ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ
Published 9 ಮೇ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ವತ್ತು ವಿವಾದಗಳ ಇತ್ಯರ್ಥಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಲಿದೆ. ವಿಮರ್ಶಾತ್ಮಕ ಆಲೋಚನೆಯನ್ನು ಎಲ್ಲರೂ ಪ್ರಶಂಸಿಸುವರು. ನಿರಂತರ ಪ್ರಯತ್ನದಿಂದ ಕಾರ್ಯಸಿದ್ಧಿ ಆಗುತ್ತದೆ.
ವೃಷಭ
ಪ್ರತಿ ವಿಷಯವನ್ನು ಗಹನವಾಗಿ ಚಿಂತಿಸಿದರೆ ಲೋಪ ದೋಷಗಳೇ ಕಂಡು ಬರುವವು. ಸ್ನೇಹಿತನ ವಿಷಯದಲ್ಲಿ ಈ ದಿನ ಆಸಕ್ತಿಯನ್ನು ವಹಿಸಲಿದ್ದೀರಿ.
ಮಿಥುನ
ಸಸ್ಯ ಮಾರಾಟಗಾರರಿಗೆ, ನರ್ಸರಿ ಹೊಂದಿರುವವರಿಗೆ ಲಾಭದ ದಿನ. ಮನೆಯ ಅಥವಾ ಕಚೇರಿಯ ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆ ನಿಮ್ಮದಾಗುತ್ತದೆ. ಹಣಕಾಸಿನ ಕೊರತೆ ಇರುವುದಿಲ್ಲ.
ಕರ್ಕಾಟಕ
ದೂರದ ಪ್ರಯಾಣದ ಆಯಾಸವನ್ನು ಆರಾಮವಾಗಿ ಇರುವುದರಿಂದ ನೀಗಿಸಿಕೊಳ್ಳುವಿರಿ. ಕೆಲವೊಂದು ವಿಚಾರಗಳು ನೀವೆಷ್ಟೇ ತಲೆಕೆಡಿಸಿಕೊಂಡು ಮಾಡಿದರೂ ಸರಿಯಾಗಿ ಆಗುವುದಿಲ್ಲ.
ಸಿಂಹ
ಮನೆಯಲ್ಲಿನ ಸಣ್ಣ ಮಕ್ಕಳ ಆರೋಗ್ಯದಲ್ಲಿನ ಏರುಪೇರು ಕಳವಳವನ್ನು ತಂದೊಡ್ಡಬಹುದು. ಸ್ಥಿರಾಸ್ತಿ ಸಂಬಂಧಿಸಿದ ವ್ಯವಹಾರಗಳಿಂದ ಲಾಭ. ಹಲವು ದಿನಗಳ ನಂತರ ತಾಯಿಯೊಂದಿಗೆ ಕಳೆದ ಸಮಯ ಮನಸ್ಸಿಗೆ ಮುದ ನೀಡಲಿದೆ.
ಕನ್ಯಾ
ಅನೇಕ ವಿಚಾರಗಳನ್ನು ಒಂದೇ ಬಾರಿಗೆ ಸಮರ್ಥವಾಗಿ ನಿರ್ವಹಿಸುವ ಕಾರ್ಯನಿರ್ವಹಣಾ ವೈಖರಿಗೆ ಉತ್ತಮ ಮಾತುಗಳನ್ನು ಕೇಳುವಿರಿ.ಸದ್ಪರಂಪರೆಯಲ್ಲಿ ಜನಿಸಿದ್ದಕ್ಕಾಗಿ ಹೆಮ್ಮೆ ಪಡುವಂತೆ ಆಗುತ್ತದೆ.
ತುಲಾ
ಸಾಂತ್ವನ ನುಡಿಗಳು ಬೇಸರಗೊಂಡ ವ್ಯಕ್ತಿಗೆ ಆಸರೆಯ ಹೆಗಲಾದಂತೆ ಆಗುತ್ತದೆ. ಸಮಾಜ ಸೇವೆಯಲ್ಲಿ ಪುತ್ರರ ಘನತೆ ಗೌರವ ಹೆಚ್ಚಳವಾಗುವುದು. ಉಸಿರಾಟ ಸಂಬಂಧಿ ಸಮಸ್ಯೆಗಳಾಗಬಹುದು.
ವೃಶ್ಚಿಕ
ಕಾರ್ಯಕ್ರಮದಲ್ಲಿ ನಿಮ್ಮ ಪಾತ್ರವನ್ನು ಬಹಳ ಪ್ರಶಂಸಿಸಿ ಜನರು ಮಾತನಾಡುವರು . ಹೊಸ ಹಿಂಬಾಲಕರನ್ನು ಸಂಪಾದಿಸುವಿರಿ. ರೈತಾಪಿ ವರ್ಗದವರಿಗೆ ತಮ್ಮ ವೃತ್ತಿಯಲ್ಲಿನ ಕ್ರಿಯಾಶೀಲತೆ ಶುಭದಾಯಕ.
ಧನು
ಮಕ್ಕಳ ಅಗತ್ಯವನ್ನು ಪೂರೈಸುವುದರಲ್ಲಿ ಆಸಕ್ತರಾದ ನೀವು ಸಂಜೆ ಮಕ್ಕಳೊಂದಿಗೆ ತಿರುಗಾಟ ಮಾಡುವಿರಿ. ಕಷ್ಟ ಕೋಟಲೆಗಳಿಂದ ನಿರ್ಮುಕ್ತರಾಗುವ ಸುಸಂದರ್ಭ ತುಂಬಾ ಸನಿಹವಾಗಿ ಇದೆ.
ಮಕರ
ಸ್ವಲ್ಪ ಮಟ್ಟಿಗೆ ಧನ ವ್ಯಯವಿದ್ದರೂ ವಿವಿಧ ಹೊಸ ಮೂಲಗಳಿಂದ ಧನಾಗಮವಾಗುವುದು. ಇಂಪಾದ ವಾದ್ಯ ಸಂಗೀತ ಮನಸ್ಸನ್ನು ತಿಳಿಗೊಳಿಸುವಲ್ಲಿ ಸಹಕಾರಿ. ತಾಯಿಯ ಆರೈಕೆಯಿಂದಾಗಿ ಸುಖಕರವೆನಿಸುತ್ತದೆ.
ಕುಂಭ
ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಎದುರಾಗುವ ಏರಿಳಿತದ ನಡುವೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ಈಡೇರಲಿವೆ. ಬೇಸರಪಡುವ ಅವಶ್ಯಕತೆ ಇಲ್ಲ.
ಮೀನ
ಆತ್ಮೀಯರ ಅಗಲಿಕೆಯಿಂದಾಗಿ ಕ್ಷಣವು ಯುಗಗಳನ್ನು ಕಳೆದ ಅನುಭವವಾಗಬಹುದು. ಉತ್ತರ ತಿಳಿಯದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿನಲ್ಲಿ ವಾಸ್ತವನ್ನು ಮರೆಯದಿರಿ.