ಶನಿವಾರ, ಮಾರ್ಚ್ 6, 2021
19 °C
ಬೀದಿರಂಗ ದಿನ: ಶಂಕರಯ್ಯ ಆರ್.ಘಂಟಿ ಅಭಿಮತ

ರಂಗ ಚೈತನ್ಯಕ್ಕೆ ಇಂಬುಕೊಟ್ಟ ಸಿಜಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗ ಚೈತನ್ಯಕ್ಕೆ ಇಂಬುಕೊಟ್ಟ ಸಿಜಿಕೆ

ಕಲಬುರ್ಗಿ: ಕಲಾವಿದರು ನಾಟಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇತರರಿಗೆ ಸ್ಫೂರ್ತಿ ನೀಡುವ ವ್ಯಕ್ತಿತ್ವ ಹಾಗೂ ರಂಗ ಚೈತನ್ಯಕ್ಕೆ ಇಂಬು ಕೊಡುವ ಮಹಾನ್ ವ್ಯಕ್ತಿ ಸಿಜಿಕೆ ಎಂದು ಸಂಚಿಸಾರಂಬ ಅಧ್ಯಕ್ಷ ಶಂಕರಯ್ಯ ಆರ್. ಘಂಟಿ ಹೇಳಿದರು.ನಗರದ ಕನ್ನಡ ಭನದಲ್ಲಿ ಸಂಭ್ರಮ ಕಲಾಕುಟೀರ, ಸಂಸ ಥಿಯೇಟರ್‌ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಿಜಿಕೆ ಅವರ 66ನೇ ಜನ್ಮದಿನಾಚರಣೆ ಅಂಗವಾಗಿ ‘ಸಿಜಿಕೆ ಬೀದಿರಂಗ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಿಜಿಕೆ ಅವರನ್ನು ಸಮಾಜ ಕೀಳಾಗಿ ಕಂಡಾಗ ಮಾನವನಿಗೆ ವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ಬಗ್ಗೆ ತಮ್ಮ ಬೀದಿ ನಾಟಕಗಳಲ್ಲಿ ಶೋಷಣೆಗೆ ಒಳಗಾದ ಜನರಿಗೆ ಜಾಗೃತಿ ಮೂಡಿಸಿ ಅವರಿಗೆ ವೈಯಕ್ತಿಕ ಬದುಕು ರೂಪಿಸಿಕೊಳ್ಳಲು ಚಿಂತನೆಗೆ ಹಚ್ಚಿದ್ದರು.1978–79ರಲ್ಲಿ ಸಮುದಾಯ ಜಾತಾ ನಡೆಸುವ ಮೂಲಕ ಜನರಿಗೆ ಜಾಗೃತಿ ಮೂಡುವ ನಾಟಕಗಳನ್ನು ಮಾಡುತ್ತಿದ್ದರು. ಸಿಜಿಕೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸದೆ ಸಮಾಜದ ಬಗ್ಗೆ ಚಿಂತನೆ ಮಾಡುವಂತ ವಿಶೇಷ ವ್ಯಕ್ತಿತ್ವ ಹೊಂದಿದ್ದರು, ಸಮಯ ಪಾಲನೆಗೆ ಗಮನ ಹರಿಸುತ್ತಿದ್ದರು ಎಂದರು.ಯುವ ಕಲಾವಿದರಿಗೆ ಸ್ಫೂರ್ತಿ ನೀಡುವುದು, ಯುವಕರನ್ನು ರಂಗಭೂಮಿಗೆ ಕರೆತರುವ ಅವರ ಆಸಕ್ತಿ ಅಗಾಧವಾಗಿತ್ತು ಎಂದರು.

