ಬುಧವಾರ, ಜನವರಿ 29, 2020
24 °C
*ಜಾರಿಯಾಗದ ರಾಜ್ಯ ಸರ್ಕಾರದ ಸೂಚನೆ *ಗುರಿ ಸಾಧನೆಯಲ್ಲಿ ವೈಫಲ್ಯ

ಸ್ವಚ್ಛತಾ ಉತ್ಸವ: ಜಿಪಂ ಕಡೆಗಣನೆ

ಪ್ರಜಾವಾಣಿ ವಾರ್ತೆ/ ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗ್ರಾಮೀಣ ಭಾಗದ ಅನೈರ್ಮಲ್ಯ ಅಭ್ಯಾಸಗಳನ್ನು ತೊಡೆದುಹಾಕಲು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನ.19ರಿಂದ 30ರವರೆಗೆ ‘ಸ್ವಚ್ಛತಾ ಉತ್ಸವ’ ಹೆಸರಿನಲ್ಲಿ ಜನಜಾಗೃತಿ ಸಮಾರಂಭಗಳನ್ನು ಏರ್ಪಡಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯು ಗುಲ್ಬರ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನು ಜಾರಿಯಾಗಿಲ್ಲ.ಕೇಂದ್ರ ಸರ್ಕಾರದ ಯೋಜನೆ ‘ನಿರ್ಮಲ ಭಾರತ ಅಭಿಯಾನ’ದ ಅಡಿಯಲ್ಲಿ ಸ್ವಚ್ಛತಾ ಉತ್ಸವವನ್ನು 10 ದಿನ ಆಚರಿಸುವ ಅಗತ್ಯವಿದೆ. ಈ ಕಾರ್ಯಕ್ರಮ ಗಳಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸ್ವ–ಸಹಾಯ ಸಂಘಗಳ ಮಹಿಳೆಯರು, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವ ಜನಿಕರನ್ನು ಬರಮಾಡಿಕೊಳ್ಳಬೇಕು ಎಂದು ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್‌ ನಿರ್ದೇಶಕರು ನವೆಂಬರ್‌ 7ರಂದು ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಿದ್ದರು.ರಾಜ್ಯಮಟ್ಟದಲ್ಲಿ ‘ಸ್ವಚ್ಛತಾ ಉತ್ಸವ’ಕ್ಕೆ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ನ.19ರಂದು ಕೊಪ್ಪಳದಲ್ಲಿ ಚಾಲನೆ ನೀಡಿದ್ದರು. ಕೊಪ್ಪಳ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ.ವಿಶ್ವ ಶೌಚಾಲಯ ದಿನಾಚರಣೆ ನ.19ರಂದು ಜಿಲ್ಲಾ ಮಟ್ಟದಲ್ಲಿ ಸಮಾರಂಭ ಏರ್ಪಡಿಸಿ ‘ಸ್ವಚ್ಛತಾ ಉತ್ಸವ’ಕ್ಕೆ ಚಾಲನೆ ನೀಡಬೇಕಿತ್ತು. ಅನಂತರ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಕಾರ್ಯಕ್ರಮ ನಡೆಸಲು ಸೂಚಿಸ ಬೇಕಿತ್ತು. ನಿರ್ಮಲ ಭಾರತ ಯೋಜನೆಯು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾ ಗಿದ್ದು, ಗುಲ್ಬರ್ಗ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕ್ಷಿಪ್ರಗತಿ (ಫಾಸ್ಟ್‌ ಟ್ರ್ಯಾಕ್‌)ಯಲ್ಲಿ ನಿರ್ಮಲ ಭಾರತ ಯೋಜನೆ ಜಾರಿಗೊಳಿಸಲು ವಿಶೇಷ ಗಮನ ನೀಡಲಾಗುತ್ತಿದೆ. ಆದರೆ ಸ್ವಚ್ಛತಾ

