‘ಯುವಕರಲ್ಲಿ ಆತ್ಮವಿಶ್ವಾಸದ ಕೊರತೆ’

7

‘ಯುವಕರಲ್ಲಿ ಆತ್ಮವಿಶ್ವಾಸದ ಕೊರತೆ’

Published:
Updated:

ಶಹಾಬಾದ:  ‘ನಗರ ಮತ್ತು ಗ್ರಾಮೀಣ ಪ್ರದೇಶದ ಇಂದಿನ ಯುವಕರಲ್ಲಿ ಯುವಕರಲ್ಲಿ ಬುದ್ಧಿಶಕ್ತಿ, ಛಲ, ತಂತ್ರಜ್ಞಾನ ಎಲ್ಲವೂ ಇದೆ. ಆದರೆ ಸ್ವಲ್ಪ ಆತ್ಮವಿಶ್ವಾಸದ ಕೊರತೆ ಇದ್ದು ಅದನ್ನು ಪಾಲಕರು ತುಂಬಬೇಕು. ಮಕ್ಕಳಿಗೆ ಸಂಸ್ಕಾರ ನೀಡುವತ್ತ ತಂದೆ, ತಾಯಿಗಳು ಶ್ರಮಿಸಬೇಕು. ಗ್ರಾಮೀಣ ಯುವಕರು ನಗರದತ್ತ ಆಕರ್ಷಿತರಾಗದೆ ಕೃಷಿ ಕೈಗೊಳ್ಳಬೇಕು' ಎಂದು ಬೆಂಗಳೂರಿನ ಪರಿಮಳ ಕನ್ಸಲ್ಟೆಂಟ್ ಸಂಸ್ಥೆ ಮುಖ್ಯಸ್ಥ ಬಿ.ಗುರುರಾಜ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.ವಿಕಾಸ ಅಕಾಡೆಮಿ, ಬಸವ ಸಮಿತಿ ಮತ್ತು ನೃಪತುಂಗ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ  ಭಂಕೂರಿನ ಬಸವ ಸಮಿತಿ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ರಾಷ್ಟ್ರಕಾರ್ಯದಲ್ಲಿ ಗ್ರಾಮೀಣ ಯುವಕರ ಪಾತ್ರ' ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಕಾಸ ಅಕಾಡೆಮಿಯ ಮಾರ್ಥಾಂಡ ಶಾಸ್ತ್ರಿ ಮಾತನಾಡಿ 'ಗ್ರಾಮೀಣ ಯುವಕರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಉದ್ದೇಶದಿಂದ ಇಂತಹ ಸರಣಿ ಉಪನ್ಯಾಸ ಕಾರ್ಯಕ್ರಮ ಹಮ್ಮಕೊಳ್ಳಲಾಗಿದ್ದು ಈ ಬಗ್ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗುತ್ತಿದೆ' ಎಂದರು.ಉದ್ಯಮಿ ಶಶಿಕಾಂತ ಪಾಟೀಲ ಉದ್ಘಾಟಿಸಿದರು. ಬಸವ ಸಮಿತಿಯ ಸುಭಾಶ್ಚಂದ್ರ ರಾಜಾಪುರ ಅಧ್ಯಕ್ಷತೆವಹಿಸಿದ್ದರು. ಬಸ್ಸಯ್ಯ ಪೂಜಾರಿ ಮಾತನಾಡಿದರು. ಗಣ್ಯರಾದ ರಮೇಶ ಮಹೇಂದ್ರಕರ್, ರೇವಣಸಿದ್ದಪ್ಪ ಮುಸ್ತಾರಿ, ರಮಾದೇವಿ ಜಹಗೀರದಾರ್, ಶಂಕ್ರಪ್ಪ ಕುಂಬಾರ, ಈರಣ್ಣ ಕಾರ್ಗಿಲ್ ಮತ್ತು ಬಸವ ಸಮಿತಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.ಮೋನಿಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಕನಕಪ್ಪ ದಂಡಗುಲಕ ರ್ ಪ್ರಾಸ್ತಾವಿಕ ಮಾತ ನಾಡಿದರು, ವಿಜಯಲಕ್ಷ್ಮೀ ದೇವರ್ ನಿರೂಪಿಸಿದರು, ಕೆ.ರಮೇಶ ಭಟ್ಟ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry