ಶನಿವಾರ, ಜೂನ್ 12, 2021
24 °C

ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಅಫಜಲಪುರ ತಾಲ್ಲೂಕಿನ ನಿಲೂರ ಗ್ರಾಮದ ಮಾದಿಗರ ಬಡಾ ವಣೆಗೆ ಸೌಕರ್ಯ ಒದಗಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮಾದಿಗ ಸಮಾಜದ ಯುವ ಹೋರಾಟಗಾರರ ಸಮಿತಿಯು ಶನಿವಾರ ಮನವಿ ಸಲ್ಲಿಸಿತು.ಗೂಡೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲೂರು ಗ್ರಾಮದ ಪರಿಶಿಷ್ಟ ಮಾದಿಗರ ಬಡಾವಣೆಯಲ್ಲಿ ನೀರಿನ ಅವ್ಯವಸ್ಥೆ, ಒಳಚರಂಡಿ, ಬೀದಿ ದೀಪಗಳು, ಸಿ.ಸಿ.ರಸ್ತೆಗಳು ಇಲ್ಲದೆ ಬಡಾವಣೆಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಮಲತಾಯಿ ದೋರಣೇ ಅನುಸರಿಸು ತ್ತಿದ್ದಾರೆ. ಸತತ ಮೂರು ವರ್ಷಗಳಿಂದ ಮನವಿ ಮಾಡಿಕೊಂಡು ಬಂದರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ.ಆದ್ದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರನ್ನು ಕೂಡಲೇ ಅಮಾನತುಗೊಳಿಸಬೇಕು ಮತ್ತು ಸದರಿ ಸಮಸ್ಯೆಗಳನ್ನು ಬಗೆಹರಿ ಸಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತ ವಿರುದ್ಧ ಹೋರಾಟ ಮಾಡಬೇಕಾಗು ತ್ತದೆ ಎಂದು ಸಮಿತಿಯು ಮನವಿ ಯಲ್ಲಿ ಒತ್ತಾಯಿಸಿದೆ.

ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಶಾ ಎಸ್‌.ದೊಡ್ಮನಿ ನಿಲೂರ, ಮರಲಿಂಗ ಅಣಿಗಿ ಶರಣು ಎಸ್‌.ಸಗರಕರ, ರಾಜು ಎಸ್‌.ಕಟ್ಟಿಮನಿ, ಶ್ರೀನಿವಾಸ ಬಿ. ರಾಮ ನಾಳ, ಬಸವರಾಜ ಜಾಪುರ,ರವಿ ಕೊರಳ್ಳಿ, ಚಂದ್ರಕಾಂತ ಕಟ್ಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.