ಬೆಂಗಳೂರು: ‘9 ಡ್ರೀಮ್ಸ್’ ಸಂಸ್ಥೆಯ ಆಶ್ರಯದಲ್ಲಿ ಮುಂದಿನ ತಿಂಗಳು ನಡೆಯುವ ‘ಸಿಎಂ ಕಪ್ 2026’ ಬ್ಯಾಡ್ಮಿಂಟನ್ ಟೂರ್ನಿಯ ತಂಡಗಳ ಜರ್ಸಿಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಭಾನುವಾರ ಅರಮನೆ ಮೈದಾನದಲ್ಲಿ ಬಿಡುಗಡೆ ಮಾಡಿದರು.

ಫೆ. 21 ಮಮತ್ತು 22ರಂದು ವಸಂತನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಆಟಗಾರರ ಆಯ್ಕೆ ಪ್ರಕ್ರಿಯೆಯೂ ನಡೆಯಿತು.

ಟೂರ್ನಿಯಲ್ಲಿ ಒಟ್ಟು 8 ಫ್ರ್ಯಾಂಚೈಸಿ ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ. ದಿ ಎಲೀಟ್ ಬ್ಯಾಡ್ಮಿಂಟನ್, ಎಸ್ಥೆಟಿಕ್ ಆ್ಯಟಕರ್ಸ್, ಟೆಲಿಕಾಂ ಸ್ಕೈ ಸ್ಟ್ರೈಕರ್, ಇನ್ಸ್ಪೈರ್ ಚಾಲೆಂಜರ್ಸ್, ಕೆಜಿಎಂ ಸ್ಟ್ರೈಕರ್ಸ್, ಟೀಂ ಕಫೆ ದಿವ್ಯಂ, ಪ್ರೊ ವಿನ್ ಪ್ಯಾಂಚರ್, ಶಾರದಾ ಸ್ಟ್ರೈಕರ್ಸ್ ತಂಡಗಳು ಕಣಕ್ಕಿಳಿಯಲಿವೆ.

ಪ್ರತಿ ತಂಡದಲ್ಲೂ ಪುರುಷ ಮತ್ತು ಮಹಿಳೆಯರು ಸೇರಿದಂತೆ ಒಟ್ಟು 15 ಆಟಗಾರರಿದ್ದಾರೆ. ಪ್ರತಿ ತಂಡಕ್ಕೂ ನಾಯಕ, ಉಪನಾಯಕರೊಂದಿಗೆ ಸಿನಿಮಾ ರಂಗದ ಒಬ್ಬರು ಐಕಾನ್ ಆಟಗಾರರು ಇರುತ್ತಾರೆ. ಅಲ್ಲದೆ, ತಲಾ ಒಬ್ಬರು ಶಾಸಕರು (ಜನಪ್ರತಿನಿಧಿ), ಐಎಎಸ್, ಐಪಿಎಸ್, ಪೊಲೀಸ್ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿ ಪ್ರತಿ ತಂಡದಲ್ಲಿ ಇರುತ್ತಾರೆ.

ಸ್ಪರ್ಧೆಯು ಪುರುಷರ ಸಿಂಗಲ್ಸ್, ಡಬಲ್ಸ್, ಮಹಿಳೆಯರ ಸಿಂಗಲ್ಸ್, ಡಬಲ್ಸ್, ಮಿಶ್ರ ಡಬಲ್ಸ್ ಮತ್ತು ಪವರ್ ಡಬಲ್ಸ್ ವಿಭಾಗಗಳಲ್ಲಿ ನಡೆಲಿದವೆ. ಇದರ ಜತೆಗೆ ಗೇಮ್ ಚೇಂಜರ್ ಎನ್ನುವ ಹೊಸ ಪರಿಕಲ್ಪನೆಯನ್ನೂ ಪರಿಚಯಿಸಲಾಗುತ್ತಿದೆ. ವಿಜೇತ ತಂಡಕ್ಕೆ ₹ 7 ಲಕ್ಷ ಮತ್ತು ಟ್ರೋಫಿ ನೀಡಲಾಗುತ್ತಿದೆ.

ಟೂರ್ನಿಯಲ್ಲಿ ಅತಿಥಿಗಳಾಗಿ ರಾಜ್ಯಪಾಲ ಥಾವರಚಂದ್ ಗೆಹಲೋಥ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.