ಹೈ–ಕ: ಹೂಡಿಕೆಗೆ ಬ್ರಿಟನ್‌ ಉತ್ಸುಕ-– ಫೆಲ್ಟನ್‌

7

ಹೈ–ಕ: ಹೂಡಿಕೆಗೆ ಬ್ರಿಟನ್‌ ಉತ್ಸುಕ-– ಫೆಲ್ಟನ್‌

Published:
Updated:

ಗುಲ್ಬರ್ಗ: ‘ಹೈದರಾಬಾದ್–ಕರ್ನಾ­ಟಕ ಭಾಗದಲ್ಲಿ ವ್ಯಾಪಾರ, ಶಿಕ್ಷಣ, ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಬ್ರಿಟಿನ್‌ ಸರ್ಕಾರ ಉತ್ಸುಕವಾಗಿದೆ’ ಎಂದು ಬ್ರಿಟಿಷ್ ಉಪ ಹೈಕಮಿಷನರ್ ಇಯಾನ್ ಫೆಲ್ಟನ್ ತಿಳಿಸಿದರು.ಭಾರತ–ಬ್ರಿಟನ್‌ ಹೂಡಿಕೆ ಸಂಬಂಧ ನಗರದ ಜಿಲ್ಲಾಧಿಕಾರಿ ಸಭಾಂ­ಗಣ­ದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಭಾರತ– ಬ್ರಿಟನ್ ನಡುವಿನ ರಾಜ­ಕೀಯ ಸಂಬಂಧ ವೃದ್ಧಿ. ಪರಸ್ಪರ ಸಹಯೋಗದ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವುದು ನಮ್ಮ ಉದ್ದೇಶ. ಬ್ರಿಟನ್ ಪ್ರಧಾನಿ ಡೆವಿಡ್ ಕೆಮೆರಾನ್‌ ನೇತೃತ್ವದ ನಿಯೋಗ 2010ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ ವಾಣಿಜ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶ­ಗಳನ್ನು ತಜ್ಞರು– ಉದ್ಯಮಿಗಳು ಚರ್ಚಿಸಿದ್ದರು ಎಂದು ಹೇಳಿದರು.ಅಂದು ಉಭಯ ದೇಶಗಳ ಉದ್ಯಮಿಗಳು ಹಲವು ಒಡಂಬಡಿಕೆ ಮಾಡಿಕೊಂಡಿದ್ದರು. ಈಗ ಬೆಂಗಳೂರು ಹೊರತು ಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬ್ರಿಟನ್ ಸರ್ಕಾರದ ಸಹಯೋಗದಲ್ಲಿ ಯೋಜನೆ ಕೈಗೊ­ಳ್ಳಲು ಅವಕಾಶ ರೂಪಿಸಲಾಗು­ತ್ತಿದೆ. ಅವುಗಳಿಗೆ ಆದ್ಯತೆ ನೀಡಲು ನಗರಕ್ಕೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು.ಈ ಭಾಗದ ಆರ್ಥಿಕ ಅಭಿವೃದ್ಧಿ ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಭಾಗದಲ್ಲಿ ನೂತನ ಯೋಜನೆಗಳ ಸಾಧ್ಯತೆ ಬಗ್ಗೆ ಅನ್ವೇಷಣೆ ಮಾಡಲಾ­ಗುತ್ತಿದೆ. ದೀರ್ಘಾವಧಿ ಬಂಡವಾಳ ಹೂಡಿಕೆಯಲ್ಲಿ ನಾವು ಆಸಕ್ತಿ ಹೊಂದಿದ್ದೇವೆ. ಅದರಲ್ಲೂ ನವೀಕರಿಸ­ಬಹುದಾದ ಶಕ್ತಿ ಮೂಲಗಳ ಮೇಲೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.ತೊಗರಿ ಬೆಳೆಗೆ ಕಾಯಕಲ್ಪ ನೀಡಲು ಸ್ಥಳೀಯ ರೈತರ ಸಹಯೋಗದಲಿ ್ಲದೊಡ್ಡ ಮಾರುಕಟ್ಟೆ ಸ್ಥಾಪನೆಗೆ ಬ್ರಿಟನ್ ನೆರವಾಗಬಹುದು. ಸಿದ್ದ ಉಡುಪು ಕಾರ್ಖಾನೆ, ಬ್ರಿಟನ್‌ ವಿಶ್ವವಿದ್ಯಾಲಯಗಳು ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಲು ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ನೀಡುತ್ತಿವೆ. ಬ್ರಿಟನ್ ಸರ್ಕಾರ ಇದಕ್ಕಾಗಿ ಅನುದಾನ ಸಹ ಮೀಸಲಿಟ್ಟಿದೆ.ಸಂಶೋಧನಾ ಕ್ಷೇತ್ರ, ಆರೋಗ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲಿ ್ಲಬ್ರಿಟನ್‌ನ ತಜ್ಞರು ಭಾರತದೊಂದಿಗೆ ಜ್ಞಾನ ಹಂಚಿಕೊ­ಳ್ಳಲು ಸಿದ್ಧರಿದ್ದಾರೆ ಎಂದರು. ಶಾಸಕ ಪ್ರಿಯಾಂಕ್‌ ಖರ್ಗೆ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು.ಮಹಾನಗರ ಪಾಲಿಕೆ ಆಯುಕ್ತ ಕಟ್ಟೀಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಕೈಗಾರಿಕಾ ಇಲಾಖೆ ವಿಸ್ತರಣಾಧಿಕಾರಿ ಬಸವರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ವಾಣಿಜ್ಯ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಸಭೆ ಬಳಿಕ ಇಯಾನ್ ಫೆಲ್ಟನ್ ತಾಲ್ಲೂಕಿನ ಸರ್ಕಾರಿ ಶಾಲೆಗಳು, ಸಮುದಾಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದರು. ಸಂಜೆ ಬುದ್ಧವಿಹಾರಕ್ಕೆ ತೆರಳಿ ವೀಕ್ಷಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry