ಆರೋಗ್ಯ- ಜವಾರಿ ಆಹಾರ ಮಾದರಿ

7

ಆರೋಗ್ಯ- ಜವಾರಿ ಆಹಾರ ಮಾದರಿ

Published:
Updated:
ಆರೋಗ್ಯ- ಜವಾರಿ ಆಹಾರ ಮಾದರಿ

ಗುಲ್ಬರ್ಗ: ಆಹಾರ ಮತ್ತು ಆರೋಗ್ಯಕ್ಕಾಗಿ ವಿಶ್ವವೇ ಭಾರತದ ಸುಸ್ಥಿರ ಪದ್ಧತಿಯೆಡೆಗೆ ನೋಡುತ್ತಿದ್ದರೆ, ನಾವು ವಿದೇಶಿಗರು ಕೈ ಬಿಟ್ಟ ಪ್ರಕ್ರಿಯೆಗಳಿಗೆ ಮೊರೆ ಹೋಗುತ್ತಿರುವುದು ವಿಷಾದನೀಯ ಎಂದು ಅಮೆರಿಕಾದ ಒಕ್ಲಾಹಾಮಾ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರ ಬಿರಾದಾರ    ಹೇಳಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಸೋಮವಾರ ಆಯೋಜಿಸಿದ `ಆಹಾರ ಭದ್ರತೆ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ~ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತ          ನಾಡಿದರು.ಫಲವತ್ತ ಪ್ರದೇಶದಲ್ಲಿ ಬೆಳೆಯುತ್ತಿರುವ ನಗರ, ಕೈಗಾರಿಕೆ, ಹವಾಮಾನ ವೈಪರೀತ್ಯ, ಜನಸಂಖ್ಯೆ ಹೆಚ್ಚಳ, ನೈಸರ್ಗಿಕ ಸಂಪನ್ಮೂಲಗಳ ಇತಿಮಿತಿ, ಮಾರುಕಟ್ಟೆ ಸಂಸ್ಕೃತಿ, ಅಗತ್ಯಕ್ಕಿಂತ ಹೆಚ್ಚು ಆಹಾರ-ಶಕ್ತಿ ವ್ಯಯ, ನೀರು- ಭೂಮಿಯ ಮಿತಿ, ದಾಸ್ತಾನು ಸಮಸ್ಯೆ, ಸಂಪತ್ತಿನ ಅಸಮಾನ ಹಂಚಿಕೆ-ಬಳಕೆ, ರಾಜಕೀಯ ನೀತಿ ನಿರೂಪಣೆಯ ವೈಫಲ್ಯ ಕಾರಣಗಳಿಂದ ಭವಿಷ್ಯದಲ್ಲಿ ಆಹಾರ ಕೊರತೆ ಕಾಡುವುದು. ಇದನ್ನು ನಿವಾರಿಸುವುದೇ ಜಾಗತಿಕ  ಸವಾಲು ಎಂದರು.ಹಿಂದೊಮ್ಮೆ ಆಹಾರ ಕೊರತೆ ಕಾಡಿತ್ತು. ಆಗ `ಹಸಿರು ಕ್ರಾಂತಿ~ ನಡೆಸಲಾಯಿತು. ಅದರ ಅಪಾಯವನ್ನು ಈಗ ಕಾಣುತ್ತಿದ್ದೇವೆ. ರಷ್ಯಾದ ಕೆಲವೆಡೆ ಭೂಮಿ ಬಳಕೆಗೆ ಬಾರದಾಗಿದೆ. ಪ್ರಯೋಗಗಳನ್ನು ಭೂಮಿ ಎಷ್ಟು ದಿನ ತಡೆಯಬಹುದು? ಜೀವ ವೈವಿಧ್ಯ ಕಾಪಾಡಬೇಕು. ಹೀಗಾಗಿ ವಿಶ್ವ ಸುಸ್ಥಿರತೆ ಕಡೆ ಗಮನ ಹರಿಸುತ್ತಿದೆ. ಆದರೆ ಭಾರತವು ವಿದೇಶಗಳು ಹೊರದೂಡುವ ಮಾರುಕಟ್ಟೆ ಸಂಸ್ಕೃತಿ, ಕಂಪೆನಿಗಳಿಗೆ ಹಾಸಿಗೆ ಹಾಸುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.  