ಶನಿವಾರ, ಏಪ್ರಿಲ್ 10, 2021
30 °C

ಕ್ಯಾಪ್ಟನ್ ಜತೆ ವಿದ್ಯಾರ್ಥಿಗಳ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಶರಣಬಸವೇಶ್ವರ ವಸತಿ ಶಾಲೆಯಲ್ಲಿ ಮಂಗಳವಾರ ಶಾಲೆಯ ಮಾಜಿ ವಿದ್ಯಾರ್ಥಿ ಹಾಗೂ ಅಗ್ನಿ ಏರೋಸ್ಪೋರ್ಟ್ಸ್ ಅಡ್ವೇಂಚರ್ ಅಕಾಡೆಮಿ ಸಂಸ್ಥಾಪಕ ಕ್ಯಾಪ್ಟನ್ ಅರವಿಂದ ಶರ್ಮ ಅವರು ಹತ್ತನೇ ತರಗತಿ ವಿದ್ಯಾರ್ಥಿಗಳೊಂದಿಗೆ ಜ್ಞಾನವರ್ಧಕ ರೂಪದಲ್ಲಿ ಚರ್ಚೆ ನಡೆಸಿದರು.ಅವರು ತಮ್ಮ ಗೆಳೆಯರೊಂದಿಗೆ ಶಾಲೆಗೆ ಭೇಟಿ ನೀಡಿ ತಮ್ಮ ಜೀವನದ ಸುಂದರ ಅನುಭವಗಳನ್ನು ಹಂಚಿಕೊಂಡರು. ವಿಮಾನಯಾನ ಕ್ಷೇತ್ರದಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಿದರು.ಶಾಲೆಯ ಪ್ರಾಚಾರ್ಯ ಎನ್.ಎಸ್.ದೇವರಕಲ್ ಮಾತನಾಡಿ, ಕ್ಯಾಪ್ಟನ್ ಅರವಿಂದ ಶರ್ಮ ಬಾಲ್ಯದಿಂದಲೇ ಸಾಹಸ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು. ಅವರು ಉತ್ತಮ ವಿದ್ಯಾರ್ಥಿಯಾಗಿದ್ದರು ಎಂದು ಸ್ಮರಿಸಿಕೊಂಡರು. ಅಲ್ಲದೇ ಶರ್ಮ ಅವರು ವಿದ್ಯಾರ್ಥಿಗಳಿಗಾಗಿ ಪ್ರತಿಪಾದಿಸಿದ ಮೈಕ್ರೊಲೈಟ್ ಏರ್‌ಕ್ರಾಫ್ಟ್ ತಯಾರಿಸುವ ಯೋಜನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.