ಉಗ್ರರ ದಾಳಿ: ಕಳೆದ ವರ್ಷ ಪಾಕ್‌ನಲ್ಲಿ 595 ಮಂದಿ ಸಾವು

7

ಉಗ್ರರ ದಾಳಿ: ಕಳೆದ ವರ್ಷ ಪಾಕ್‌ನಲ್ಲಿ 595 ಮಂದಿ ಸಾವು

Published:
Updated:

ಇಸ್ಲಾಮಾಬಾದ್‌: 2018ರಲ್ಲಿ ಉಗ್ರರು ಪಾಕಿಸ್ತಾನದಲ್ಲಿ 262 ಬಾರಿ ದಾಳಿ ನಡೆಸಿದ್ದು, ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ 595 ಮಂದಿ ಸಾವನ್ನಪ್ಪಿದ್ದಾರೆ. ಉಗ್ರರ ದಾಳಿಯಲ್ಲಿ 1,030 ಮಂದಿ ಗಾಯಗೊಂಡಿದ್ದಾರೆ.

ಕಾನೂನು ಹಾಗೂ ಭದ್ರತಾ ಸಿಬ್ಬಂದಿ ಗುರಿಯಾಗಿಸಿಕೊಂಡು ಬಹುತೇಕ ದಾಳಿಗಳು ನಡೆದಿದ್ದು, ರಾಜಕೀಯ ಮುಖಂಡರು ಹಾಗೂ ಕಾರ್ಮಿಕರ ಹತ್ಯೆಯ ಭೀತಿ ಇತ್ತು.

ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಇಸ್ಲಾಮಾಬಾದ್‌ ಮೂಲದ ‘ಪಾಕ್‌ ಪೀಸ್ ಇನ್ಸಿಟಿಟ್ಯೂಟ್‌’ ಸಂಸ್ಥೆಯು(ಪಿಐಪಿಎಸ್‌)
2018ರಲ್ಲಿ ನಡೆದ ದಾಳಿ ಕುರಿತಾದ ವರದಿಯನ್ನು ಸಿದ್ಧಪಡಿಸಿದೆ. 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !