ಬ್ಯಾಂಕಾಕ್: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿ ದೇವಿಕಾ ಸಿಹಾಗ್ ಅವರು ಭಾನುವಾರ ಥಾಯ್ಲೆಂಡ್ ಮಾಸ್ಟರ್ಸ್ ಫೈನಲ್ನಲ್ಲಿ ಜಯಿಸುವ ಮೂಲಕ ಚೊಚ್ಚಲ ಬಿಡಬ್ಲ್ಯೂಎಫ್ ಸೂಪರ್ 300 ಕಿರೀಟ ಮುಡಿಗೇರಿಸಿಕೊಂಡರು.

ಹರಿಯಾಣದ ದೇವಿಕಾ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ 21-8, 6-3ರಲ್ಲಿ ಮುನ್ನಡೆಯಲ್ಲಿದ್ದಾಗ ಮಲೇಷ್ಯಾದ ಗೋ ಜಿನ್ ವೀ ಅವರು ಮಂಡಿರಜ್ಜು ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಇದರೊಂದಿಗೆ 20 ವರ್ಷದ ದೇವಿಕಾ ವೃತ್ತಿಜೀವನದ ಪ್ರತಿಷ್ಠಿತ ಪ್ರಶಸ್ತಿಗೆ ಮುತ್ತಿಕ್ಕಿ, ₹17.19 ಲಕ್ಷ ಬಹುಮಾನ ಗೆದ್ದುಕೊಂಡರು. ಈ ಟೂರ್ನಿಯು ಒಟ್ಟು ₹2.29 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿತ್ತು.

ಪ್ರಸ್ತುತ ವಿಶ್ವ ರ್ಯಾಂಕಿಂಗ್ನಲ್ಲಿ 63ನೇ ಸ್ಥಾನದಲ್ಲಿರುವ ದೇವಿಕಾ ಅವರು ಬೆಂಗಳೂರಿನ ಪಡುಕೋಣೆ –ದ್ರಾವಿಡ್ ಶ್ರೇಷ್ಠತಾ ಕೇಂದ್ರದಲ್ಲಿ ಕೋಚ್ ಉಮೇಂದ್ರ ರಾಣಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. 2025ರಲ್ಲಿ ಮಲೇಷ್ಯಾ ಇಂಟರ್ನ್ಯಾಷನಲ್ನಲ್ಲಿ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದ ದೇವಿಕಾ, ಅದೇ ವರ್ಷ ಜಾಗತಿಕ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತ ಮಿಶ್ರ ತಂಡದ ಭಾಗವಾಗಿದ್ದರು.

ಕಳೆದ ಋತುವಿನಲ್ಲಿ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಸೂಪರ್ 100 ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು. 2024ರಲ್ಲಿ ಸ್ವೀಡಿಷ್ ಓಪನ್ ಮತ್ತು ಪೋರ್ಚುಗಲ್ ಇಂಟರ್ನ್ಯಾಷನಲ್ನಲ್ಲಿ ಪ್ರಶಸ್ತಿ ಗೆದ್ದರೆ, ಎಸ್ಟೋನಿಯನ್ ಇಂಟರ್ನ್ಯಾಷನಲ್ ಮತ್ತು ಡಚ್ ಇಂಟರ್ನ್ಯಾಷನಲ್ನಲ್ಲಿ ಎರಡನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದರು.

ಫೈನಲ್ ಪ್ರವೇಶದ ಹಾದಿಯಲ್ಲಿ ತಮಗಿಂತ ಉನ್ನತ ಕ್ರಮಾಂಕದ ಆಟಗಾರ್ತಿಯರಿಗೆ ದೇವಿಕಾ ಆಘಾತ ನೀಡಿದ್ದರು. ನಾಲ್ಕು ದೀರ್ಘ ಪಂದ್ಯಗಳನ್ನು ಆಡಿದ್ದ ಅವರು ದಣಿದಂತೆ ಕಾಣುತ್ತಿದ್ದರು. ಆದರೆ, ಆಕರ್ಷಕ ಡೀಪ್ ರಿಟರ್ನ್ಗಳ ಮೂಲಕ ಆರಂಭದಲ್ಲೇ 4–0 ಮುನ್ನಡೆ ಸಾಧಿಸಿದರು. ಅಲ್ಲದೆ, ಕ್ರಾಸ್ ಕೋರ್ಟ್ ಮತ್ತು ನೇರ ಸ್ಮ್ಯಾಷ್ಗಳನ್ನು ಪ್ರಯೋಗಿಸುವ ಮೂಲಕ ಎದುರಾಳಿ ಆಟಗಾರ್ತಿಯನ್ನು ತಬ್ಬಿಬ್ಬುಗೊಳಿಸಿದರು.

ಮೊದಲ ಗೇಮ್ ಅನ್ನು ನಿರಾಯಾಸವಾಗಿ ಗೆದ್ದ ದೇವಿಕಾ ಅವರು ಎರಡನೇ ಗೇಮ್ನಲ್ಲಿ ಮೂರು ಅಂಕಗಳ (6–3) ಮುನ್ನಡೆಯಲ್ಲಿದ್ದಾಗ ಮಲೇಷ್ಯಾದ ಆಟಗಾರ್ತಿ ಅಸ್ವಸ್ಥತೆಯಿಂದ ಬಳಲಿದಂತೆ ಕಂಡರು. ಅಂತಿಮವಾಗಿ ಪಂದ್ಯವನ್ನು ತ್ಯಜಿಸಲು ಅವರು ನಿರ್ಧರಿಸಿದರು. ಎರಡು ಬಾರಿಯ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದ ಗೋ ಅವರು ವಿಶ್ವ ರ್ಯಾಂಕಿಂಗ್ನಲ್ಲಿ 68ನೇ ಸ್ಥಾನ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.