ಅಧಿಕಾರಿಗಳ ನಿರ್ಲಕ್ಷ ನೆನೆಗುದಿಗೆ ಬಿದ್ದ ಕಾಮಗಾರಿ

7
ವಾಡಿ ಪುರಸಭೆಯಲ್ಲಿ ಬಳಕೆಯಾಗದ ಕೋಟ್ಯಂತರ ರೂಪಾಯಿ

ಅಧಿಕಾರಿಗಳ ನಿರ್ಲಕ್ಷ ನೆನೆಗುದಿಗೆ ಬಿದ್ದ ಕಾಮಗಾರಿ

Published:
Updated:
ಅಧಿಕಾರಿಗಳ ನಿರ್ಲಕ್ಷ ನೆನೆಗುದಿಗೆ ಬಿದ್ದ ಕಾಮಗಾರಿ

ವಾಡಿ: `ಪಟ್ಟಣದ ಅಭಿವೃದ್ಧಿ ಸಲುವಾಗಿ ಸುಮಾರು 13 ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ, ಒಳ ಚರಂಡಿ, ಅಂಬೇಡ್ಕರ್ ಮೂರ್ತಿ ಸ್ಥಾಪನೆ ಹಾಗೂ ಅಂಬೇಡ್ಕರ್ ಸ್ಮಾರಕ ಭವನ, ಹೊಸ ಪುರಸಭೆ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ  ಕಾಮಗಾರಿಗಳಿಗೆ ಯೋಜನೆ ಸಿದ್ಧ ಪಡಿಸಲಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಕೋಟ್ಯಂತರ ರೂಪಾಯಿ ಕಚೇರಿಯಲ್ಲಿ ಕೊಳೆಯುತ್ತಿದೆ' ಎಂದು ಪುರಸಭೆ ಸದಸ್ಯರು ಪಕ್ಷಬೇದ ಮರೆತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರ್ಷದ ಹಿಂದೆ ನಡೆದ ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಾರ್ಡಿನ 23 ಸದಸ್ಯರು ಸೇರಿ ವಿವಿಧ ವಾರ್ಡ್‌ಗಳಲ್ಲಿ ಸಿಮೆಂಟ್ ರಸ್ತೆ, ಒಳ ಚರಂಡಿ, ಕುಡಿಯುವ ನೀರಿನ ಸಲುವಾಗಿ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗೆ ಯೋಜನೆ ಸಿದ್ಧ ಪಡಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಕಾಮಗಾರಿಗಳು ಆರಂಭವಾಗಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.ಸೂಪ್ರೀಂ ಕೋರ್ಟ್ ಆದೇಶದ ಮೇರೆಗೆ ಪಟ್ಟಣದಲ್ಲಿರುವ ಅಂಬೇಡ್ಕರ್ ಮೂರ್ತಿಯನ್ನು ಈಚೆಗೆ ತೆರೆವುಗೊಳಿಸಲಾಗಿತ್ತು. ನಂತರ ಪುರಸಭೆಯ ಅನುದಾನದಲ್ಲಿ ಮೂರ್ತಿ ಸ್ಥಾಪನೆಗಾಗಿ 25 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ಮೂರ್ತಿ ಸ್ಥಾಪನೆಯಾಗಿಲ್ಲ.`ವರ್ಷದ ಹಿಂದೆ ಅಂಬೇಡ್ಕರ್ ಸ್ಮಾರಕ ಭವನಕ್ಕಾಗಿ 23ಲಕ್ಷ ರೂಪಾಯಿ ಮಂಜೂರಾಗಿದೆ. ಆದರೆ ಅದರಲ್ಲಿ ಕೇವಲ ಅರ್ಧ ಹಣ ಖರ್ಚಾಗಿದೆ. ಉಳಿದ ಕಾಮಗಾರಿಗಾಗಿ 13ಲಕ್ಷ ರೂಪಾಯಿ ವೆಚ್ಚದ ಟೆಂಡರ್ ಕರೆಯಾಗಿದೆ. ಆದರೂ ಇಲ್ಲಿಯವರೆಗೆ ಕಾಮಗಾರಿ ಆರಂಭಿಸಿಲ್ಲ. ವಾರ್ಡ್ ಸಂಖ್ಯೆ 13ರಲ್ಲಿ ಅಂಬೇಡ್ಕರ್ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕು ಎಂದು ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಒಪ್ಪಿಗೆ ನೀಡ್ದ್ದಿದರು. ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಇಲ್ಲಿಯವರೆಗೆ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ' ಎಂದು ಅಧಿಕಾರಿಗಳ ವಿರುದ್ಧ ಪುರಸಭೆ ಸದಸ್ಯರಾದ ವಿಜಯನಾಯಕ, ಮುತ್ತಯ್ಯಾಸ್ವಾಮಿ ದೂರಿದ್ದಾರೆ.`ಪಟ್ಟಣದ ಬಲರಾಮ್ ಚೌಕ್ ಹೊರ ವಲಯದಲ್ಲಿ ಹೊಸದಾಗಿ ಪುರಸಭೆ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ರೂ.94ಲಕ್ಷ ವೆಚ್ಚದಲ್ಲಿ ಯೋಜನೆ ಸಿದ್ಧ ಪಡಿಸಲಾಗಿದೆ. ಆದರೆ ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿಲ್ಲ. ಮತ್ತು ಶುದ್ಧ ಕುಡಿಯುವ ಮಿನಿರಲ್ ವಾಟರ್ ಸರಬರಾಜು ಮಾಡುವ ಸಲುವಾಗಿ ವಾರ್ಡ್ ಸಂಖ್ಯೆ 5,19ರಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಆದರೆ ಇಲ್ಲಿಯವರೆಗೆ ನೀರು ಪೂರೈಕೆ ಮಾಡಿಲ್ಲ' ಎಂದು ಸದಸ್ಯರು ದೂರಿದ್ದಾರೆ.`ವಿವಿಧ ಕಾಮಗಾರಿಗಳ ವಿಳಂಬದ ಬಗ್ಗೆ ಅಧಿಕಾರಿಗಳಿಗೆ ಕೇಳಿದರೆ ಜಿಲ್ಲಾಧಿಕಾರಿ ಕಚೇರಿಯಿಂದ ಅನೂಮೊದನೆ ದೊರೆತಿಲ್ಲ. ಕಾಮಗಾರಿ ವಿಳಂಬವಾಗುತ್ತಿವೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಎಲ್ಲದಕ್ಕೂ ಜಿಲ್ಲಾಧಿಕಾರಿ ಕಚೇರಿ ಕಡೆ ಕೈ ತೊರಿಸುತ್ತಿರುವುದು ಅವರ ಅಸಹಾಯಕತೆ ತೋರಿಸುತ್ತದೆ' ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ್ ವಿರುದ್ಧ ಪುರಸಭೆ ಸದಸ್ಯರಾದ ಸೂರ್ಯಕಾಂತ ರದ್ದೇವಾಡಿ ಮತ್ತು ಅಶೋಕ ಬಾಜಿರಾವ್, ಶ್ವೇತಾ ಪ್ರಿತಮ್‌ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸದಸ್ಯರ ಎಚ್ಚರಿಕೆ: `ಬರುವ ಡಿ.15ರಂದು ಪುರಸಭೆಯ ಸಾಮಾನ್ಯ ಸಭೆ ಕರೆಯಲಾಗಿದೆ. ಆದ್ದರಿಂದ ವಿವಿಧ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಸಭೆ ಬಹಿಷ್ಕರಿಸುತ್ತೇವೆ' ಎಂದು ಸದಸ್ಯರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry