ಶುಕ್ರವಾರ, ಮಾರ್ಚ್ 5, 2021
29 °C

ಪುರಸಭೆ: ಕೈಕೈ ಮಿಲಾಯಿಸಿದ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಸಭೆ: ಕೈಕೈ ಮಿಲಾಯಿಸಿದ ಸದಸ್ಯರು

ಆಳಂದ: 2015–16ನೇ ಸಾಲಿನ ಆಯವ್ಯಯ ಮಂಡನೆ ಮತ್ತು ವಿವಿಧ  ಕ್ರಿಯಾಯೋಜನೆಗಳ ಅನುಮೋದನೆಗೆ ಸೋಮವಾರ ಸೇರಿದ್ದ ಪುರಸಭೆ ಸಾಮಾ ನ್ಯಸಭೆಯಲ್ಲಿ ಸದಸ್ಯರಿಬ್ಬರು ವಾಗ್ವಾದ ಕ್ಕಿಳಿದು, ಪರಸ್ಪರ ಕೈಕೈ ಮಿಲಾಯಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಅಧ್ಯಕ್ಷ ಅಮ್ಜದ ಅಲಿ ಕರ್ಜಗಿ ಅಧ್ಯಕ್ಷತೆಯ ಸಭೆಯಲ್ಲಿ ಸದಸ್ಯ ಸೈಪಾನ ಸಾಬ ಜವಳಿ ಅವರು, ‘ತಮ್ಮ ವಾರ್ಡ್‌ನ ಅಭಿವೃದ್ಧಿಪಡಿಸುವಲ್ಲಿ ಆಡಳಿತರೂಢ ಪಕ್ಷದಿಂದ ತಾರತಮ್ಯ ಮಾಡಲಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಿಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅನುದಾನ ಆಡಳಿತ ಪಕ್ಷದ ಸದಸ್ಯರ ವಾರ್ಡ್‌ಗೆ ಮಾತ್ರ ಬಳಕೆ ಯಾಗುತ್ತಿದೆ’ ಎಂದು ಆರೋಪಿಸಿದರು.ಈ ವಾದಕ್ಕೆ ಸದಸ್ಯ ಲಿಂಗರಾಜ ಪಾಟೀಲ, ಆರೀಪ ಲಾಡಕ, ಕಬಿರಾ ಬೇಗಂ ಸಹ ದನಿಗೂಡಿಸಿದರು. 23ನೇ ವಾರ್ಡ್‌ನ ಸದಸ್ಯ ಅಜಗರಲಿ ಹವಾಲ್ದಾರ ಮಧ್ಯಪ್ರವೇಶಿಸಿ, ಸದಸ್ಯ ಸೈಪಾನ ಜವಳಿ ನಡುವೆ ಮಾತಿನ ಚಕಮಕಿ ನಡೆಸಿದರು. ವಾಗ್ವಾದ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಕೂಗಾಟಟದಿಂದ ಮಹಿಳಾ ಸದಸ್ಯರು ಸೇರಿದಂತೆ ಎಲ್ಲರೂ ಕೆಲಕಾಲ ಆತಂಕಕ್ಕೆ ಒಳಗಾದರು.ಹಿರಿಯ ಸದಸ್ಯ ಮಲ್ಲಿನಾಥ ಹತ್ತರಕಿ, ಅಧ್ಯಕ್ಷ ಕರ್ಜಗಿ, ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ ಸದಸ್ಯ ಜವಳಿ ಅವರನ್ನು ಸಮಾಧಾನಪ ಡಿಸಿದರು. ನಂತರ ಸದಸ್ಯ ಹವಾಲ್ದಾರ ಕ್ಷಮೆ ಯಾಚಿಸುವ ಮೂಲಕ ಸಮಸ್ಯೆ ಬಗೆಹರಿಯಿತು.ತಾ.ಪಂ ಸಭಾಂಗಣದಲ್ಲಿ ಸಭೆ ಆರಂ ಭದ ನಂತರ ಸಭೆಯ ಗೊತ್ತುವಳಿ ಹಾಗೂ ಕ್ರಿಯಾಯೋಜನೆ ಅನುಮೋ ದನೆಗೆ ಲೆಕ್ಕಾಧಿಕಾರಿ ಅಂಬಾರಾಯ ಲೋಕಾಣೆ ಸದಸ್ಯರನ್ನು ಕೋರಿದರು. ಆದರೆ, ಸಭೆಯಲ್ಲಿ ಕ್ರಿಯಾಯೋಜನೆ ಬಗೆಗೆ ಯಾವುದೇ ಚರ್ಚೆಗಳ ನಡೆಯ ಲಿಲ್ಲ. ಸದಸ್ಯರು ತಮ್ಮ ವಾರ್ಡ್‌ನ ಸಮಸ್ಯೆ ಬಗೆಹರಿಸುವಂತೆ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದರು.ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ಮೇಲೆ ನಿರಂತರವಾಗಿ ಪ್ರಶ್ನೆಗಳ ಸುರಿ ಮಳೆಯಿಂದ ಸಭೆ ಗೊಂದಲದ ಗೂಡಾ ಯಿತು. ಕೆಜೆಪಿ ಸದಸ್ಯರು, ನಾಮ ನಿರ್ದೇಶನಗೊಂಡ ಸದಸ್ಯರು ಸೇರಿದಂತೆ ಆಡಳಿತದಲ್ಲಿರುವ ಸದಸ್ಯರು ಸಹ ತಮ್ಮ ವಾರ್ಡ್‌ಗಳಲ್ಲಿ ಸಮಸ್ಯೆಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಆಪಾದಿಸಿದರು.ನೀರು, ಸ್ವಚ್ಛತೆ ಮತ್ತು ಹೈಮಾಸ್ಟ್ ಬೀದಿದೀಪ ದುರಸ್ತಿ, ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅಧ್ಯಕ್ಷ ಕರ್ಜಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ತರಾತುರಿಯಲ್ಲಿ ರೂ13.9 ಕೋಟಿ ವೆಚ್ಚದ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿ ಅನುಮೋದನೆ ಪಡೆಯಲಾ ಯಿತು. ಎಸ್ಎಫ್‌ಸಿ ಯೋಜನೆಯಡಿ 2015–16ನೇ ಸಾಲಿನ ರೂ2.65ಕೋಟಿ ಅನುದಾನದ ಕ್ರಿಯಾಯೋಜನೆ ಮಂಜೂರಾತಿಗೆ ಮಂಡನೆ, ಕುಡಿಯುವ ನೀರು ಸರಬರಾಜಿಗಾಗಿ ಆಯಾ ವಾರ್ಡ್‌ ನಲ್ಲಿ ರೂ5 ಲಕ್ಷ ವೆಚ್ಚ ಅನುದಾನ ಅನುಮೋದನೆಗೆ ಕಳುಹಿಸಲಾಯಿತು. ಉಪಾಧ್ಯಕ್ಷೆ ಫರ್ಜಾನ್ ಬೇಗಂ ಅನ್ಸಾರಿ, ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ, ಸದಸ್ಯರು ಇದ್ದರು.ಹಲವು ವರ್ಷಗಳಿಂದ ನಮ್ಮ ವಾರ್ಡಿನ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಆಡಳಿತ ಪಕ್ಷದವರ ಪಕ್ಷಪಾತ ಧೋರಣೆಯಿಂದ ಅನುದಾನ ಲಭಿಸುತ್ತಿಲ್ಲ.

ಸೈಪಾನ ಸಾಬ ಜವಳಿ,
ಪುರಸಭೆ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.