಸರಿಪಡಿಸದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರುಣಕುಮಾರ ಎಸ್.ಪಾಟೀಲ ಎಚ್ಚರಿಸಿದರು.ನಮ್ಮ ರಾಜ್ಯದಲ್ಲಿ ಲಭ್ಯವಿರುವ ಸ್ನಾತಕ ವೈದ್ಯಕೀಯ ಕೋರ್ಸಿನ ಸರ್ಕಾರಿ ಕೋಟಾ ಸೀಟುಗಳನ್ನು ಅನ್ಯರಾಜ್ಯಗಳ ವಿದ್ಯಾರ್ಥಿಗಳು ಕಬಳಿಸುತ್ತಿದ್ದಾರೆ. ಸರ್ಕಾರದ ತಪ್ಪುನೀತಿಗಳೇ ಸಮಸ್ಯೆಯ ಮೂಲ ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.ರಾಜ್ಯದ ಸರ್ಕಾರಿ ಕೋಟಾ ಪಿ.ಸಿ. ಸೀಟುಗನ್ನು ಪಡೆಯಲು ಹೊರರಾಜ್ಯದ ವಿದ್ಯಾರ್ಥಿಗಳೂ ಅರ್ಹರಾಗಿರುವುದರಿಂದ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೊರರಾಜ್ಯದ ವಿದ್ಯಾರ್ಥಿಗಳು ನಮ್ಮ ರಾಜ್ಯದ ಯಾವುದೇ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಐದು ವರ್ಷದ ಎಂಬಿಬಿಎಸ್ ಕೋರ್ಸ್ ಮುಗಿಸಿದ ತಕ್ಷಣ ನಮ್ಮ ರಾಜ್ಯದ ವರೆಂದು ಪರಿಗಣಿಸಿ, ಸಿಇಟಿ ಮೂಲಕ ಸ್ನಾತ ಕೋತ್ತರ ಕೋ ರ್ಸಿಗೂ ಆಯ್ಕೆ ಯಾಗಲು ಅವರಿಗೂ ಅವಕಾಶ ನೀಡಲಾಗುತ್ತದೆ. ಇದರಿಂದ ನಮ್ಮ ರಾಜ್ಯದವರಿಗೆ ಇರುವ ಅವಕಾಶ ಅನ್ಯರಾಜ್ಯಗಳ ವಿದ್ಯಾರ್ಥಿಗಳ ಪಾಲಾಗುತ್ತದೆ ಎಂದು ವಿಶ್ಲೇಷಿಸಿದರು.ನೆರೆ ರಾಜ್ಯಗಳಲ್ಲಿ ಸರ್ಕಾರಿ ಕೋಟಾದ ಪಿ.ಜಿ. ಸೀಟುಗಳನ್ನು ತಮ್ಮ ತಮ್ಮ ರಾಜ್ಯಗಳ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಲಾಗಿದೆ. ಆದರೆ ನಮ್ಮಲ್ಲಿ ಇಂಥ ನಿಯಮಾವಳಿ ರೂಪಿಸದಿರುವುದು ರಾಜ್ಯದ ಪ್ರತಿಭಾವಂತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ ಎಂದರು.ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 15ರಷ್ಟು ಸೀಟುಗಳು ಅಖಿಲ ಭಾರತ ಸಿಇಟಿ ಪರೀಕ್ಷೆಯಲ್ಲಿ ಹೊರರಾಜ್ಯದವರಿಗೆ ಮೀಸಲಿದ್ದು, ಇತರ ರಾಜ್ಯದವರಿಗೆ ತಮಗೆ ಬೇಕಾದಲ್ಲಿ ಪ್ರವೇಶ ಪಡೆಯಲು ಅವಕಾಶವಿದೆ. ಅಂತೆಯೇ ಕಾಮೆಡ್-ಕೆ ಸಿಇಟಿ ಪರೀಕ್ಷೆಯನ್ನು ತೆಗೆದುಕೊಂಡು ಖಾಸಗಿ ಕಾಲೇಜುಗಳ ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾದಡಿ ಪಡೆದುಕೊಳ್ಳಬಹುದು. ಅನಿವಾಸಿ ಭಾರತೀಯರಿಗೂ ಇದೇ ರೀತಿ ಪ್ರವೇಶ ಪಡೆಯಲು ಅವಕಾಶವಿದೆ. ಇದಕ್ಕೆ ಸಂಘಟನೆಯ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಬಳ್ಳಾರಿ, ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ಕಾಲೇಜುಗಳಲ್ಲಿ ಅಖಿಲ ಭಾರತ ಸಿಇಟಿ ಬರೆದ ಅಭ್ಯರ್ಥಿಗಳಿಗೆ ಇರುವ ಶೇಕಡ 15 ಕೋಟಾ ಹೊರತುಪಡಿಸಿ, ಉಳಿದ ಶೇ. 85ರಷ್ಟು ಸೀಟನ್ನು ನಮ್ಮ ರಾಜ್ಯದವರಿಗೇ ಮೀಸಲಿಡಬೇಕು ಎಂದು ಒತ್ತಾಯಿಸಿದರು.ಎಲ್ಲ ಖಾಸಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಶೇ. 50ರಷ್ಟು ಸರ್ಕಾರಿ ಕೋಟಾ ಇರುತ್ತದೆ. ಇದರಲ್ಲೂ ಹೊರರಾಜ್ಯದ ವಿದ್ಯಾರ್ಥಿಗಳು ಐದು ವರ್ಷ ಎಂಬಿಬಿಎಸ್ ಶಿಕ್ಷಣ ಪಡೆದರೆ, ಇದೇ ರಾಜ್ಯದವರೆಂದು ಪರಿಗಣಿಸುತ್ತಿರುವುದು ಖಂಡನೀಯ ಎಂದರು.ಗುಲ್ಬರ್ಗದ ಎಂಆರ್‌ಎಂಸಿ ಕಾಲೇಜಿನ ಎಂಟು ಸ್ನಾತಕೋತ್ತರ ಪದವಿ ಸೀಟುಗಳ ಪೈಕಿ 3 ಸೀಟುಗಳು ನೆರೆರಾಜ್ಯದವರ ಪಾಲಾಗಿದೆ. ಆದ್ದರಿಂದ ಇಂಥ ಪ್ರಮಾದ ತಪ್ಪಿಸಲು ನಿಯಮಾವಳಿಗೆ ಸೂಕ್ತ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.