ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ
Published 18 ಜನವರಿ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಜೀವನದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳುವ ಸನ್ನಿವೇಶಗಳು ನಡೆಯಲಿವೆ. ನಿರುದ್ಯೋಗಿ ಯುವಕರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಕಪ್ಪುಬಣ್ಣ ಶುಭ ತರುವುದು.
ವೃಷಭ
ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಜವಾಬ್ದಾರಿತನದಿಂದ ಲಾಭಕ್ಕೆ ತೊಂದರೆ ಉಂಟಾಗಬಹುದು. ನೀವೇ ಖುದ್ದಾಗಿ ನಿಂತು ಮೇಲುಸ್ತುವಾರಿ ನೋಡಿಕೊಳ್ಳುವುದು ಸೂಕ್ತ.
ಮಿಥುನ
ಪಿತ್ರಾರ್ಜಿತ ಆಸ್ತಿಯ ವ್ಯವಹಾರಗಳು ಒಂದು ಹಂತ ತಲುಪಿದ್ದಕ್ಕೆ ಸಮಾಧಾನವಾಗುವುದು. ಆಡುವ ಸುಳ್ಳು ಮಾತಿನ ಫಲವನ್ನು ತಕ್ಷಣದಲ್ಲಿ ಅನುಭವಿಸುವಂತಾಗುವುದು. ಮುಂದಿನ ನಡೆಯ ಬಗ್ಗೆ ಗಮನಹರಿಸಿ.
ಕರ್ಕಾಟಕ
ನಡವಳಿಕೆಯು ಮನೆಯವರಲ್ಲಿ ಸಂತಸವನ್ನು ಮೂಡಿಸುತ್ತದೆ. ದಿನದ ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲವಾಗಿದೆ.ಆರ್ಥಿಕ ಭಾಗವು ತುಂಬಿಕೊಂಡಿರುತ್ತದೆ.
ಸಿಂಹ
ಮನೆಯ ಪರಿಸ್ಥಿತಿ ಅರಿವಿದ್ದರೂ ಪ್ರಕಾರದ ಆದರ್ಶ ವೃತ್ತಿಗಾಗಿಯೇ ಹಲವು ದಿನಗಳ ಕಾಯುವಿಕೆ ಸರಿಯಾದುದಲ್ಲ. ಅಪೇಕ್ಷಿಗಳಿಗೆ ಸಂತಾನ ಭಾಗ್ಯ ದೊರೆಯುವುದು. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ.
ಕನ್ಯಾ
ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ, ಜಯ ನಿಮ್ಮದಾಗುತ್ತದೆ. ಧೈರ್ಯಗೆಡುವ ಪ್ರಸಂಗವಿಲ್ಲ. ಹಾಲು, ಮೊಸರು, ತುಪ್ಪದಂತಹ ಗೋ ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭವಾಗಲಿದೆ.
ತುಲಾ
ಕೆಲಸ ಮಾಡುವ ಮೊದಲು ಅದರ ಬಗ್ಗೆ ಸಾಕಷ್ಟು ಯೋಚಿಸಿ ನಂತರ ತೀರ್ಮಾನಿಸಿ. ಕಾರ್ಯಕ್ಷೇತ್ರದಲ್ಲಿ ಕೆಲವು ಮೂಲಭೂತ ಬದಲಾವಣೆಗಳಾಗುವ ಸಾಧ್ಯತೆ ಇದೆ. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಡುವುದು ಒಳ್ಳೆಯದು.
ವೃಶ್ಚಿಕ
ವ್ಯಾಪಾರ ವ್ಯವಹಾರದಲ್ಲಿ ಲಾಭ, ನಷ್ಟ ಏನೇ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ. ಅನಿರೀಕ್ಷಿತ ಪ್ರಯಾಣವು ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ. ಚರ್ಮದ ಒರಟಾಗುವಿಕೆಯು ಬಾಧಿಸಬಹುದು.
ಧನು
ಕುಟುಂಬ ಸದಸ್ಯರ ಮುಂದೆ ಬಾಯಿ ತಪ್ಪಿ ಹೇಳಿದ ಸತ್ಯದಿಂದ ಯುದ್ಧದ ಪರಿಸ್ಥಿತಿ ಎದುರಾಗಬಹುದು. ಹಿಂಜರಿಕೆಯ ಸ್ವಭಾವದಿಂದ ಬೇಕಾದಂಥ ವೃತ್ತಿ ಸಂಪಾದಿಸಲು ಕಷ್ಟವಾಗುತ್ತದೆ.
ಮಕರ
ವ್ಯವಹಾರ ಪರಊರಿನಲ್ಲಿ ವಿಸ್ತರಿಸುವ ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪದಿನ ಮುಂದಕ್ಕೆ ತಳ್ಳುವುದು ಸೂಕ್ತವೆನ್ನಿಸುವುದು. ಭೋಜನದ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುವಿರಿ.
ಕುಂಭ
ಮಗನ ನೂತನ ಕೆಲಸದ ವಿಚಾರವಾಗಿ ಆಪ್ತರೊಬ್ಬರಲ್ಲಿ ಸಲಹೆ ಕೇಳಿಕೊಳ್ಳುವಿರಿ. ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ. ಪ್ರತಿಷ್ಠಿತ ಅಧಿಕಾರಕ್ಕಾಗಿ ಸಮಬಲ ಹೋರಾಟ ನಡೆಸುವಿರಿ.
ಮೀನ
ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ಕಥೆ, ಕವನದ ಬರಹಗಾರರಿಗೆ ಅವಕಾಶಗಳ ಸುರಿಮಳೆ ಎದುರಾಗುವುದು. ಕರಿದ ತಿಂಡಿ ತಿನಿಸು ಪದಾರ್ಥಗಳ ಮಾರಾಟಗಾರರಿಗೆ ಲಾಭ ಸಿಗುವುದು.