ಬುಧವಾರ, ಮಾರ್ಚ್ 3, 2021
22 °C

ಮೋದಿ ಪ್ರಧಾನಿ: ಎಲ್ಲೆಡೆ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಪ್ರಧಾನಿ: ಎಲ್ಲೆಡೆ ಸಂಭ್ರಮಾಚರಣೆ

ಗುಲ್ಬರ್ಗ: ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಸೋಮವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಜೆಪಿ ಕಾರ್ಯಕರ್ತರು ಹರ್ಷದ್ಘಾರದೊಂದಿಗೆ ಸಂಭ್ರಮಿಸಿದರು. ಯುವ ಮೋರ್ಚಾದ ಎಲ್ಲ ಜಿಲ್ಲಾ ಘಟಕಗಳ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ ನಮೋ ಬ್ರಿಗೇಡ್‌ ಸದಸ್ಯರು ಹಾಗೂ ಮೋದಿ ಅಭಿಮಾನಿಗಳು ಕೂಡಾ ತಮ್ಮದೇ ಆದ ಶೈಲಿಯಲ್ಲಿ ವಿಜಯೋತ್ಸ ವದ ಸಂಭ್ರಮವನ್ನು ಹೆಚ್ಚಿಸಿದ್ದರು.ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಬೈಕ್‌ ರ್‍ಯಾಲಿಗೆ ಚಾಲನೆ ನೀಡಲಾಯಿತು. ಅನಂತರ ಬೈಕ್‌ ರ್‍ಯಾಲಿಯು ರೈಲ್ವೆ ಸ್ಟೇಷನ್‌ ಮಾರ್ಗವಾಗಿ, ಜಗತ್‌ ವೃತ್‌ದಿಂದ ಸೂಪರ್‌ ಮಾರ್ಕೆಟ್ ತಲುಪಿ ಜನತಾ ಬಜಾರ್‌, ಸಿಟಿ ಬಸ್ ಸ್ಟ್ಯಾಂಡ್‌, ಪೋರ್ಟ್‌ ರಸ್ತೆ ಮೂಲಕ ಸರಾಫ ಬಜಾರ್‌ದಿಂದ  ಮತ್ತೆ ಸೂಪರ್‌ ಮಾರ್ಕೆಟ್‌ ಬಳಿ ಮುಕ್ತಾಯಗೊಂಡಿತು.ಎಲ್ಲ ಕಾರ್ಯಕರ್ತರ ಕೈಯಲ್ಲಿ ಭಗವಾಧ್ವಜ ಗಳು ರಾರಾಜಿದವು. ‘ಭಾರತ ಮಾತಾ ಕೀ ಜೈ’ ‘ವಂದೇ ಮಾತರಂ’ ಘೋಷಣೆಗಳನ್ನು ರ್‍್ಯಾಲಿ ಯುದ್ದಕ್ಕೂ ಮೊಳಗಿಸಿದರು. ರ್‍ಯಾಲಿಯುದ್ದಕ್ಕೂ ವಾದ್ಯಗಳ ಸದ್ದು ಮೊಳಗಿತು. ವಾದ್ಯಗಳ ಸದ್ದಿಗೆ ಕಾರ್ಯಕರ್ತರು ಹೆಜ್ಜೆಹಾಕಿ ಸಂಭ್ರಮಿಸಿದರು.ಟೆಂಪೊ ವ್ಯಾನ್‌ನಲ್ಲಿದ್ದ ಕುಳಿತು ಮಹಿಳಾ ಕಾರ್ಯಕರ್ಯರು ಕೂಡಾ ವಿಜಯೋತ್ಸವ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕಾರ್ಯ ಕರ್ತರು ಪರಸ್ಪರ ಸಿಹಿಹಂಚಿ ಸಂಭ್ರಮಿಸಿದರು. ಬಿಜೆಪಿ ಯುವ ಮೋರ್ಚಾ ಗುಲ್ಬರ್ಗ ದಕ್ಷಿಣ ಘಟಕದ ಅಧ್ಯಕ್ಷ ಪ್ರವೀಣ ತೆಗನೂರ್‌ ಮತ್ತು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ನಸಲವಾಯಿ ಅವರು ಬೈಕ್‌ ರ್‍ಯಾಲಿಯ ನೇತೃತ್ವ ವಹಿಸಿದ್ದರು.ಎಸ್‌.ಬಿ. ಪಾಟೀಲ ಪೆಟ್ರೊಲ್‌ ಪಂಪ್‌ ಹತ್ತಿರ ಬಿಜೆಪಿ ಕಾರ್ಯಕರ್ತರ ಇನ್ನೊಂದು ಗುಂಪು ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿದರು. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಬಿಜೆಪಿ ಮುಖಂಡರು ಘೋಷಣೆಗಳು ಕೂಗುವ ಮೂಲಕ ಹಾಗೂ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ಜಿ. ನಮೋಶಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿದ್ದಾರ್ಥ ಬಸರಿಗಿಡ, ಗಣೇಶ ಬೆಳಮಗಿ ಮತ್ತಿತರರು ಪಾಲ್ಗೊಂಡಿದ್ದರು.3 ಕಿ.ಮೀ. ಪಟಾಕಿ ಸುಟ್ಟ ಕಾರ್ಯಕರ್ತರು

ಸೇಡಂ: ದೇಶದ 15ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸು ತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರು 3.ಕಿ.ಮೀ. ವರೆಗೆ ಪಟಾಕಿ ಸುಟ್ಟು ಸೋಮವಾರ ಸಂಭ್ರಮಿಸಿದರು. ಮೋದಿ ಭಾವಚಿತ್ರ ಹೊಂದಿದ್ದ ವಾಹನ ದೊಂದಿಗೆ ಕಾರ್ಯಕರ್ತರು ಗುಲ್ಬರ್ಗ ಕ್ರಾಸ್‌ನಿಂದ ಜಯಘೋಷ ಕೂಗುತ್ತಾ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮುಖ್ಯರಸ್ತೆ ಮಾರ್ಗವಾಗಿ ಚೌರಸ್ತಾದವರೆಗೆ ಮೆರವಣಿಗೆ ನಡೆಸಿದರು. ನಂತರ ಪರಸ್ಪರ ಸಿಹಿಹಂಚಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.