ಭಾನುವಾರ, ಏಪ್ರಿಲ್ 18, 2021
23 °C

ಪರಿಸರ ಪ್ರೇಮ ಸಾರುವ ಲಗ್ನಪತ್ರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:ಸ್ಪರ್ಧಾತ್ಮಕ ಈ ಯುಗದಲ್ಲಿ ಪ್ರತಿಷ್ಠೆಯೂ ಸ್ಪರ್ಧಾತ್ಮಕ ವಿಷಯವಾಗಿ ಪರಿಣಮಿಸಿದೆ. ಪ್ರತಿಷ್ಠೆ ಹೆಚ್ಚಳಕ್ಕಾಗಿ ಇತರರಿಗಿಂತ ತಾವೇನೂ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಎಲ್ಲರೂ ಎಲ್ಲ ವಿಷಯಗಳಲ್ಲಿ ಸ್ಪರ್ಧೆಗಿಳಿದಿರುವುದನ್ನು ಕಾಣಬಹುದು.ಹೀಗಾಗಿ ಮದುವೆ, ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸುವಾಗ ಅತ್ಯಂತ ಹೆಚ್ಚು ಮೊತ್ತವನ್ನು ಖರ್ಚು ಮಾಡುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ಮದುವೆ, ಆಮಂತ್ರಣ ಪತ್ರಿಕೆಗಳಲ್ಲಿ ಸಮಾಜಕ್ಕೆ ಪೂರಕವಾಗುವ ಸಂದೇಶಗಳನ್ನು ರವಾನಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾರೆ.ಅಂಥವರಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಲ ಗ್ರಾಮದ ಈಶ್ವರಪ್ಪ ಎಚ್. ಕಟ್ಟಿಮನಿ ಒಬ್ಬರು. ಅಫಜಲಪುರದ ಭೀಮಾ ಏತ ನೀರಾವರಿ ಯೋಜನಾ ವಿಭಾಗದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಇವರು, ತಮ್ಮ ಪುತ್ರಿ ಶ್ವೇತಾ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ನ. 23ರಂದು ಗುಲ್ಬರ್ಗದಲ್ಲಿ ಹಮ್ಮಿಕೊಂಡಿದ್ದಾರೆ.ಈ ಆಮಂತ್ರಣದ ಒಂದು ಬದಿಯಲ್ಲಿ ವಧು-ವರ, ಮದುವೆ ದಿನಾಂಕ, ಸ್ಥಳದ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹಿಂಬದಿಯಲ್ಲಿ ಪರಿಸರ ಪ್ರೇಮ ಸಾರುವ ಸಂದೇಶವನ್ನು ಮುದ್ರಿಸಿ ಇತರರಿಗೆ ಮಾದರಿಯಾಗಿದ್ದಾರೆ.`ನಮ್ಮ ಜೀವನಾಧಾರವಾದ ಪ್ರಾಣವಾಯುವಿನ ಮಹತ್ವ~ ಎನ್ನುವ ತಲೆಬರಹದ ಅಡಿಯಲ್ಲಿ ಮಾನವ ದಿನಕ್ಕೆ ಸರಾಸರಿ ಎಷ್ಟು ಪ್ರಾಣವಾಯುವನ್ನು ಉಸಿರಾಟಕ್ಕೆ ಬಳಸುತ್ತಾನೆ. ನಮ್ಮ ಪರಿಸರದಲ್ಲಿರುವ ಗಿಡ,ಮರಗಳಿಂದ ಈ ಪ್ರಾಣವಾಯು ಸಿಗುತ್ತಿದ್ದು, ಗಿಡ-ಮರಗಳನ್ನು ಕಡಿಯುವುದನ್ನು ತಡೆಯಬೇಕು.ಕಾಡನ್ನು ಉಳಿಸಿ-ಬೆಳೆಸೋಣ ಎಂಬ ಸಂದೇಶ ಸಾರುವ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುವ ಒಕ್ಕಣಿಕೆ ನಿಜಕ್ಕೂ ಪರಿಸರ ಪ್ರಜ್ಞೆ ಮೂಡಿಸುವುದಕ್ಕೆ ಸಹಕಾರಿಯಾಗಬಲ್ಲುದು. ಹೆಚ್ಚಿನ ಮಾಹಿತಿಗೆ 9448452870ಗೆ ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.