ಮಂಗಳವಾರ, ಜೂನ್ 15, 2021
26 °C

ವಾಸ್ತುಶಿಲ್ಪ ಮಾದರಿಗಳ ಪ್ರದರ್ಶನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಆರ್ಕಿಟೆಕ್ಚರ್‌ ವಿಭಾಗದಲ್ಲಿ ಇಸ್ಲಾಮಿಕ್‌ ಶೈಲಿಯ ವಾಸ್ತುಶಿಲ್ಪದ 3ಡಿ ಮಾದರಿಗಳು ಹಾಗೂ ಚಿತ್ರಪಟಗಳ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.ವಿಭಾಗದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ 10ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಕುತುಬ್‌ ಮಿನಾರ್‌, ತಾಜ್‌ಮಹಲ್‌, ಫಿರ್ಕಿ ಮಸೀದಿ, ಜುಮ್ಮಾ ಮಸೀದಿ, ಹುಮಾಯೂನ್‌ ಮನೆ ಅವುಗಳಲ್ಲಿ ಪ್ರಮುಖವಾಗಿವೆ. ಪಾರಂಪರಿಕ ಕಟ್ಟಡಗಳ ರಚನೆ, ವಿನ್ಯಾಸ ಗಮನ ಸೆಳೆಯುತ್ತಿವೆ. ಪ್ರತಿ ಮಾದರಿ ಕುರಿತು ವಿಭಾಗದ ವಿದ್ಯಾರ್ಥಿಗಳು ಕಿರುಪರಿಚಯ ಮಾಡಿಕೊಡುತ್ತಿದ್ದಾರೆ. 2 ದಿನಗಳ ಪ್ರದರ್ಶನ ಬುಧವಾರ ಮುಕ್ತಾಯವಾಗಲಿದೆ.ಬೆಳಿಗ್ಗೆ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಶರದ್‌ ರಾಂಪುರೆ ಪ್ರದರ್ಶನ ಉದ್ಘಾಟಿಸಿದರು.

‘ನಮ್ಮ ವಿದ್ಯಾರ್ಥಿಗಳೇ ಈ ಪ್ರದರ್ಶನದ ರೂವಾರಿ ಗಳು. ಅಧ್ಯಯನದ ಭಾಗವಾಗಿ ಪ್ರತಿವರ್ಷ ನಿರ್ದಿಷ್ಟ ಪರಿಕಲ್ಪನೆ ಆಧರಿಸಿ ಇಂತಹ ಪ್ರದರ್ಶನ ಹಮ್ಮಿಕೊಳ್ಳು ತ್ತೇವೆ. ಈ ಬಾರಿ ಇಸ್ಲಾಮಿಕ್‌ ವಾಸ್ತುಶಿಲ್ಪ ಆಧರಿಸಿ ಗುಲ್ಬರ್ಗ ಹಾಗೂ ದೆಹಲಿಯಲ್ಲಿ ನಿರ್ಮಾವಾದ ಸ್ಮಾರಕಗಳ ಮಾದರಿಗಳ ಪ್ರದರ್ಶನ ಏರ್ಪಡಿಸಿದ್ದೇವೆ’ ಎಂದು ವಿಭಾಗದ ಮುಖ್ಯಸ್ಥೆ  ಪರಂಜ್ಯೋತಿ ಆರ್‌. ಪಾಟೀಲ್‌ ತಿಳಿಸಿದರು.ಪ್ರಭಾರಿ ಪ್ರಾಂಶುಪಾಲರಾದ ಎಸ್‌.ಎಸ್‌. ಆವಂತಿ, ಉಪಪ್ರಾಂಶುಪಾಲ ಜಿ.ಕೆ. ಪುರೋಹಿತ್‌, ಮಾರ್ಗರ್ಶಕರಾದ ಪ್ರೊ.ಶಶಿಕಲಾ ಹೆಬ್ಬಾಳ್‌ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.