ಬಾರದ ಬಸ್: ವಿದ್ಯಾರ್ಥಿಗಳ ಪ್ರತಿಭಟನೆ

7

ಬಾರದ ಬಸ್: ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:

ಚಿತ್ತಾಪುರ: ಮರಗೋಳ ಗ್ರಾಮಕ್ಕೆ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ನಮ್ಮ ಕಲಿಕೆಗೆ ತೊಂದರೆಯಾಗುತ್ತಿದೆ. ಅನೇಕ ಸಲ ಘಟಕದ ವ್ಯವಸಾಪ್ಥಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿ ಗ್ರಾಮದ ವಿದ್ಯಾರ್ಥಿಗಳು ಮುಡಬೂಳ ಕ್ರಾಸ್‌ ನಲ್ಲಿ ಗುರುವಾರ ಬೆಳಿಗ್ಗೆ ದಿಢೀರ್ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.‘ಗ್ರಾಮದಿಂದ ಅನೇಕ ವಿದ್ಯಾರ್ಥಿಗಳು ಚಿತ್ತಾಪುರದ ಶಾಲೆಗಳಿಗೆ ಹೋಗುತ್ತಾರೆ. ಅನೇಕ ಸಲ ಬೆಳಿಗ್ಗೆ  ಸಮಯಕ್ಕೆ ಸರಿಯಾಗಿ ಬಸ್ ಬರುವುದಿಲ್ಲ. ಕೆಲವೊಮ್ಮೆ ಬಸ್ ಬಾರದೆ ವಾಪಾಸು ಮನೆಗೆ ಹೋಗಬೇಕಾಗುತ್ತದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.‘ಹಲವು ಬಾರಿ  2 ಕಿ.ಮೀ ದೂರದ ಮುಡಬೂಳ ಕ್ರಾಸ್‌ ವರೆಗೆ ನಡೆದುಕೊಂಡು ಹೋಗುತ್ತೇವೆ. ಮಳೆಯಲ್ಲಿ ನೆನೆಯುತ್ತಾ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಹೋಗಿದ್ದೇವೆ’ ಎಂದು ವಿದ್ಯಾರ್ಥಿಗಳಾದ ನಾಗರಾಜ, ಮಹಾದೇವ, ವಿರೇಶ, ಮಲ್ಲಿಕಾರ್ಜುನ, ರೇಣುಕಾ, ಶಾಂತಾಬಾಯಿ, ಕುಸುಮಾ ಮುಂತಾದವರು ಹೇಳಿಕೊಂಡರು.ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ  ಶಿಕ್ಷಕರು, ಉಪನ್ಯಾಸಕರು,  ಸರ್ಕಾರಿ ನೌಕರರು, ವ್ಯಾಪಾರಿಗಳು ಸೇರಿದಂತೆ ಎಲ್ಲ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.ವಿದ್ಯಾರ್ಥಿಗಳ ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಚಿತ್ತಾಪುರದ ಘಟಕದ ವ್ಯವಸ್ಥಾಪಕ ಎ.ಎ. ಭೋವಿ ಅವರು ಪ್ರತಿಭಟನೆ ಸ್ಥಳಕ್ಕೆ ಧಾವಿಸಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ‘ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದರು.  ಜಗದೇವ ಕುಂಬಾರ, ಮಹೇಶ, ಮಹೇಶ ವಗ್ಗನ್, ಶಂಕರ, ಶಿವಶರಣಪ್ಪ ಇತರರು ಪ್ರತಿಭಟನೆಗೆ ಸಾಥ್ ನೀಡಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry