ಮಂಗಳವಾರ, ಏಪ್ರಿಲ್ 20, 2021
29 °C

ನೃಪತುಂಗ: ರೂ 20ಕ್ಕೆ ನಗರ ಸಂಚಾರ

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾನಗರವಾಗಿ ಬೆಳೆಯುತ್ತಿರುವ ಗುಲ್ಬರ್ಗದಲ್ಲಿ `ನೃಪತುಂಗ ನಗರ ಸಾರಿಗೆ' 50 ಬಸ್ ಆರಂಭಿಸಿ ಸಾಕಷ್ಟು ಗಮನ ಸೆಳೆಯುತ್ತಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ರೂ. 20ಕ್ಕೆ ದಿನದ ಬಸ್‌ಪಾಸ್ ನೀಡುವ ಯೋಜನೆಯನ್ನು ಡಿಸೆಂಬರ್ 1ರಿಂದ ಜಾರಿಗೊಳಿಸುತ್ತಿದೆ.ದಿನದ ಬಸ್‌ಪಾಸ್ ಪಡೆದುಕೊಂಡ ಪ್ರಯಾಣಿಕರು ನಗರದಾದ್ಯಂತ `ನೃಪತುಂಗ ನಗರ ಸಾರಿಗೆ' ಬಸ್‌ಗಳಲ್ಲಿ ಒಂದು ದಿನದಮಟ್ಟಿಗೆ ಎಷ್ಟು ಸಲ ಬೇಕಾದರೂ ಪ್ರಯಾಣಿಸಬಹುದಾಗಿದೆ. ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣಗಳ ಸಂಚಾರ ನಿಯಂತ್ರಕರಲ್ಲಿ ಹಾಗೂ ನಗರ ಸಾರಿಗೆ ಬಸ್ ನಿರ್ವಾಹಕ ಹತ್ತಿರ ದಿನದ ಬಸ್‌ಪಾಸ್  ದೊರೆಯಲಿವೆ.ಬಸ್ ವೇಳಾಪಟ್ಟಿ: ಎಸ್‌ಎಂಎಸ್ ಸೇವೆ

ಗುಲ್ಬರ್ಗ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳ ವೇಳಾಪಟ್ಟಿಯನ್ನು ಪ್ರಯಾಣಿಕರು ತಮ್ಮ ಮೊಬೈಲ್‌ನ್ಲ್ಲಲೇ ಪಡೆದುಕೊಳ್ಳುವ ಸೌಲಭ್ಯವನ್ನು ಜಾರಿಗೊಳಿಸಿದೆ.ಮೊಬೈಲ್ ಮೂಲಕ ಕಿರು ಸಂದೇಶ ಸೇವೆ(ಎಸ್‌ಎಂಎಸ್) ಯನ್ನು ಬಳಸಿಕೊಂಡು ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸಂದೇಶ ರವಾನಿಸುವ ವಿಧಾನ ಈ ರೀತಿ ಇದೆ. ಎGET<space>FROMSTATION<space>TOSTATION<space>M ಎಂದು ಟೈಪ್ ಮಾಡಿ ಸಂದೇಶ ಕಳುಹಿಸಬೇಕು.ದಿನದ ಯಾವ ಸಮಯದ ಬಸ್ ವೇಳಾಪಟ್ಟಿ ಎಂಬುದನ್ನು ತೋರಿಸಲು ಕೊನೆಯಲ್ಲಿ ಅಥವಾ A ಅಥವಾ E ಅಥವಾ A ( M-morning, A-afternoon, E-evening, N-night) ಎಂದು ಟೈಪ್ ಮಾಡಬೇಕು. ಟೈಪ್ ಮಾಡಿದ ಸಂದೇಶವನ್ನು 54646ಗೆ ಕಳುಹಿಸಿದರೆ,  ಮಾಹಿತಿ ಲಭ್ಯವಾಗುತ್ತದೆ.ಜನರು ದಿನದ ಬಸ್‌ಪಾಸ್ ಹಾಗೂ ಎಸ್‌ಎಂಎಸ್ ಮೂಲಕ ಮಾಹಿತಿ ಪಡೆದುಕೊಳ್ಳುವ ಅನುಕೂಲಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.