ಶನಿವಾರ, ಮೇ 28, 2022
27 °C

ತಾಳ್ಮೆ ಕಳೆದುಕೊಂಡ ಭೂದಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಭೂದಾನಿಗೆ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ದಾನಿಯಿಂದ ವ್ಯಕ್ತವಾದ ವಿರೋಧದಿಂದ ಪಟ್ಟಣದ ಹೊರವಲಯದಲ್ಲಿ ಸೋಮವಾರ ನಡೆಯಬೇಕಾಗಿದ್ದ ಅಲ್ಪಸಂಖ್ಯಾತರ ಸರ್ಕಾರಿ ಬಾಲಕರ ವಸತಿ ನಿಲಯದ ಅಡಿಗಲ್ಲು ಸಮಾರಂಭ ನೆರವೇರದೆ ನಾಮಫಲಕ ಕಿತ್ತೊಗೆದ ಘಟನೆ ಕೆಲವು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮುಜುಗರ ಉಂಟು ಮಾಡಿದೆ.ಸರ್ಕಾರಿ ಕಚೇರಿಗಳ ಕಟ್ಟಡಕ್ಕೆ ಅಗತ್ಯ ಸ್ಥಳದ ಕೊರತೆ ಎದ್ದು ಕಾಣುತ್ತಿರುವುದನ್ನು ಮನಗಂಡ ಗ್ರಾಮ ಪಂಚಾಯತಿ ಹಿರಿಯ ಸದಸ್ಯ ತುಳಸಿರಾಮ ಚವ್ಹಾಣರು ತಮ್ಮ ಸ್ವಂತ ಜಮೀನಿನಲ್ಲಿ ನಾಲ್ಕು ಎಕರೆ ಜಾಗವನ್ನು ಕಳೆದ ಎರಡು ವರ್ಷಗಳ ಹಿಂದೆ ಉಚಿತವಾಗಿ ಕೊಡಲು ನಿರ್ಧರಿಸಿರುವುದು ಬಹುತೇಕ ಜನತೆಗೆ ತಿಳಿದಿರುವ ವಿಷಯವಾಗಿತ್ತು.ಅದರಂತೆ ಭರತನೂರ ರಸ್ತೆ ಮಾರ್ಗದ ಬಸ್ ಘಟಕದ ಬಳಿಯ ಸರ್ವೆ ನಂ.265ರಲ್ಲಿನ ಎರಡು ಎಕರೆ ಜಮೀನು ವಿಶೇಷ ತಹಸೀಲ್ದಾರರ ಕಚೇರಿ ಕಟ್ಟಡಕ್ಕೆ ನೀಡಿದ್ದಾರೆ. ಸರ್ವೆ ನಂ.282ರಲ್ಲಿನ ಒಂದು ಎಕರೆ ಜಮೀನು ಪಿ.ಡಬ್ಲ್ಯೂ.ಡಿ ಕಚೇರಿ ಕಟ್ಟಡ ಹಾಗೂ ಇನ್ನೊಂದು ಎಕರೆ ಜಮೀನನ್ನು ಮೆಟ್ರಿಕ್ ನಂತರದ ಬಿ.ಸಿ.ಎಂ ಬಾಲಕರ ವಸತಿ ನಿಲಯಕ್ಕೆ ನೀಡುವುದಾಗಿ ಹೇಳಿದ್ದರು.  ಅವರಂತೆ ತಲೆ ತೂಗಿದ ಭೂದಾನಿ ತುಳಸಿರಾಮ ಅವರು ಜಾಗ ತೋರಿಸಿ ಮುಂದಿನ ಪ್ರಕ್ರಿಯೆಗೆ ಚಾಲನೆ ದೊರಕಿಸಿಕೊಟ್ಟು, ಬೋರವೆಲ್ ಹಾಕಲು, ಜಮೀನು ಸಮತಲ ಮಾಡಲು, ಅಡಿಗಲ್ಲು ನೆರವೇರಿಸಲು ಸೈ ಎಂದರು.ಸ್ಥಳದತ್ತ ತೆರಳಿದ ದಾನಿಗೆ ಬಿ.ಸಿ.ಎಂ. ಹಾಸ್ಟೆಲ್ ಬದಲಾಗಿ ಅಲ್ಪಸಂಖ್ಯಾತರ ಹಾಸ್ಟೆಲ್ ನಾಮಫಲಕ ಇದ್ದಿರುವುದು ಕಂಡು ಮುಜುಗರ ಉಂಟಾಗಿದೆ ಎಂದು ಹೇಳಲಾಗಿದೆ.

ತಕ್ಷಣವೇ ಹಿಂದಿರುಗಿದ ತುಳಸಿರಾಮ ಅವರು ತಮಗೆ ಈ ಹಿಂದೆ ಹೇಳಲು ಬಂದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಈ ಕಾಮಗಾರಿಗೆ ನನ್ನ ಸಹಮತ ಇಲ್ಲ. ನನಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡಿದ್ದೀರಿ. ನೀವು ಹ್ಯಾಗೇ ಅಡಿಗಲ್ಲು ಮಾಡುತ್ತಿರಿ. ನಾನು ಅವಕಾಶ ಕೊಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದಾಗಿ ಹೂಳಲಾಗಿದ್ದ ಅಡಿಗಲ್ಲು ನಾಮಫಲಕ ಕಿತ್ತೆಸೆದಿರುವ, ಆಗಮಿಸಬೇಕಾಗಿದ್ದ ಶಾಸಕರು, ಗಣ್ಯರು ಮತ್ತು ಅಧಿಕಾರಿಗಳು ಬರದೆ ಇದ್ದ ಪ್ರಸಂಗ ಸೋಮವಾರ ನಡೆದು ಅಪಹಾಸ್ಯಕ್ಕೆ ಈಡಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.