ಶನಿವಾರ, ಮೇ 28, 2022
26 °C

ಹಿರಿಯರನ್ನು ಗೌರವಿಸಿ: ಹಾರಕೂಡ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಾನವನಲ್ಲಿ ಭಕ್ತಿ ಮತ್ತು ಗುರು ಹಿರಿಯರಿಗೆ ಗೌರವಿಸುವ ಪರಿಪಾಠ ಬೆಳದುಕೊಂಡು ಬರಬೇಕು. ಅದು ಇತ್ತಿಚಿಗೆ ಕಡಿಮೆಯಾಗುತ್ತಿದೆ ಎಂದು ಹಾರಕೂಡ ಮಠದ ಚನ್ನಮಲ್ಲ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.



ನಗರದ ಐವಾನ್- ಇ-ಶಾಹಿ ಬಡಾವಣೆಯಲ್ಲಿರುವ ವಿಜಯಕುಮಾರ ದೇಶಮುಖ ಅವರ ಮನೆಯಲ್ಲಿ ಈಚೆಗೆ ನಡೆದ 12ನೇ ದ್ವಾದಶ ವರ್ಷ ರುದ್ರಾಭಿಷೇಕ ಹಾಗೂ ಪಾದಪೂಜೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.



ಇಂದಿನ ಕಲುಷಿತ ಸಮಾಜದಲ್ಲಿ ಭಕ್ತಿಯ ಮಾರ್ಗ ಹುಡುಕುವಂಥ ಪರಿಸ್ಥಿತಿ ನಿರ್ಮಾಣವಾಗಿವೆ. ಯುವಕರಲ್ಲಿ ಭಕ್ತಿಭಾವ ಬೆಳೆಸುವಂತಹ ಕಾರ್ಯ ಮಾಡಬೇಕಾಗಿದೆ. ಭಕ್ತಿ ಮಾರ್ಗದಿಂದ ಹೋದರೆ ಪೂಜಾ ಪ್ರಧಾನ ಮಾರ್ಗಕ್ಕೆ ಹೋಗುತ್ತದೆ. ಹೀಗಾಗಿ ಮನುಷ್ಯ ಭಕ್ತಿಯಿಂದ ಸತ್ಕರಿಸಿದರೆ ಸನ್ಮಾರ್ಗವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.



ಕಾರ್ಯಕ್ರಮದಲ್ಲಿ ನಾಗಣ್ಣ ಗೌಡ ಪಾಟೀಲ, ಭೂಷಣ ತಾಂದಳೆ, ಮಲ್ಲು ದೇವರಗುಡಿ, ಗುರುನಂಜಯ್ಯ, ಗಣೇಶ ಪಾಟೀಲ, ಶರಣು ನಿಗ್ಗುಡಿಗಿ, ಅಭೀಷೇಕ ಪಾಟೀಲ, ಮಡಿವಾಳಪ್ಪ ನರಿಬೋಳ, ಸಂಗಣ್ಣ ವಾಲಿ, ಶರಣು ಕೌಲಗಿ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.