ಬುಧವಾರ, ಏಪ್ರಿಲ್ 14, 2021
24 °C

ಅಪಾಯಕ್ಕೆ ಆಹ್ವಾನಿಸುವ ನೀರಿನ ಟ್ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಇಲ್ಲಿಯ ಸಮೀಪದ ಹಲಕಟ್ಟ ಗ್ರಾಮದಲ್ಲಿ 40ವರ್ಷದ ಹಿಂದೆ ನಿರ್ಮಿಸಲ್ಪಟ್ಟ ಕುಡಿಯುವ ನೀರಿನ ಟ್ಯಾಂಕ್ ಆಗಲೋ ಈಗಲೋ ಬೀಳುವ ಹಂತದಲ್ಲಿದ್ದು ಇಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ವಿಶ್ವ ಬ್ಯಾಂಕ್ ನೆರವಿನೊಂದಿಗೆ ಹೊಸದೊಂದು ಕುಡಿವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೂ ಹಳೇ ಟ್ಯಾಂಕ್ ಹಾಗೆ ಬಿಟ್ಟಿರುವುದು ಯಾತಕ್ಕಾಗಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

 

ಹಳೆಯ ಟ್ಯಾಂಕ್‌ನಿಂದ ಗ್ರಾಮಕ್ಕೆ ನೀರು ಸರಬರಾಜು ಆಗುವುದಿಲ್ಲ. ಕೇವಲ ಪ್ರಭಾವಿ ರಾಜಕೀಯ ಮುಖಂಡ ಚಾಂದಪಾಷ್ ಅವರ ಮನೆಗೆ ಮಾತ್ರ ಈ ಟ್ಯಾಂಕ್‌ನಿಂದ ನೀರು ಬೀಡುತ್ತಾರೆ. ಅಧಿಕಾರಿಗಳು ಇವರ ಕೈಗೊಂಬೆಯಾಗಿ ಅವರ ಒಬ್ಬರ ಮನೆಗೊಸ್ಕರ್ ಈ ಟ್ಯಾಂಕ್ ನೆಲಸಮ ಮಾಡದೇ ಹಾಗೆ ಬಿಟ್ಟಿದ್ದಾರೆ ಎಂದು ಈರಣ್ಣಾ, ಮಲ್ಲಿಕಾರ್ಜುನ ಆಪಾದಿಸಿದ್ದಾರೆ.

 

ಇದರ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ತಿಳಿಸಿದರೂ, ಅಧಿಕಾರಿಗಳು ಗಮನ ಹರಿಸಿಲ್ಲ. ಒಂದು ವೇಳೆ ಈ ಟ್ಯಾಂಕ್ ನೆಲಕ್ಕೆ ಉರುಳಿದರೆ ಪಾರ ಸಾವು ನೋವು ಉಂಟಾಗಲಿದೆ ಎಂದು ಮಹಾದೇವಿ ಉಳೂಗುಳ ‘ಪ್ರಜಾವಾಣಿ’ಗೆ ತಿಳಿಸಿದರು. ಇನ್ನೂ ಮುಂದಾದರು ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸಿ ಜನರ ಪ್ರಾಣ ಉಳಿಸಿ ಎಂಬುವುದು ಪ್ರಜ್ಞಾವಂತರ ಅಭಿಮತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.