ನಾವು ಸ್ವಾಭಾವಿಕವಾಗಿ ತಿಂದ ಕುಸುಬೆ, ಚಳ್ಳವರೆ, ರಾಗಿ, ಅಗಸಿ, ಕರ್ಚಿಕಾಯಿ ಮತ್ತಿತರ `ಜವಾರಿ~ ಆಹಾರವನ್ನು ವಿದೇಶಿಗರು ಔಷಧಿಯುಕ್ತ ಎಂದು ತಿನ್ನುತ್ತಿದ್ದಾರೆ. ರಾಯಚೂರಿನಲ್ಲೇ ಸುಮಾರು 600 ವಿಧದ ಟೊಮೆಟೊ ಇದೆ. ನಮಗೇ ಗೊತ್ತಿಲ್ಲ. ನಾವು ಮಾತ್ರ ಬೇಡವಾದ ಪ್ಯಾಕೆಟ್ ಫುಡ್‌ನತ್ತ ನೋಡುತ್ತಿದ್ದೇವೆ. ಒಬಾಮಾ ಪತ್ನಿ ಮಿಶೆಲ್ ಕೈ ತೋಟ ಮಾಡುತ್ತಿದ್ದರೆ, ನಾವು ಕೃಷಿ ಬಿಟ್ಟು ಮಾರುಕಟ್ಟೆಗೆ ನಡೆಯುತ್ತಿದ್ದೇವೆ. ಆಹಾರಕ್ಕೆ ಈಗ ಆದಾಯದ ಶೇ7ರಷ್ಟು ಉಪಯೋಗಿಸುತ್ತಿದ್ದರೆ, 2050ರಲ್ಲಿ ಶೇ35ಕ್ಕೂ ಹೆಚ್ಚು ವ್ಯಯಿಸಬೇಕು ಎಂದರು.ಸೀಮಿತ ಬೇಡ: ನಾನು ಬಾಗಲಕೋಟೆಯ ಡವಳಗಿಯ ಹುಡುಗ. ಎಲ್ಲ ಮಧ್ಯಮ ವರ್ಗದ ಮಿತಿಯಂತೆ ನನ್ನನ್ನೂ ಎಂಜಿನಿಯರಿಂಗ್ ಓದಿಸಬೇಕು ಎಂದಿದ್ದರು. ಆದರೆ ಕುವೆಂಪು ಓದಿ ಮಲೆನಾಡಿನಲ್ಲಿ ಅಲೆದೆ.  ಮುಂದೆ ಹಿಮಾಚಲ ಪ್ರದೇಶದಲ್ಲಿ ಕಾಡು ಮತ್ತು ತೋಟಗಾರಿಕೆ ವಿವಿಯಲ್ಲಿ ಓದಿದೆ. ಬಳಿಕ ಅದೇ ಅಧ್ಯಯನ ಮುಂದುವರಿಸಿ ಉಪಗ್ರಹ ಆಧರಿತ ದೂರ ಸಂವೇದಿ ಅಧ್ಯಯನ ನಡೆಸಿದೆ. ಮೂಲತಃ ನಾನು ಜೀವವಿಜ್ಞಾನದ ವಿದ್ಯಾರ್ಥಿಯೇ ಅಲ್ಲ. ಆದರೆ ಆಸಕ್ತಿ ಮತ್ತು ಅನ್ವೇಷಣೆ ಮುಖ್ಯ ಎಂದರು.ನಿಮ್ಮ ವಿಷಯ, ನಿಕಾಯ, ವಿಭಾಗ, ಪಾಂಡಿತ್ಯಕ್ಕೆ ಸೀಮಿತರಾಗಬೇಡಿ. ಪರಿಸರವನ್ನು ಪರಿಶೀಲಿಸಿ. ಸಾಮಾನ್ಯರ  ಜೊತೆ ಒಡನಾಡಿ. ಅನ್ವೇಷಿಸುವ, ದೂರದ ಊರಿನಲ್ಲಿ ದುಡಿಯುವ ಮನೋಪ್ರವೃತ್ತಿ ಬೆಳೆಸಿ. ಆಗ ಮಾತ್ರ ನೀವು ಬೆಳೆಯಲು ಸಾಧ್ಯ ಎಂದ ಅವರು, ಎಲ್ಲಿ ಹೋದರೂ ದಕ್ಷಿಣ ಕರ್ನಾಟಕದವರು ಸಿಗುತ್ತಾರೆ. ನಮ್ಮವರು ಊರಿನಲ್ಲೇ ಸಂತೃಪ್ತರಾಗುತ್ತಾರೆ. ಇದೇ ನಾವು ಹಿಂದುಳಿಯಲು ಕಾರಣ ಎಂದು ವಿಶ್ಲೇಷಿಸಿದರು.ಚೌಕಟ್ಟು ಮೀರಿ ಸಾಧಿಸಲು ಯತ್ನಿಸಿರಿ. ಉಳಿಸುವುದಕ್ಕಿಂತ, ತಿರುಗಾಡಿ ಜ್ಞಾನ ಪಡೆಯಿರಿ. ಬುದ್ಧಿವಂತರಿಗಿಂತ ಸುಲಭದಾರಿ ಕಂಡುಕೊಳ್ಳುವ ಸೋಮಾರಿಗಳೇ ಹೆಚ್ಚು ಉಪಕಾರಿಗಳು. `ಸುಶಿಕ್ಷಿತ~ ನಗರ ವಾಸಿಗಿಂತ ಹಳ್ಳಿಗರೇ ಜೀವನ ನಡೆಸುವ ಸಶಕ್ತರು. ಅಗತ್ಯದಷ್ಟೇ ಬಳಸಿ, ಉಳಿದುದನ್ನು ಅನ್ವೇಷಣೆಗೆ ಮೀಸಲಿರಿಸಿ ಎಂದು ಹಲವು ಉದಾಹರಣೆಗಳ ಮೂಲಕ ಅನುಭವ ಹಂಚಿಕೊಂಡರು. ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಎಸ್.ಎಲ್. ಹಿರೇಮಠ ಮತ್ತು ನಿಕಾಯದ ಮುಖ್ಯಸ್ಥ ಪ್ರೊ. ಎ.ಎಚ್.ರಾಜಾಸಾಬ್ ಇದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry