ಬೆಂಗಳೂರು: ನಗರ ಜಿಲ್ಲೆಯ ದಕ್ಷಿಣ ತಾಲ್ಲೂಕಿನಲ್ಲಿರುವ ತರಳು ಗ್ರಾಮದ ಒಂದೇ ಕುಟುಂಬ ಏಳು ದಂಪತಿಯು ಒಂದೇ ದಿನ ಷಷ್ಟ್ಯಬ್ದಿ ಆಚರಿಸಿಕೊಂಡಿದ್ದಾರೆ.

ಇಲ್ಲಿನ ದಿವಂಗತ ಶಂಕರನಾರಾಯಣ ರಾವ್ ಮತ್ತು ದಿವಂಗತ ಪಾರ್ವತಿ ಶಂಕರ್ ಅವರ ಆರು ಹೆಣ್ಣುಮಕ್ಕಳು ಮತ್ತು ಅಳಿಯಂದಿರು, ಒಬ್ಬ ಮಗ ಹಾಗೂ ಸೊಸೆ ಈಚೆಗೆ ಒಂದೇ ದಿನ ಷಷ್ಟ್ಯಬ್ದಿ ಆಚರಿಸಿದ್ದಾರೆ.

‘ಈ ಕುಟುಂಬದ 14 ಮಂದಿಗೂ 60 ವರ್ಷ ದಾಟಿದ್ದು ರಾಜ್ಯ, ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲಿ ನೆಲಸಿದ್ದಾರೆ. ಎಲ್ಲರೂ ಪ್ರತ್ಯೇಕವಾಗಿ ಷಷ್ಟ್ಯಬ್ದಿ ಆಚರಿಸುವ ಬದಲಿಗೆ, ಒಂದೇ ಬಾರಿ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಅದರಂತೆ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಟುಂಬದ ಎಲ್ಲರೂ ಜತೆಗೂಡಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದೆವು’ ಎಂದು ಡಾ.ಲಕ್ಷ್ಮೀ ನಾರಾಯಣಪ್ಪ ಅವರು ತಿಳಿಸಿದ್ದಾರೆ.

ರಂಗನಾಯಕಿ–ಲಕ್ಷ್ಮೀ ನಾರಾಯಣಪ್ಪ, ಸುಜಾತ–ಸುಧರ್ಮ, ಸುಧಾ–ರಂಗಸ್ವಾಮಿ, ಮಧುಮತಿ–ಮುರಳೀಧರ್, ಮೀನಾ–ಸುಬ್ಬುರಾವ್, ಕಲ್ಯಾಣಿ–ಸತೀಶ್ ಮತ್ತು ಲತಾ–ಜಗದೀಶ ರಾಜೇ ಅರಸ್ ಅವರು ಷಷ್ಟ್ಯಬ್ದಿ ಆಚರಿಸಿಕೊಂಡ ದಂಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.