`ಕಾಲುವೆ ನೀರಿಗಾಗಿ ಬೆಂಗಳೂರಿಗೆ ನಿಯೋಗ'

7

`ಕಾಲುವೆ ನೀರಿಗಾಗಿ ಬೆಂಗಳೂರಿಗೆ ನಿಯೋಗ'

Published:
Updated:

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕವಾಗಿ ನೀರು ಒದಗಿಸಿ ರೈತರ ಹಿತ ಕಾಪಾಡಬೇಕೆಂದು ರೈತ ಹಿತರಕ್ಷಣಾ ವೇದಿಕೆ ವತಿಯಿಂದ ರೈತರ ನಿಯೋಗದೊಂದಿಗೆ ಸಚಿವ ರಾಜುಗೌಡ ಅವರ ನೇತೃತ್ವದಲ್ಲಿ ಸೋಮವಾರ ಮಂತ್ರಿಗಳನ್ನು ಭೇಟಿ ಮಾಡಲಾಗುವದು ಎಂದು ಹುಣಸಗಿಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಯಿತು.ಶನಿವಾರ ಸಾಯಂಕಾಲ ನಡೆದ ಸಭೆಯಲ್ಲಿ ಸುಧಿರ್ಘವಾಗಿ ಚರ್ಚಿಸಿ ನಂತರ ಈ ತೀರ್ಮಾನಕ್ಕೆ ಬರಲಾಯಿತು. ಈಗಾಗಲೇ ಕಳೆದ ವರ್ಷ ಹಿಂಗಾರು ಹಂಗಾಮಿಗೆ ಸಮರ್ಪಕವಾಗಿ ನೀರು ದೊರೆಯದೇ ಇದ್ದುದರಿಂದ ನೂರಾರು ಕೋಟಿ ರೂ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಮತ್ತೆ ಅದೇ ಪರಿಸ್ಥಿತಿ ಬರದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುವದಾಗಿ ರೈತ ಹಿತರಕ್ಷಣಾ ಸಮೀತಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ತಿಳಿಸಿದರು.ನಾರಾಯಣಪುರ ಮತ್ತು ಆಲಮಟ್ಟಿ ಅವಳಿ ಜಲಾಶಯದಲ್ಲಿ ಕೃಷಿ ಬಳಕೆಗಿರುವ ನೀರು, ಅಥವಾ ಮಾರ್ಚ ಅಂತ್ಯದವರೆಗೆ ನೀರು ಹರಿಸಿ ಎಂದು ಮಾತನಾಡುತ್ತಿರುವಾಗಲೇ ನೀರಾವರಿ ಸಲಹಾ ಸಮಿತಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.ರೈತರ ನೆರವಿಗೆ ಬಾರದ ಈ ಸಭೆಯ ಗೊತ್ತುವಳಿಗೆ ಸಹಿಮಾಡದೇ ಇದ್ದರೂ ಫೆ.20 ದಿನಾಂಕ ಅನ್ನೇ ನಿಗದಿ ಮಾಡಿದಕ್ಕೆ ನಮ್ಮ ವಿರೋಧವಿದೆ ಎಂದು ಸಲಹಾ ಸಮೀತಿಯ ಸದಸ್ಯರಾದ ನಾಗಣ್ಣ ದಂಡಿನ್, ಮತ್ತು ಎಂ.ಆರ್.ಖಾಜಿ ಹೇಳಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಎಚ್.ಸಿ.ಪಾಟೀಲ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ದಂಡಿನ್, ಬಸವರಾಜ ಮಲಗಲದಿನ್ನಿ, ಸಂಗನಗೌಡ ವಜ್ಜಲ, ಸಿದ್ದು ಮುದಗಲ್, ವಿರುಪಾಕ್ಷಿ ಸ್ಥಾವರಮಠ, ಸಂಗಣ್ಣ ವೈಲಿ, ಕಾಕಾ ಕೆಂಭಾವಿ, ಅಣ್ಣಾಜಿಗೌಡ ಮುದನೂರ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry