ತುಮಕೂರು: ಬಾಗಲಕೋಟೆ ಹಾಗೂ ವಿಜಯಪುರದ ಸೈಕ್ಲಿಸ್ಟ್ಗಳು ಇಲ್ಲಿ ನಡೆಯುತ್ತಿರುವ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾನುವಾರ ಚಿನ್ನದ ಪದಕ ಪಡೆದು ಮಿಂಚಿದರು.

20 ಕಿಲೊ ಮೀಟರ್ ಟೀಮ್ ಟೈಮ್ ಟ್ರೈಲ್ ಸ್ಪರ್ಧೆಯಲ್ಲಿ ಬಾಗಲಕೋಟೆಯ ಪೂಜಾ ಮಠಪತಿ, ನಿವೇದಿತಾ ಕೊಕ್ಕನವರ, ನಂದಾ ಚಿಂಚಖಂಡಿ ಅವರ ತಂಡ ಪ್ರಥಮ ಸ್ಥಾನ ಪಡೆಯಿತು. ವಿಜಯಪುರದ ಪಾಯಲ್ ಚವಾಣ್, ಅಕ್ಷತಾ ಭೂತನಾಳ, ಕಾವೇರಿ ಡೊಳ್ಳಿ ತಂಡ ದ್ವಿತೀಯ, ಧಾರವಾಡದ ಕೀರ್ತಿ ನಾಯಕ, ಭೀಮವ್ವ ಮಾಳಗೋಡ, ಶೈಲಾ ನ್ಯಾಮಗೌಡ ತಂಡ ತೃತೀಯ ಸ್ಥಾನಕ್ಕೆ ಭಾಜನವಾಯಿತು.

30 ಕಿ.ಮೀ ಮಾಸ್ಡ್ ಸ್ಟಾರ್ಟ್ ಸ್ಪರ್ಧೆಯಲ್ಲಿ ವಿಜಯಪುರದ ಪಾಯಲ್ ಚವಾಣ್ ಪ್ರಥಮ, ಬಾಗಲಕೋಟೆಯ ಪೂಜಾ ಮಠಪತಿ ದ್ವಿತೀಯ ಮತ್ತು ಬಾಗಲಕೋಟೆಯ ನಂದಾ ಚಿಂಚಖಂಡಿ ತೃತೀಯ ಸ್ಥಾನ ಪಡೆದರು.

ಪುರುಷರ ವಿಭಾಗದ 40 ಕಿ.ಮೀ ಟೀಮ್ ಟೈಮ್ ಟ್ರೈಲ್ ಸ್ಪರ್ಧೆಯಲ್ಲಿ ಬಾಗಲಕೋಟೆಯ ಮಲ್ಲಿಕಾರ್ಜುನ ಎಸ್.ಶಿರೋಳ, ಸಾಗರ ಪೂಜಾರಿ, ಶ್ರೀಶೈಲ್ ವೀರಾಪೂರ, ಉದಯಕುಮಾರ ಹಂಡಿ ತಂಡ ಪ್ರಥಮ ಸ್ಥಾನ ಪಡೆಯಿತು.

ಮೈಸೂರಿನ ಕೆ.ವಿ.ವೈಶಾಖ, ಜಿ.ಸೋಮೇಶ, ಸಿ.ಚರಿತ್ಗೌಡ ತಂಡ ದ್ವಿತೀಯ ಸ್ಥಾನ ಮತ್ತು ವಿಜಯಪುರದ ಯಲಗೂರಪ್ಪ ಗಡ್ಡಿ, ಗೌತಮ್ ಬೇಲೇರಿ, ಸದಾನಂದ ಬಿರಾದಾರ, ಸಚಿನ್ ರಂಜಣಗಿ ತಂಡ ತೃತೀಯ ಸ್ಥಾನ ಪಡೆಯಿತು.

40 ಕಿ.ಮೀ ಮಾಸ್ಡ್ ಸ್ಟಾರ್ಟ್: ನೀಲ್ಐವರ್ ಡಿಸೋಜಾ (ಬೆಳಗಾವಿ)–1, ಸ್ವಯಂ ಎಂ.ಕಠಾರೆ (ಧಾರವಾಡ)–2, ಉದಯಕುಮಾರ ಹಂಡಿ (ಬಾಗಲಕೋಟೆ)–3.

