ಶನಿವಾರ, ನವೆಂಬರ್ 16, 2019
21 °C

ಮತದಾರ ಜಾಗೃತಿ: ಮೇಣದ ಬತ್ತಿ ಮೆರವಣಿಗೆ

Published:
Updated:

ಗುಲ್ಬರ್ಗ: ನಗರದ ಎಸ್‌ಎಸ್‌ಎಲ್ ಕಾನೂನು ಮಹಾವಿದ್ಯಾಲಯದ ಮೂಲಕ ಮತದಾರರ ನೋಂದಣಿ, ಮತದಾನದ ಪ್ರತಿಶತ ಹೆಚ್ಚಿಸಲು ಹಾಗೂ ಯಾವುದೇ ಆಮಿಷಕ್ಕೊಳಗಾಗದೆ ಯೋಚಿಸಿ ಮತ ಚಲಾಯಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಗುರುವಾರ ಮೇಣದ ಬತ್ತಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು.ಮಹಾವಿದ್ಯಾಲಯದಿಂದ ಸರದಾರ್ ವಲ್ಲಭಭಾಯಿ ಪಟೇಲ್ ವೃತ್ತದ ವರೆಗೆ ಹಮ್ಮಿಕೊಂಡಿದ್ದ ಈ ಮೆರವಣಿಗೆಯ ದಾರಿಯುದ್ದಕ್ಕೂ ಪ್ರಜಾಪ್ರಭುತ್ವದ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡಿ, ಮತದಾನ ಸಂವಿಧಾನಾತ್ಮಕ ಹಕ್ಕು ತಪ್ಪದೇ ಚಲಾಯಿಸಿ, ನಿಮ್ಮ ಮತ ನಿಮ್ಮ ಹಕ್ಕು, ಜಾಗೃತ ಮತದಾರ; ಸದೃಢ ಪ್ರಜಾಪ್ರಭುತ್ವ,  ನಿಮ್ಮ ಮತ ಗೌಪ್ಯವಾಗಿರಲಿ,  ಮತದಾನ ಮಾಡುವುದು ಪ್ರತಿ ಮತದಾರರರ ಹಕ್ಕು ಮತ್ತು ಆದ್ಯ ಕರ್ತವ್ಯ, ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ, ಮುಕ್ತ ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಳ್ಳಿ ಎಂಬ ಘೋಷಣೆಗಳನ್ನು ಕೂಗಿದರು.ಸರದಾರ ವಲ್ಲಭಭಾಯಿ ವೃತ್ತದಲ್ಲಿ ಮೇಣದ ಬತ್ತಿ ಮೆರವಣಿಗೆಯೊಂದಿಗೆ ಮಾನವ ಸರಪಳಿ ನಿರ್ಮಿಸುವುದರ ಮೂಲಕ ಜಾಗೃತಿ ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಲಿಂಗರಾಜ ಕೋಣಿನ, ಕಾನೂನು ಅಧಿಕಾರಿ ಪ್ರೋ. ಸುಧೀರ ಪಾಟೀಲ, ಗ್ರಂಥಪಾಲಕ ಪ್ರಾಣೇಶ ಹಾಗೂ ಸಿಬ್ಬಂದಿ ಶಂಕರ ಬುಳ್ಳಾ ಮತ್ತು ಕಾನೂನು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)