ಸಿಜಿಕೆ ರಂಗ ಪುರಸ್ಕೃತ ಹಿರಿಯ ರಂಗಕರ್ಮಿ ದೋತ್ರೆ ಮತಿ ಮಾತನಾಡಿ. ಸಿಜಿಕೆ ಅವರು ನಾಟಕದ ಚಾಪನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಟ್ಟ ಮಹಾನ್ ವ್ಯಕ್ತಿ. ಅವರ ಕಲೆಯ ಆಸಕ್ತಿ ನನ್ನಲ್ಲಿ ಪ್ರಭಾವ ಮೂಡಿಸಿತ್ತು. ನನ್ನ 11ನೇ ವಯಸ್ಸಿನಲ್ಲಿ ರಂಗಭೂಮಿಯ ಬಗ್ಗೆ ಹೆಚ್ಚು ಒಲವು ಹೊಂದಿದ್ದೆ ಎಂದು ಹೇಳಿದರು.ಸಂಭ್ರಮ ಕಲಾ ಕುಟೀರ ಅಧ್ಯಕ್ಷ ಪ್ರೊ.ಕೆ.ಲಿಂಗಪ್ಪ ಮಾತನಾಡಿ, ಇಂದಿನ ಯುವಕರು ನಾಟಕ ರಂಗಭೂಮಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ. ರಂಗಭೂಮಿಯನ್ನು ಸರಿಯಾದ ನಿಟ್ಟಿನಲ್ಲಿ ಕೊಂಡೊಯ್ಯುತ್ತಿಲ್ಲ ಎಂಬುದು ಬೇಸರದ ಸಂಗತಿ. ಯುವ ಕಲಾವಿದರು ಸಮಯಕ್ಕೆ ಹಾಗೂ ರಂಗಭೂಮಿ ಕಲೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಯುವ ಕಲಾವಿದರಿಗೆ ಸಲಹೆ ನೀಡಿದರು.ಪತ್ರಕರ್ತ ಪ್ರಭಾಕರ ಜೋಷಿ ಮಾತನಾಡಿ, ಸಿಜಿಕೆ ಅವರ ಚಿಂತನೆಗಳ ಚಳವಳಿಗಾಗಿ ನೀನಾಸಂ ಬೀದಿ ರಂಗಭೂಮಿಗೆ ಪ್ರೋತ್ಸಾಹ ನೀಡಿತ್ತು. ಬೀದಿ ರಂಗ ಚಟುವಟಿಕೆಗಳು ಬಹಳ ಸವಾಲಾಗಿ ಪರಿಣಮಿಸಿದ್ದವು. ಅಂದು ಅವರ ಕಾಲಜ್ಞಾನಿ ಕನಕ ನಾಟಕ ಅದ್ಭುತವಾಗಿ ಪ್ರದರ್ಶನ ಕಂಡಿತು ಎಂದರು. ಸಂಭ್ರಮ ಕಲಾ ಕುಟೀರ ಕಾರ್ಯದರ್ಶಿ ಬಿ.ವಿ ಚಕ್ರವರ್ತಿ, ಡಾ. ಚಂದ್ರಕಾಂತ ಕೆಳಮನಿ, ಪಿ.ಕೆ.ತಿವಾರಿ, ಚಾಮರಾಜ ದೊಡ್ಡಮನಿ, ಹರಿಕೃಷ್ಣ ಇದ್ದರು. ಶಿವಲೀಲಾ ನಿರೂಪಿಸಿದರು.ಸಿಜಿಕೆ ನೆನಪಿಗಾಗಿ ಅವರ ಹುಟ್ಟುಹಬ್ಬದ ದಿನ ರಂಗ ಪುರಸ್ಕಾರ ನೀಡಲಾಗುತ್ತಿದೆ.  ಈ ವರ್ಷ ದೋತ್ರೆ ಮತಿ ಅವರಿಗೆ ರಂಗ ಪುರಸ್ಕಾರ ನೀಡಲಾಗುತ್ತಿದೆ

ಪ್ರೊ.ಕೆ.ಲಿಂಗಪ್ಪ,
ಸಂಭ್ರಮ ಕಲಾ ಕುಟೀರ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.