ನೆಟ್ಬಾಲ್ನಲ್ಲಿ ಹಾಸನ ಚಾಂಪಿಯನ್: ನೆಟ್ಬಾಲ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಮತ್ತು ಹಾಸನ ತಂಡಗಳು ಚಾಂಪಿಯನ್ ಆಗಿ ಹೊರ ಹೊಮ್ಮಿದವು. ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ತುಮಕೂರು– ಹಾಸನ ತಂಡ ಮುಖಾಮುಖಿಯಾದವು. 36 ಅಂಕ ಗಳಿಸಿದ ಹಾಸನ ತಂಡ ಗೆಲುವು ಸಾಧಿಸಿತು. 35 ಅಂಕ ಗಳಿಸಿದ ತುಮಕೂರು ತಂಡ ಪ್ರಬಲ ಪೈಪೋಟಿ ನೀಡಿತು. ಕೊನೆಯ ಘಳಿಗೆಯ ತನಕ ಪಂದ್ಯ ರೋಚಕತೆಯಿಂದ ಕೂಡಿತ್ತು. ಅಂತಿಮವಾಗಿ ಹಾಸನ ತಂಡದ ಆಟಗಾರರು ಒಂದು ಅಂಕ ಮುನ್ನಡೆ ಪಡೆದು ಗೆಲುವಿನ ನಗೆ ಬೀರಿದರು.

ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಬೆಂಗಳೂರು ನಗರ ತಂಡಗಳು ಸೆಣಸಾಟ ನಡೆಸಿದವು. 28-17 ಅಂಕಗಳಿಂದ ದಕ್ಷಿಣ ಕನ್ನಡ ತಂಡ ಗೆಲುವು ಸಾಧಿಸಿತು.

ಡ್ರ್ಯಾಗನ್ ಬೋಟ್ ಸ್ಪರ್ಧೆಯ 200 ಮೀಟರ್ ವಿಭಾಗದಲ್ಲಿ ಚಿತ್ರದುರ್ಗ ತಂಡ ಬಂಗಾರದ ಪದಕ ಪಡೆಯಿತು. ಬೆಂಗಳೂರು ನಗರ ಬೆಳ್ಳಿ, ಬೆಂಗಳೂರು ಗ್ರಾಮಾಂತರ ತಂಡ ಕಂಚಿನ ಪದಕಕ್ಕೆ ಭಾಜನವಾಯಿತು.

ಟೆನಿಸ್: ಬೆಂಗಳೂರು ತಂಡಕ್ಕೆ ಪ್ರಶಸ್ತಿ

ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಂಗಳೂರು ನಗರ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದವು. ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಬೆಂಗಳೂರು ನಗರ ತಂಡ 3-1ರಿಂದ ದಕ್ಷಿಣ ಕನ್ನಡ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು. ಮಹಿಳಾ ವಿಭಾಗದಲ್ಲಿ ಬೆಂಗಳೂರು ತಂಡ 3-0 ಸೆಟ್ಗಳಿಂದ ದಕ್ಷಿಣ ಕನ್ನಡ ತಂಡವನ್ನು ಮಣಿಸಿತು.

ಜುಡೋ: ಪುರುಷರ ವಿಭಾಗ– 81 ಕೆ.ಜಿ– ಮೊಹಮ್ಮದ್ ಯಾಕುಬ್ ಖಾನ್ (ಬೆಂಗಳೂರು ನಗರ)–1 ಸುದೀಪ್ ರಮೇಶ್ ರಾಥೋಡ್ (ಬೆಂಗಳೂರು ನಗರ)–2 ಪವನ್ ವಿಕಾಸ್ (ಬೆಂಗಳೂರು ನಗರ)–3. 90 ಕೆ.ಜಿ– ಮನೋಜ್ ನಾಯ್ದು (ಬೆಂಗಳೂರು ನಗರ)–1 ಬಿ.ಎಸ್.ರೋಹನ್ (ಬೆಳಗಾವಿ)–2 ಅಭಿಷೇಕ್ ವಿ.ಕಾಲೆ (ವಿಜಯಪುರ)–3. 100 ಕೆ.ಜೆ– ಎಸ್.ರವಿಚಂದ್ರ ಡೇರ್ (ಬೆಂಗಳೂರು ನಗರ)–1 ಸಂದೀಪ್ ಪಿ.ಲಮಾಣಿ (ವಿಜಯಪುರ)–2 ಓಂಕಾರ್ ಮಿನಾಚೆ (ಬೆಳಗಾವಿ)–3. 100 ಕೆ.ಜಿ. ಮೇಲ್ಪಟ್ಟವರು– ಎನ್.ವಿಕಾಸ್ ಕುಮಾರ್ (ಮೈಸೂರು)–1 ರಾಹುಲ್ ಲಂಕೆನ್ನವರ್ (ಬೆಳಗಾವಿ)–2. ಮಹಿಳೆಯರ ವಿಭಾಗ: 52 ಕೆ.ಜಿ– ಎಸ್.ಆರತಿ (ವಿಜಯಪುರ)–1 ಸ್ವಾತಿ ನಾಯಕ್ (ಶಿವಮೊಗ್ಗ)–2 ಐಶ್ವರ್ಯ (ಮಂಡ್ಯ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.