ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ 2026ರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳ ನಡುವಿನ ಪಂದ್ಯ ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಅದು ಕೂಡ ಭಾರತ ತಂಡದ ತಾರಾ ಬ್ಯಾಟರ್ ಹರ್ಲೀನ್ ಡಿಯೋಲ್ ಅವರನ್ನು ರಿಟೈರ್ಡ್ ಔಟ್ ಮಾಡುವ ಮೂಲಕ.
.WPL | ಮಿಂಚಿದ ಶಫಾಲಿ ವರ್ಮಾ: ವಾರಿಯರ್ಸ್ ವಿರುದ್ಧ ಕ್ಯಾಪಿಟಲ್ಸ್ಗೆ ರೋಚಕ ಜಯ.WPL 2026 | ಹರ್ಮನ್ಪ್ರೀತ್ ಕೌರ್ ಆಟ: ಗುಜರಾತ್ ವಿರುದ್ಧ ಮುಂಬೈಗೆ ಜಯ.
ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯೂಪಿಎಲ್ನ 7 ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ 4ನೇ ಕ್ರಮಾಂಕದಲ್ಲಿ ಹರ್ಲೀನ್ ಡಿಯೋಲ್ ಅವರು ಕಣಕ್ಕಿಳಿದಿದ್ದರು.

36 ಎಸೆತಗಳನ್ನು ಎದುರಿಸಿದ ಹರ್ಲೀನ್ ಅವರು 47 ರನ್ ಕಲೆಹಾಕಿದ್ದರು. ಇನ್ನೂ ಎರಡು ಓವರ್ ಬಾಕಿ ಇರುವಾಗ ಹರ್ಲೀನ್ ಡಿಯೋಲ್ ಮೈದಾನದಿಂದ ಹೊರಬಂದಿದ್ದಾರೆ. ಬಳಿಕ 2 ಓವರ್ನಲ್ಲಿ ತಂಡ ಕೇವಲ 13 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

17ನೇ ಓವರ್ ಕೊನೆಯಲ್ಲಿ ನಡೆದಿದ್ದೇನು?

36 ಎಸೆತಗಳಲ್ಲಿ 47 ರನ್ ಸಿಡಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಹರ್ಲೀನ್ ಅವರನ್ನು ಕೋಚ್ ಅಭಿಷೇಕ್ ನಾಯರ್ ಬ್ಯಾಟಿಂಗ್ ತೊರೆದು ಹೊರಬರುವಂತೆ ಸೂಚನೆ ನೀಡುತ್ತಾರೆ. ಇದರಿಂದ ಗೊಂದಲಕ್ಕೊಳಗಾದ ಡಿಯೋಲ್ ಅವರು, ‘ನಾನಾ’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಭಿಷೇಕ್, ‘ಹೌದು ನೀವೆ’ ಎಂದು ತಿಳಿಸಿದಾಗ ಅವರು ಮೈದಾನದಿಂದ ಹೊರಬರುತ್ತಾರೆ ಸದ್ಯ, ನಾಯರ್ ಅವರ ಈ ನಡೆ ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಕಾರಣವಾಗಿದೆ.

ಪಂದ್ಯದಲ್ಲಿ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 154 ಕಲೆಹಾಕಿತ್ತು. ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್ಗಳ ಜಯ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.