ಪಲ್ಲೆಕೆಲೆ: ಇಲ್ಲಿ ನಿನ್ನೆ (ಶನಿವಾರ) ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಟಿ20 ವಿಶ್ವಕಪ್ನ ಸೂಪರ್–8ರ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಸಾಹಿಬ್ಝಾದಾ ಫರ್ಹಾನ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 5 ರನ್ಗಳಿಂದ ಗೆದ್ದ ಪಾಕಿಸ್ತಾನ ತಂಡವು ರನ್ರೇಟ್ ಆಧಾರದಲ್ಲಿ ಟೂರ್ನಿಯಿಂದ ಹೊರಬಿದ್ದಿದೆ. ಅದಾಗ್ಯೂ ಪಾಕ್ ತಂಡದ ಆರಂಭಿಕ ಬ್ಯಾಟರ್ ಸಾಹಿಬ್ಝಾದಾ ಫರ್ಹಾನ್, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆ ಒಂದನ್ನು ಮುರಿದಿದ್ದಾರೆ. ಮಾತ್ರವಲ್ಲ, ಟಿ20 ವಿಶ್ವಕಪ್ನಲ್ಲಿ ಯಾವುದೇ ಬ್ಯಾಟರ್ ಮಾಡದ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಒಂದೇ ಸೀಸನ್ನಲ್ಲಿ ಎರಡು ಶತಕ

ಟಿ20 ವಿಶ್ವಕಪ್ನ ಒಂದೇ ಸೀಸನ್ನಲ್ಲಿ ಎರಡು ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಫರ್ಹಾನ್ ಭಾಜನರಾಗಿದ್ದಾರೆ. ಅವರು, ಈ ಆವೃತ್ತಿಯಲ್ಲಿ ನಮೀಬಿಯಾ ವಿರುದ್ಧ ಅಜೇಯ 100 ಹಾಗೂ ಸೂಪರ್–8ರ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 60 ಎಸೆತಗಳಲ್ಲಿ 100 ರನ್ ಸಿಡಿಸಿದ್ದಾರೆ.

ಇನ್ನೂ ಟಿ20 ವಿಶ್ವಕಪ್ನಲ್ಲಿ ಇದುವರೆಗೆ ಕ್ರಿಸ್ ಗೇಲ್ ಮಾತ್ರ ಎರಡು ಶತಕ ಸಿಡಿಸಿದ್ದಾರೆ. ಅದು 2007 ಮತ್ತು 2016ರ ಬೇರೆ ಬೇರೆ ಆವೃತ್ತಿಗಳಲ್ಲಿ. ಒಂದೇ ಆವೃತ್ತಿಯಲ್ಲಿ ಎರಡು ಶತಕ ಸಿಡಿಸಿದ ಏಕೈಕ ಆಟಗಾರ ಫರ್ಹಾನ್ ಮಾತ್ರ.

ವಿರಾಟ್ ಕೊಹ್ಲಿ ದಾಖಲೆ ಮುರಿದ ಫರ್ಹಾನ್

ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಹೊಂದಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸಾಹಿಬ್ಝಾದಾ ಫರ್ಹಾನ್ ಅವರು ಮುರಿದಿದ್ದಾರೆ. ವಿರಾಟ್ ಕೊಹ್ಲಿ 2014ರ ವಿಶ್ವಕಪ್ನಲ್ಲಿ 6 ಇನಿಂಗ್ಸ್ಗಳಿಂದ 319 ರನ್ ಗಳಿಸಿದ್ದರು. ಸದ್ಯ, ಸಾಹಿಬ್ಜಾದಾ ಫರ್ಹಾನ್ ಅವರು 8 ಪಂದ್ಯಗಳಿಂದ 383 ರನ್ ಗಳಿಸಿದ್ದಾರೆ. ಆ ಮೂಲಕ ಕೊಹ್ಲಿ ಅವರಿಗಿಂತ 64 ರನ್ಗಳಿಂದ ಮುಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.