ಹೋರಾಟಕ್ಕೆ ಜನಸಾಗರ...

7

ಹೋರಾಟಕ್ಕೆ ಜನಸಾಗರ...

Published:
Updated:
ಹೋರಾಟಕ್ಕೆ ಜನಸಾಗರ...

ಆಳಂದ: ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲ ಹಾಗೂ ವಿಧವಾ ವೇತನ ತಡೆ ಹಿಡಿದ ಸರಕಾರದ ಕ್ರಮ ಖಂಡಿಸಿ ಸಿಪಿಐ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ 4 ದಿನ ಜೀಪ್ ಜಾಥಾ ಹಮ್ಮಿಕೊಂಡು ಇಂದು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಬೆಳಿಗ್ಗೆ ಬಸ್ ನಿಲ್ದಾಣದಿಂದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೆರವಣಿಗೆ ನಡೆಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾ ಮುಲ್ಲಾ ಮಾತನಾಡಿ, ತಾಲ್ಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅನರ್ಹರು ಬೋಗಸ್ ದಾಖಲೆ ಸೃಷ್ಟಿಸಿ ವೇತನ ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗಿದೆ. ಇದಕ್ಕೆ ತಾಲ್ಲೂಕು ಆಡಳಿತವೇ ಕಾರಣ ಎಂದು ದೂರಿದರು.ಸಿಪಿಐನ ತಾಲ್ಲೂಕು ಕಾರ್ಯದರ್ಶಿ ಪ್ರಭುದೇವ ಯಳಸಂಗಿ,  ಮುಖಂಡ ಕಲ್ಯಾಣಿ ತುಕಾಣೆ, ಶ್ರೀಶೈಲ್ ಪಾಟೀಲ, ಫಯಾಜ್ ಹೆಬಳಿ, ದತ್ತಾತ್ರೇಯ ಕಬಾಡೆ ಮಾತನಾಡಿದರು.ಅಪಾರ ಸಂಖ್ಯೆಯಲ್ಲಿ ಜನ ಸೇರಿರುವುದರಿಂದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟುಮಾಡಿತು. ಆಗ ಅಧಿಕಾರಿಗಳ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ಜರುಗಿತು.ತಹಸೀಲ್ದಾರ್ ಡಾ. ನಾಗೇಂದ್ರ ಹೊನ್ನಳ್ಳಿ ಮನವಿ ಸ್ವೀಕರಿಸಿದರು. ಕಲ್ಯಾಣಿ ಅವಟೆ, ಶಂಕರಯ್ಯ ಸ್ವಾಮಿ, ಶ್ರೀಮಂತ ನಡಗೇರಿ, ಆದಪ್ಪ ಬೆಳಾಂ, ವಿಶ್ವನಾಥ ಜಮಾದಾರ, ಪಾಂಡುರಂಗ ಕಾರಬಾರಿ ತುಕಾರಾಮ ಕುಂಬಾರ, ಕಸ್ತೂರಿಬಾಯಿ ಸುತಾರ, ಲಕ್ಷ್ಮಣ ಪಾಟೀಲ ಹಾಗೂ ದಲಿತ ಮುಖಂಡರಾದ ದಯಾನಂದ ಶೇರಿಕಾರ, ಮಲ್ಲಿಕಾರ್ಜುನ ಬೋಳಣಿ, ಶರಣಬಸಪ್ಪ ಕವಲಗಾ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಅಂಗವಿಕಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry