ಭಾನುವಾರ, ಜೂನ್ 13, 2021
25 °C
ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟನೆ

‘ಉದ್ಯೋಗ ಸೃಷ್ಟಿಗೆ ಜವಳಿ ಉದ್ಯಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಿಂದುಳಿದ ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನಿರುದ್ಯೋಗ ಹೋಗಲಾಡಿಸಲು ಜವಳಿ ಉದ್ಯಮ ಸ್ಥಾಪಿಸುವುದು ವರದಾನವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯುಕ್ತ ಡಾ.ಡಿ.ಎ. ವೆಂಕಟೇಶ ಹೇಳಿದರು.

ನಗರದ ಸನ್‌ ಇಂಟರ್‌ನ್ಯಾಷನಲ್‌ ಹೋಟೆಲ್‌ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಬುಧವಾರ ಆಯೋಜಿಸಿದ್ದ ‘ವಿಭಾಗೀಯ ಮಟ್ಟದ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರ್ಕಾರ ಜವಳಿ ಉದ್ಯಮವನ್ನು ಪ್ರೋತ್ಸಾಹಿ ಸುವುದಕ್ಕಾಗಿ ನೂತನ ಜವಳಿ ನೀತಿ ಜಾರಿಗೊಳಿಸಿದ್ದು, ಯಾರು ಬೇಕಾದರೂ ಉದ್ಯಮ ಆರಂಭಿಸಬಹು ದಾಗಿದೆ. ಈ ಭಾಗದಲ್ಲಿ ಮಾನವ ಸಂಪನ್ಮೂಲ ಹಾಗೂ ಕಚ್ಚಾ ಸಾಮಗ್ರಿಗಳು ಲಭ್ಯವಿದೆ. ಬಂಡವಾಳ ತೊಡಗಿಸಿ ಉದ್ಯಮ ಆರಂಭಿಸಿದರೆ, ಖಂಡಿತ ವಾಗಿಯೂ ಲಾಭ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.ಜವಳಿ ಉದ್ಯಮದಲ್ಲಿ ದೇಶದಲ್ಲೆ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಹಿಂದಿನ ಜವಳಿ ನೀತಿ ಅವಧಿ ಯಲ್ಲಿ 700 ನೂತನ ಉದ್ಯಮಗಳು ರಾಜ್ಯಕ್ಕೆ ಬಂದಿವೆ. 1.27 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ. ಚೀನಾ ಹಾಗೂ ಬಾಂಗ್ಲಾದೇಶಗಳಲ್ಲಿ ಜವಳಿ ಉದ್ಯಮ ಮುಳುಗುತ್ತಿವೆ. ಆದರೆ ಭಾರತದಲ್ಲಿ ಜವಳಿ ಉದ್ಯಮ ಬೆಳೆಯುತ್ತಿದೆ ಎಂದು ಹೇಳಿದರು.ಉದ್ಯಮ ಆರಂಭಿಸಲು ಮುಂದೆ ಬರುವ ಉದ್ಯಮಿ ಗಳಿಗೆ ಪ್ರಸ್ತಾವನೆ ಸಿದ್ಧಪಡಿಸುವುದರಿಂದ ಹಿಡಿದು ಪ್ರತಿಯೊಂದು ತಾಂತ್ರಿಕ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.ಕೈಮಗ್ಗ ಮತ್ತು ಜವಳಿ ಇಲಾಖೆಯ ಹೂಡಿಕೆ ವಿಭಾಗದ ಉಪ ನಿರ್ದೇಶಕ ಗಂಗಯ್ಯ ಮಾತ ನಾಡಿದರು. ಗುಲ್ಬರ್ಗ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ವಾಸುದೇವ ದೊಡ್ಮನಿ ಸ್ವಾಗತಿಸಿದರು. ಅಜಿತ್ ನಾರಾಯಣ ವಂದಿಸಿದರು. ಸೇಡಂ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದ ಮುಖ್ಯಸ್ಥ ಡಿ.ಎಂ.ಹಿಪ್ಪರ್ಗಿ ನಿರೂಪಿಸಿದರು. ಹೈದರಾ ಬಾದ್ ಕರ್ನಾಟಕ ಎಲ್ಲ ಜಿಲ್ಲೆಗಳ ಜವಳಿ ಉದ್ಯಮದಾರರು ಹಾಗೂ ನೆರೆಯ ಸೋಲ್ಲಾಪುರ ಜಿಲ್ಲೆಯ ಉದ್ಯಮಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.