ಮಂಗಳೂರು: ತಮಿಳುನಾಡಿನ ಈರೋಡ್ನಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಬಾಲಕಿಯರ ವಿಭಾಗದ ಪ್ರಶಸ್ತಿ ಕರ್ನಾಟಕ ಗೆದ್ದುಕೊಂಡಿತು. ಬಾಲಕರ ತಂಡ ರನ್ನರ್ ಅಪ್ ಆಯಿತು.

ಭಾರತ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಆಯೋಜಿಸಿದ್ದ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಕರ್ನಾಟ ಬಾಲಕಿಯರು ಕಳೆದ ಬಾರಿಯ ಚಾಂಪಿಯನ್ ತಮಿಳುನಾಡು ವಿರುದ್ಧ 35–25, 35–31ರಲ್ಲಿ ಮಣಿಸಿದರು. ಸೆಮಿಫೈನಲ್ನಲ್ಲಿ ರಾಜ್ಯ ತಂಡ ಆಂಧ್ರಪ್ರದೇಶ ವಿರುದ್ಧ 35–28, 33–35, 35-20ರಲ್ಲಿ ಜಯ ಗಳಿಸಿತು.

ರಾಜ್ಯ ಬಾಲಕರ ತಂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಮಿಳುನಾಡು ಎದುರು 26–35, 27–35ರಲ್ಲಿ ಸೋತಿತು. ಸೆಮಿಫೈನಲ್ನಲ್ಲಿ ರಾಜ್ಯ ತಂಡ ಆಂಧ್ರಪ್ರದೇಶ ವಿರುದ್ಧ ಜಯ ಗಳಿಸಿತ್ತು. ಬಾಲಕಿಯರ ತಂಡದ ನಾಯಕಿ ಗೀತಾ ಹಾಗೂ ಶುಭಶ್ರೀ, ಬಾಲಕರ ತಂಡದ ಚರಣ್ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ಗಳಿಸಿದರು ಎಂದು ರಾಜ್ಯ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.