ಮಂಗಳವಾರ, ಜನವರಿ 28, 2020
20 °C

ಚಿಂಚೋಳಿ: ರೈತ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ‘ರಾಸಾಯನಿಕ ಮುಕ್ತ ಶುದ್ಧ ಆಹಾರ ಧಾನ್ಯಗಳ ಉತ್ಪಾದನೆಗೆ ರೈತರು ಸಂಕಲ್ಪ ಮಾಡಬೇಕಾದ ತುರ್ತು ಅಗತ್ಯವಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ತಜ್ಞ ಡಾ. ಜಹೀರ್‌ ಅಹಮದ್‌ ತಿಳಿಸಿದರು.ಇಲ್ಲಿನ ರೈತ ಸಂಪರ್ಕ ಕೇಂದ್ರ­ದಲ್ಲಿ ಸೋಮವಾರ ನಡೆದ ರೈತರ ದಿನಾಚರಣೆಯಲ್ಲಿ ಮಾತನಾಡಿದರು.ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಮಾತನಾಡಿ, ‘ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಕೃಷಿಯ ಯಶಸ್ಸಿನಲ್ಲಿ ರೈತರು ಮತ್ತು ಇಲಾಖೆಯ ನಡುವೆ ಸೇತುವೆಯಾಗಿ ಕೆಲಸ ಮಾಡುವ ಅನುವುಗಾರರ ಪಾತ್ರ ಮಹತ್ವದ್ದಾಗಿದೆ’ ಎಂದರು.ಇಕ್ರಿಸ್ಯಾಟನ ಡಾ. ಗೌಸ್‌ ಪಟೇಲ್‌, ಮಾತನಾಡಿದರು. ತಾ.ಪಂ. ಅಧ್ಯಕ್ಷೆ ತಾರಾ­ಮತಿ ಕುಂಬಾರ್‌ ಉದ್ಘಾಟಿಸಿ­ದರು. ಪ.ಪಂ. ಸದಸ್ಯ ಮೊಗಲಪ್ಪ ಕರ­ಕಟಿ,  ಶಿವನಾಗಯ್ಯ ಸ್ವಾಮಿ ಇದ್ದರು.2012–13ನೇ ಸಾಲಿನಲ್ಲಿ ತೊಗರಿ ಬೆಳೆ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟ­ದಲ್ಲಿ ಪ್ರಥಮ ಸ್ಥಾನ ಪಡೆದ ನಾರಾಯಣರೆಡ್ಡಿ, ತೃತೀಯ ಸ್ಥಾನ ಪಡೆದ ನಿಂಗಾರೆಡ್ಡಿ,  ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಕಲಾವತಿ ಕುಲ್ಕರ್ಣಿ ಅವರ ಪರವಾಗಿ ಪತಿ ಭೀಮ­ಶೇನರಾವ್‌ ಕುಲ್ಕರ್ಣಿ ಅವರನ್ನು ಸನ್ಮಾನಿಸಲಾಯಿತು.ಜಾನಕಿಬಾಯಿ ಬಳವಾಟ್‌ ಪ್ರಸ್ತಾವಿ­ಕ­ವಾಗಿ ಮಾತನಾಡಿ ಸ್ವಾಗತಿಸಿ, ಕೃಷಿ ಅಧಿಕಾರಿ ಉದಯಚಂದ್ರ ಮಹಾಗಾಂವ್‌ ನಿರೂಪಿಸಿ, ವೈಜನಾಥ ಮಲಸಾ ವಂದಿಸಿದರು.

ಪ್ರತಿಕ್ರಿಯಿಸಿ (+)