ಶನಿವಾರ, ಮೇ 28, 2022
24 °C

ಗೊಂದಲದ ಗೂಡಾದ ಸಮಾಲೋಚನಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಒದಗಿಸಲು ಅಗತ್ಯ ನಿಯಮ ರೂಪಿಸಲು ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯ ಸಚಿವ ಸಂಪುಟದ ಉಪಸಮಿತಿಯು ಗುಲ್ಬರ್ಗದಲ್ಲಿ ಸೋಮವಾರ ನಡೆಸಿದ ಸಮಾಲೋಚನಾ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟಿತು.ಹಲವು ನಿರೀಕ್ಷೆಯೊಂದಿಗೆ ಬೀದರ್, ಯಾದಗಿರಿ ಹಾಗೂ ಗುಲ್ಬರ್ಗ ಜಿಲ್ಲೆಗಳಿಂದ ಮನವಿ ಹಿಡಿದು ಆಗಮಿಸಿದ್ದ ವಿವಿಧ ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರಿಗೆ ಸಮರ್ಪಕ ಸ್ಥಳಾವಕಾಶ ಮಾಡಿಕೊಟ್ಟಿರಲಿಲ್ಲ.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಪತ್ರಕರ್ತರು  ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಹೀಗಾಗಿ ಬಹುತೇಕರು ಮಿನಿ ವಿಧಾನಸೌಧದ ಹೊರಗಡೆ ಕಾಯುತ್ತಾ   ಕುಳಿತುಕೊಳ್ಳಬೇಕಾಯಿತು.ಸಭೆಯು ಎರಡು ಗಂಟೆ ವಿಳಂಬವಾಗಿ ಆರಂಭವಾಗಿರುವುದಕ್ಕೆ ಬೀದರ್ ಜಿಲ್ಲೆಯ ರೈತರು ಅಸಮಾಧಾನಗೊಂಡು ಮನವಿ ಸಲ್ಲಿಸದೆ ವಾಪಸ್ ಹೋದರು. ಹೀಗಾಗಿ ಮಧ್ಯಾಹ್ನದವರೆಗೂ ಬೀದರ್ ಜಿಲ್ಲೆಯಿಂದ 10 ಹಾಗೂ ಯಾದಗಿರಿ ಜಿಲ್ಲೆಯಿಂದ ಕೇವಲ 18 ಮನವಿಗಳು ಸಲ್ಲಿಕೆಯಾದವು.ಮಧ್ಯಾಹ್ನ ಮೂರು ಗಂಟೆ ನಂತರ ಗುಲ್ಬರ್ಗ ಜಿಲ್ಲೆಯವರಿಂದ ಮನವಿ ಪಡೆದು ಸಮಾಲೋಚನೆ ನಡೆಸಲಾಯಿತು.

ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದರಿಂದ ಕನ್ನಡಪರ, ಹೈದರಾಬಾದ್ ಕರ್ನಾಟಕ ಪರ ಸಂಘಟನೆಗಳ ಪ್ರಮುಖರಿಗೆ ಸಭಾಂಗಣದೊಳಗೆ ಪ್ರವೇಶಿಸಲು ಅವಕಾಶವಾಗಿರಲಿಲ್ಲ. ಹೀಗಾಗಿ ಮಧ್ಯಾಹ್ನ ಮೂರರಿಂದ ನಾಲ್ಕುವರೆ ತನಕ ನೂರಾರು ಮನವಿದಾರರು ಹೊರಗಡೆ ಕಾದು ಕುಳಿತು, ತಾಳ್ಮೆ ಕಳೆದು ಕೊಂಡರು.ಪ್ರತಿಭಟನೆ

ಪೊಲೀಸರು ಸಭಾಂಗಣದೊಳಗೆ ಬಿಡದಿರುವುದನ್ನು ಖಂಡಿಸಿ ಸಂಘಟನೆಗಳ ಪ್ರಮುಖರು ಮಿನಿ ವಿಧಾನಸೌಧದ ಎದುರು ದಿಢೀರ್ ಪ್ರತಿಭಟನೆ ಆರಂಭಿಸಿದರು. ಪೊಲೀಸರು ಹಾಗೂ ಮನವಿದಾರರ ನಡುವೆ ವಾಗ್ದಾದ ಏರ್ಪಟ್ಟು, ಕೊನೆಗೂ ಸಭಾಂಗಣಕ್ಕೆ ನುಗ್ಗುವಲ್ಲಿ ಸಂಘಟನೆಗಳ ಪ್ರಮುಖರು ಯಶಸ್ವಿಯಾದರು.ಕುಳಿತುಕೊಳ್ಳಲು, ನಿಲ್ಲಲು ಜಾಗವಿಲ್ಲದಂತೆ ಸಭಾಂಗಣ ಭರ್ತಿಯಾಗಿ ಗೊಂದಲ ಉಂಟಾಯಿತು. ಕೆಲವರು  ಮನವಿ ಸಲ್ಲಿಸಿ ಹಿಂತಿರುಗಿದರು. ಇನ್ನು ಕೆಲವರು ಸಮಾಲೋಚನೆ ನಡೆಸಲು ಕಾಯ್ದು ನಿಂತರು. ಕೊನೆಗೆ ಪೊಲೀಸರು ಒತ್ತಾಯಪೂರ್ವಕ ನಿಂತುಕೊಂಡಿದ್ದ ಪ್ರತಿಭಟನಾಕಾರರು ಹೊರಗೆ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.