ಉತ್ಸವ ನಡೆಸಲು ಮಾತ್ರ ಹಿಂದೇಟು ಹಾಕಲಾಗಿದೆ. ಈ ಯೋಜನೆ ಬಗ್ಗೆ ‘ಪ್ರಜಾವಾಣಿ’ ವಿಚಾರಿಸಿದಾಗ ‘ಈ ಬಗ್ಗೆ ಇನ್ನೂ ಯೋಜನೆ ಮಾಡಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಟಿಎಚ್‌ಎಂ ಕುಮಾರ್‌ ಪ್ರತಿಕ್ರಿಯೆ ನೀಡಿದರು.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಹೇಗಿರಬೇಕು ಎನ್ನುವ ಬಗ್ಗೆ ಸಂಪೂರ್ಣ ಸಿದ್ಧಪಟ್ಟಿಯೊಂದನ್ನು ಸುತ್ತೋಲೆ ಯೊಂದಿಗೆ ಕೊಡಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ₨ 20 ಸಾವಿರ, ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ₨ 15 ಸಾವಿರ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕ್ರಮಕ್ಕೆ ₨ 5 ಸಾವಿರ ಮೊತ್ತವನ್ನು ‘ಐಇಸಿ’ ಅನುದಾನದಲ್ಲಿ ಭರಿಸಬೇಕು ಎಂದು ತಿಳಿಸಲಾಗಿದೆ. ಡಿ. 30ರವ ರೆಗಿನ ನಿಗದಿತ ಅವಧಿ ಮುಗಿದಿದ್ದರೂ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಇನ್ನು ಕೆಲಸ ಕೈಗೊಂಡಿಲ್ಲ.ಅಭಿಯಾನದ ಸ್ಥಿತಿಗತಿ: ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ವೈಯಕ್ತಿಯ ಶೌಚಾಲಯ, ಸಾಮೂಹಿಕ ಶೌಚಾಲಯ, ಅಂಗನವಾಡಿ ಶೌಚಾಲಯ ಹಾಗೂ ಶಾಲಾ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಈ ಯೋಜನೆ ಅಡಿಯಲ್ಲಿ ಪ್ರತಿಯೊಂದು ಗ್ರಾಮವನ್ನು ಬಯಲು ಶೌಚಾಲಯ ಮುಕ್ತಗೊಳಿಸಿ, ನಿರ್ಮಲ ಪರಿಸರ ಕಾಪಾಡುವುದು ಉದ್ದೇಶ ಸರ್ಕಾರದ್ದಾಗಿದೆ.ಡಿ.2, 2013ರ ವರೆಗೂ ಗುಲ್ಬರ್ಗ ಜಿಲ್ಲೆಯಲ್ಲಿ 4,41,990 ವೈಯಕ್ತಿಕ ಶೌಚಾಲಯ ನಿರ್ಮಾಣ ಗುರಿಯಲ್ಲಿ 2,18,713 (ಶೇ 49) ಸಾಧನೆ ಯಾಗಿದೆ. 4024 ಶಾಲಾ ಶೌಚಾಲಯ ನಿರ್ಮಾಣ ಗುರಿ ತಲುಪಲಾಗಿದೆ. 50 ಸಾಮೂಹಿಕ ಶೌಚಾಲಯ ನಿರ್ಮಾಣದ ಪೈಕಿ 27 ನಿರ್ಮಿಸಲಾಗಿದೆ. 2232 ಅಂಗನವಾಡಿ ಶೌಚಾ ಲಯ ನಿರ್ಮಿಸುವ ಗುರಿಯಲ್ಲಿ ಶೇ 99ರಷ್ಟು ಸಾಧನೆಯಾಗಿದೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಬಿಪಿಎಲ್‌ಗಿಂತಲೂ ಎಪಿಎಲ್‌ ಕುಟುಂಬಗಳು ಹಿಂದೆ ಬಿದ್ದಿರುವುದು.ವೈಯಕ್ತಿಕ ಶೌಚಾಲಯ ಬಿಪಿಎಲ್‌ 2,69,726ರ ಪೈಕಿ 1,69,097 ಸಾಧನೆಯಾಗಿದ್ದರೆ, ಎಪಿಎಲ್‌ನಲ್ಲಿ 1,72,264 ಗುರಿಯಲ್ಲಿ 49,616 ಮಾತ್ರ ಸಾಧನೆಯಾಗಿದೆ.ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಬಿಡುಗಡೆ ಗೊಳಿಸಿದ ಅನುದಾನದಲ್ಲಿ ಶೇ 53ರಷ್ಟು ಮಾತ್ರ ಬಳಕೆಯಾಗಿದೆ. ರಾಜ್ಯ ಸರ್ಕಾರದ ಅನುದಾನ ಶೇ 79ರಷ್ಟು ಬಳಕೆಯಾಗಿದೆ.

ಪ್ರತಿಕ್ರಿಯಿಸಿ (+)