ಶುಕ್ರವಾರ, ಮೇ 27, 2022
24 °C

ಬಂಜಾರ ಸಮುದಾಯ ಭವನ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಇಲ್ಲಿನ ಸ್ಟೇಷನ್ ತಾಂಡಾದಲ್ಲಿ ರಾಜ್ಯ ಬಂಜಾರ ಅಭಿವೃದ್ಧಿ ನಿಗಮದಿಂದ ಮಂಜೂರಿಯಾದ 10 ಲಕ್ಷ ರೂ. ಅನುದಾನದಲ್ಲಿ ಬಂಜಾರ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಬಂಜಾರ ಜನರಿಗೆ ಬಹಳ ಅನುಕೂಲ ಆಗಲಿದೆ ಎಂದು ತಾಂಡಾದ ಯುವ ಮುಖಂಡ ಭೀಮಸಿಂಗ್ ಚವ್ಹಾಣ್ ಹೇಳಿದ್ದಾರೆ.ಬಂಜಾರ ಸಂಪ್ರದಾಯ ಪ್ರಕಾರ ಅನೇಕ ಹಬ್ಬ ಹರಿದಿನಗಳನ್ನು ಆಚರಣೆ ಮಾಡಲಾಗುತ್ತದೆ. ಆಗ ಸರಿಯಾದ ಸ್ಥಳದ ಕೊರತೆ ಕಾಡುತ್ತಿತ್ತು. ತಾಂಡಾದಲ್ಲಿರುವ ಸೇವಾಲಾಲ್ ಮಂದಿರವೇ ನಮಗೆ ಮುಖ್ಯವಾಗಿ ಅನುಕೂಲವಾಗಿತ್ತು. ಈಗ ಸಮುದಾಯ ಭವನ ನಿರ್ಮಾಣ ಆಗುತ್ತಿರುವುದರಿಂದ ನಮ್ಮ ಜನಾಂಗದ ಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ಹಾಗೂ ಅನೇಕ ಸಾಮೂಹಿಕ ಕಾರ್ಯಕ್ರಮಗಳು ಅಲ್ಲಿ ನಡೆಸಲು ಅನಕೂಲ ಆಗುತ್ತದೆ ಎಂದು ಅವರು ಸಂತೋಷ ವ್ಯಕ್ತ ಮಾಡಿದ್ದಾರೆ.ತಾಂಡಾ ಜನರ ಮದುವೆ, ಸಭೆ ಸಮಾರಂಭ, ಬಂಜಾರಾ ಸಂಪ್ರದಾಯ ಆಚರಣೆ, ದಸರೆ, ದೀಪಾವಳಿ ಹಬ್ಬದ ಸಮಯದಲ್ಲಿ ನಡೆಯುವ ಬಂಜಾರ ಸಂಸ್ಕೃತಿ ಬಿಂಬಿಸುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಈ ಸಮುದಾಯ ಭವನ ತುಂಬಾ ಪ್ರಯೋಜನಯಾಗಲಿದೆ. ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಬಂಜಾರ ಜನರಿಗೆ ಹರ್ಷ ತಂದಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.