ಶುಕ್ರವಾರ, ಮಾರ್ಚ್ 5, 2021
29 °C

ಉದ್ಯಾನಕ್ಕೆ ಹಸಿರು, ಹೈಟೆಕ್‌ ಸ್ಪರ್ಶ

ಪ್ರಜಾವಾಣಿ ವಾರ್ತೆ/ ಅಬ್ದುಲ್‌ ರೌಫ್‌ ಎನ್‌. Updated:

ಅಕ್ಷರ ಗಾತ್ರ : | |

ಉದ್ಯಾನಕ್ಕೆ ಹಸಿರು, ಹೈಟೆಕ್‌ ಸ್ಪರ್ಶ

ಗುಲ್ಬರ್ಗ: ಗುಲ್ಬರ್ಗದ ಬಾಲಭನವ ಬಳಿ ಇರುವ ಪಾಲಿಕೆ ಉದ್ಯಾನ ಹೈಟೆಕ್‌ ಸ್ಪರ್ಶ ಪಡೆಯುತ್ತಿವೆ. ಉದ್ಯಾನ ಎಂದರೆ ತಂಗಾಳಿ, ಗಿಡಮರಗಳನ್ನು ಒಳಗೊಂಡ ಹುಲ್ಲುಹಾಸು ಎಂಬುವುದರ ಜೊತೆಗೆ ಗ್ರಂಥಾಲಯ, ಜನಜಾಗೃತಿ ಅಂಶಗಳು ಇಲ್ಲಿ ಹಿರಿಯರು, ಪುಟಾಣಿಗಳ ಪ್ರಮುಖ ಆಕರ್ಷಣೆಯಾಗಲಿವೆ.ಹೌದು, ಮಹಾನಗರಪಾಲಿಕೆ ಕಳೆದ ಎರಡೂವರೆ ತಿಂಗಳಿಂದ ಬಾಲಭವನ ಬಳಿಯ ಉದ್ಯಾನವನ್ನು ನವೀಕಕರಿಸುತ್ತಿದೆ. ಇದರೊಂದಿಗೆ  ಇಲ್ಲಿನ ಬಯಲು ರಂಗಮಂದಿರ, ಪಾಳು ಬಿದ್ದ ಗ್ರಂಥಾಲಯಗಳಿಗೂ ನವೀಕರಣ ಭಾಗ್ಯ ದೊರೆತಿರುವುದು ಇಲ್ಲಿನ ವಿಶೇಷ.ನಗರದ ಬಾಲ ಭವನದ ಹಿಂಭಾಗದಲ್ಲಿರುವ ಉದ್ಯಾನ ಉದ್ಯಾನದ ಒಳ ಭಾಗದಲ್ಲಿ ಹುಲ್ಲು ಹಾಸು ಹಾಕುತ್ತಿದ್ದಾರೆ.  ಗೋಲ್ಡಾನ್‌ ಫೈಕಾಸ್‌, ಬ್ಲ್ಯಾಕ್‌ಲ್ಯಾಂಡ್‌ಮನ್‌, ಗೋಲ್ಡನ್‌ ಬಾರ್ಡರ್‌, ಕೆನಾರ್ಸ್‌, ಸಿಂಗೋನಿಯಮ್‌, ಅಖಿಲೇಪ ಮುಂತಾದ ವಿವಿಧ ರೀತಿಯ ಗಿಡಗಳು ಉದ್ಯಾನದಲ್ಲಿ ಕಂಗೊಳಿಸುತ್ತಿವೆ. ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ಹುಲ್ಲಿನ ಹಾಸನ್ನು ತಂದು ಉದ್ಯಾನವನ್ನು  ಸುಂದರಗೊಳಿಸಲಾಗುತ್ತಿದೆ.ವಿಜಯ ದುರ್ಗ ನರ್ಸರಿ  ಸುಮಾರು ₨ 6ಲಕ್ಷ ಮೊತ್ತಕ್ಕೆ ಈ ಉದ್ಯಾನ ನವೀಕರಣದ  ಗುತ್ತಿಗೆ ಪಡೆದು ಕಾಮಗಾರಿ ಕೊನೆಯ ಹಂತದಲ್ಲಿದೆ. ಬೀಜಗಳ ಬಿತ್ತನೆ ಮಾಡುವುದರ ಮೂಲಕ ಹಾಸನ್ನು ಸಿದ್ಧಪಡಿಸಬೇಕಾಗಿತ್ತು. ಆದರೆ ಇಲ್ಲಿ ಸಿದ್ಧ ಹುಲ್ಲು ಹಾಸನ್ನು ತಂದು ಹಾಕಲಾಗುತ್ತಿದೆ. ಎರಡು ಅಡಿ ಗಾತ್ರದ ಒಂದು ಹುಲ್ಲು  ಹಾಸಿಗೆ ₨ 60ರೂಪಾಯಿ ಇದೆ.  54 ಸಾವಿರ ಹುಲ್ಲು ಹಾಸು ಪದರಗಳು ಇಲ್ಲಿಗೆ ಅಗತ್ಯವಿದೆ.ಉದ್ಯಾನದಲ್ಲಿ 250 ದೊಡ್ಡ ಮಟ್ಟದ ಗಿಡಗಳು, 250 ಫೈಕಾಸ್‌ ಗೋಲ್ಡನ್‌ ಗಿಡ, 4000 ಸಾವಿರ ಗೋಲ್ಡನ್ ಬಾರ್ಡರ್‌ ಗಿಡ, 2000 ಸಾವಿರ ಕ್ಯಾನಕ್ಸಿ ಗಿಡಗಳು, 4000 ಸಾವಿರ ಅಲಂಕಾರಿಕ ಗಿಡಗಳು ಉದ್ಯಾನದಲ್ಲಿ ಬೆಳಸಲಾಗುತ್ತಿದೆ. ಸಾರ್ವಜನಿಕ ಸಂಚಾರಕ್ಕಾಗಿ ಒಳಗಡೆ ಒಂದೇ ಪಥದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಉದ್ಯಾನದಲ್ಲಿ  ಬೆಳಕಿನ ವ್ಯವಸ್ಥೆಯೂ ಇರುತ್ತದೆ.ಮಹಾನಗರ ಪಾಲಿಕೆಯು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಮತ್ತು ಉದ್ಯಾನ ಬಳಕೆದಾರರ ಮನರಂಜನೆಗಾಗಿ ಬಯಲು ರಂಗಮಂದಿರವನ್ನು ಸಜ್ಜುಗೊಳಿಸಲಾಗುತ್ತಿದೆ. ಕಾರಂಜಿ  ಹಾಗೂ ಮಕ್ಕಳ ಆಟಿಕೆ ವಸ್ತುಗಳನ್ನು ಜೋಡಿಸಿ ಉದ್ಯಾನಕ್ಕೆ ಮೆರಗು ನೀಡಲಾಗುತ್ತಿದೆ. ಇನ್ನು ಒಂದು ತಿಂಗಳಲ್ಲಿ ಉದ್ಯಾನ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಸೌಂದರ್ಯ ಹೆಚ್ಚಿಸಲು ಸಜ್ಜಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.